• Home
 • »
 • News
 • »
 • entertainment
 • »
 • Kim Kardashian| ಪತಿ ಕಾನ್ಯೆ ವೆಸ್ಟ್ ಆಲ್ಬಂ ಪ್ರಚಾರ ಮಾಡಿ ಪೇಚಿಗೆ ಸಿಲುಕಿದ ಕಿಮ್ ಕರ್ದಾಶಿಯನ್!

Kim Kardashian| ಪತಿ ಕಾನ್ಯೆ ವೆಸ್ಟ್ ಆಲ್ಬಂ ಪ್ರಚಾರ ಮಾಡಿ ಪೇಚಿಗೆ ಸಿಲುಕಿದ ಕಿಮ್ ಕರ್ದಾಶಿಯನ್!

ಪತಿ ಕಾನ್ಯೆ ವೆಸ್ಟ್ ಆಲ್ಬಂ ಪ್ರಚಾರದಲ್ಲಿರುವ ಕಿಮ್ ಕರ್ದಾಶಿಯನ್!.

ಪತಿ ಕಾನ್ಯೆ ವೆಸ್ಟ್ ಆಲ್ಬಂ ಪ್ರಚಾರದಲ್ಲಿರುವ ಕಿಮ್ ಕರ್ದಾಶಿಯನ್!.

ಆಗಸ್ಟ್ 27 ರಂದು ಸೋಲ್ಜರ್ ಫೀಲ್ಡ್ ನಲ್ಲಿ ಆಲ್ಬಂ ಅಂತಿಮವಾಗಿ ಬಿಡುಗಡೆಯಾಯಿತು. 'ಡೊಂಡಾ' ಈಗಾಗಲೇ ಸ್ಪಾಟಿಫೈ, ಆ್ಯಪಲ್ ಮ್ಯೂಸಿಕ್ ಮುಂತಾದ ಎಲ್ಲಾ ಸಂಗೀತ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿದ್ದು, ಬಿಡುಗಡೆಗೆ ಮುಂಚಿತವಾಗಿ ಸ್ಟ್ರೀಮಿಂಗ್ ವಿಷಯದ ಬಗ್ಗೆ ತುಂಬಾನೇ ಚರ್ಚೆಯಾಯಿತು.

 • Share this:

  ಮಾಡೆಲ್ ಕಿಮ್ ಕರ್ದಾಶಿಯನ್ (Kim Kardashian) ತುಂಬಾ ದಿನಗಳ ನಂತರ ಮತ್ತೆ ಸುದ್ದಿಯಲ್ಲಿ ದ್ದಾರೆ. ಈ ಬಾರಿ ಅವರು ತಮ್ಮ ಪತಿಯ ಆಲ್ಬಂವೊಂದನ್ನು ಪ್ರಚಾರ ಮಾಡಲು ಹೋಗಿ ಸಾಮಾಜಿಕ ಮಾಧ್ಯಮದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಅಮೆರಿಕದ ರಾಪರ್ ಕಾನ್ಯೆ ವೆಸ್ಟ್ ಅವರು ತಮ್ಮ ಹತ್ತನೇ ಸ್ಟುಡಿಯೋ ಆಲ್ಬಂ 'ಡೊಂಡಾ' ಅನ್ನು ಭಾನುವಾರದಂದು ಬಿಡುಗಡೆ ಮಾಡಿದ್ದಾರೆ. ಅವರ ದಿವಂಗತ ತಾಯಿ ಡೊಂಡಾ ವೆಸ್ಟ್ ಅವರ ಹೆಸರಿನ ಈ ಆಲ್ಬಂ ಜುಲೈ 24, 2020 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ವಿಭಿನ್ನ ಕಾರಣಗಳಿಂದಾಗಿ ಬಿಡುಗಡೆ ದಿನಾಂಕ ಒಂದು ವರ್ಷದವರೆಗೆ ವಿಳಂಬವಾಯಿತು.


  ಆಗಸ್ಟ್ 27 ರಂದು ಸೋಲ್ಜರ್ ಫೀಲ್ಡ್ ನಲ್ಲಿ ಆಲ್ಬಂ ಅಂತಿಮವಾಗಿ ಬಿಡುಗಡೆಯಾಯಿತು. 'ಡೊಂಡಾ' ಈಗಾಗಲೇ ಸ್ಪಾಟಿಫೈ, ಆ್ಯಪಲ್ ಮ್ಯೂಸಿಕ್ ಮುಂತಾದ ಎಲ್ಲಾ ಸಂಗೀತ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿದ್ದು, ಬಿಡುಗಡೆಗೆ ಮುಂಚಿತವಾಗಿ ಸ್ಟ್ರೀಮಿಂಗ್ ವಿಷಯದ ಬಗ್ಗೆ ತುಂಬಾನೇ ಚರ್ಚೆಯಾಯಿತು.


  ಕಿಮ್ ಮತ್ತು ಅವರ ಪತಿ ಕಾನ್ಯೆ ವಿವಾಹ ವಿಚ್ಛೇದನೆಯ ಪ್ರಕ್ರಿಯೆಯ ಮಧ್ಯೆದಲ್ಲಿ ಇದ್ದು, ಅವರ ಪತ್ನಿ ಕಿಮ್ ಸಹ ಈ ಆಲ್ಬಂ ಬಿಡುಗಡೆಯ ಪಾರ್ಟಿಗೆ ಬಂದಿದ್ದರು. ಪಾರ್ಟಿಯಲ್ಲಿ ಅತಿಥಿಗಳ ಪಟ್ಟಿಯಲ್ಲಿ ದಿ ವೀಕೆಂಡ್, ಲಿಲ್ ಬೇಬಿ, ಪುಶಾ ಟಿ, ಕಿಡ್ ಕುಡಿ, ಟ್ರಾವಿಸ್ ಸ್ಕಾಟ್, ಲಿಲ್ ಯಾಚಿ, ಜೇ ಇಲೆಕ್ಟ್ರಾನಿಕಾ, ಪ್ಲೇಬೋಯ್ ಕಾರ್ಟಿ ಮುಂತಾದ ಕಲಾವಿದರು ಭಾಗವಹಿಸಿದ್ದರು.


  ಪಾರ್ಟಿಯಲ್ಲಿ ಕಿಮ್ ಅವರು ಕಾನ್ಯೆ ಅವರ ಜೊತೆ ವಿವಾಹದ ಹೊಸ ಉಡುಪಿನೊಂದಿಗೆ ಜೊತೆಯಾಗಿದ್ದು, ಈ ದಿರಿಸು ಎದ್ದು ಕಾಣುತ್ತಿತ್ತು. "ವಿವಾಹದ ದಿರಿಸು ಅವರ ಸಂಬಂಧದ ಸಂಕೇತವಾಗಿತ್ತು ಮತ್ತು ಇಬ್ಬರ ನಡುವೆ ಇನ್ನೂ ತುಂಬಾ ಪ್ರೀತಿ ಇದೆ, ಆದರೆ ಅವರು ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ" ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಕಿಮ್ ತನ್ನ ಪತಿಗೆ ತನ್ನ ಆಲ್ಬಂ ಅನ್ನು ಪ್ರಚಾರ ಮಾಡಲು ಸಹಾಯ ಮಾಡಿದಳು.


  ಇದನ್ನೂ ಓದಿ: Gang Rape| ಜಾರ್ಖಂಡ್​ನಲ್ಲಿ ಬಾಲಕಿಯ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳೂ ಅಪ್ರಾಪ್ತ ಬಾಲಕರೇ!

  ಕಿಮ್ ಆಲ್ಬಂ ಪ್ರಚಾರಕ್ಕಾಗಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಡೊಂಡಾ ಅವರ ವೀಡಿಯೊಗಳನ್ನು ಹಂಚಿಕೊಂಡರು ಮತ್ತು ಪೋಸ್ಟ್ ಮಾಡಿದ ವೀಡಿಯೊದ ಸ್ಕ್ರೀನ್ ಶಾಟ್ ನಲ್ಲಿ ಕಿಮ್ ನಿಜವಾಗಿಯೂ ಆಲ್ಬಂ ಅನ್ನು ಸ್ಟ್ರೀಮ್ ಮಾಡುತ್ತಿರುವಾಗ, ಅದನ್ನು ಮ್ಯೂಟ್‌ನಲ್ಲಿರಿಸಿ ಮಾಡಿದ್ದಾರೆ ಎಂದು ತೋರಿಸಿದೆ.


  ಪರದೆಯ ಕೆಳಭಾಗದಲ್ಲಿ ವಾಲ್ಯೂಮ್ ಬಾರ್ ಅನ್ನು ಶೂನ್ಯಕ್ಕೆ ಹೊಂದಿಸಲಾಗಿದೆ ಎಂಬುದನ್ನು ಅಭಿಮಾನಿಗಳು ಗಮನಿಸಿ, ತಕ್ಷಣವೇ ಕಿಮ್ ಅವರಿಗೆ ಹಾಸ್ಯದ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ನ್ಯೂಸ್18 ಕರ್ದಾಶಿಯನ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳನ್ನು ಪರಿಶೀಲಿಸಿದ್ದು, ಕಿಮ್ ಆಲ್ಬಂ ಶೇರ್ ಮಾಡುವಾಗ ಅದನ್ನು ಮ್ಯೂಟ್‌ನಲ್ಲಿಟ್ಟು ಹಂಚಿಕೊಂಡಿದ್ದಾರೆ.


  ಇದನ್ನೂ ಓದಿ: Explained| ನಟ ಲಿಯೋನಾರ್ಡೋ ಡಿಕಾಪ್ರಿಯೋಗೂ ತಾಲಿಬಾನ್​ಗೂ ಸಂಬಂಧವೇನು? ಈಗ ಆಫ್ಘನ್ ಕ್ಷೌರಿಕರು ಹೆದರುತ್ತಿರುವುದು ಏಕೆ?

  ಕಿಮ್ ನಂತರ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ಆಲ್ಬಂ ಅನ್ನು ತೆಗೆದು ಹಾಕಿದ್ದಾರೆ. ಕಾನ್ಯೆ ಅವರ ಆಲ್ಬಂ 'ಡೊಂಡಾ' 26 ಹಾಡುಗಳನ್ನು ಒಳಗೊಂಡಿದೆ ಮತ್ತು ಇದು 1 ಗಂಟೆ 48 ನಿಮಿಷಗಳ ಅವಧಿಯನ್ನು ಹೊಂದಿದೆ. ಈ ಆಲ್ಬಂ ಅನ್ನು ಗುಡ್ ಮ್ಯೂಸಿಕ್ ಮೂಲಕ ಬಿಡುಗಡೆ ಮಾಡಲಾಯಿತು ಮತ್ತು ಡೆಫ್ ಜಾಮ್ ರೆಕಾರ್ಡಿಂಗ್ಸ್‌ನಿಂದ ವಿತರಿಸಲಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:MAshok Kumar
  First published: