KGF ಅಂದ್ರೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳು ಅಷ್ಟೇ ಅಲ್ಲ ಎಲ್ಲ ವರ್ಗದ ಸಿನಿ ಪ್ರಿಯರು ಹುಚ್ಚೆದ್ದು ಕುಣಿತಾರೆ. ಪಂಚಭಾಷೆಗಳಲ್ಲಿ ರಿಲೀಸ್ ಆದ ಅಪ್ಪಟ ಸ್ಯಾಂಡಲ್’ವುಡ್ ಸಿನಿಮಾ ವಿಶ್ವದಾದ್ಯಂತ ಜನಪ್ರಿಯವಾಗಿದ್ದು ಇತಿಹಾಸ. ಕೆಜಿಎಫ್ ಚಾಪ್ಟರ್ 1 (KGF Chapter-1) ಗಲ್ಲಾಪೆಟ್ಟಿಗೆಯನ್ನು ದೋಚಿದ್ದು ಗೊತ್ತೇ ಇದೆ. ಇದೀಗ ಎಲ್ಲರ ಗಮನ ಕೆಜಿಎಫ್ ಚಾಪ್ಟರ್ 2 (KGF Chapter-2) ಮೇಲಿದೆ. ಇದರ ನಡುವೆಯೇ ಕೆಜಿಎಫ್ ಮೊದಲ ಭಾಗ ಮತ್ತೆ ಮತ್ತೆ ಸದ್ದು ಮಾಡ್ತಾನೇ ಇದೆ. ದಾಖಲೆ ಮೇಲೆ ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 1 ಚಿತ್ರದ ಡೈಲಾಗ್ಸ್, ಸಾಂಗ್, ಫೈಟ್’ಗಳನ್ನು ಅಭಿಮಾನಿ ಸದಾ ನೆನೆಯುತ್ತಲೇ ಇರುತ್ತಾರೆ. ಇದೀಗ ಈ ಸಿನಿಮಾದ ಹಾಡೊಂದು ಆಫ್ರಿಕಾದಲ್ಲೂ ಮೊಳಗುತ್ತಿದೆ.
ಸಾವಿರಾರು ಮೈಲಿ ದೂರದಲ್ಲಿ ರಾಕಿ ಭಾಯ್ ಹವಾ
ಹೌದು, ಸಾವಿರಾರು ಮೈಲಿ ದೂರದಲ್ಲಿರೋ ಆಫ್ರಿಕಾದಲ್ಲಿ ರಾಕಿ ಭಾಯ್ ಹವಾ ಮೊಳಗಿದೆ. ಆಫ್ರಿಕಾದ ಖ್ಯಾತ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರು ಕೆಜಿಎಫ್-1 ಹಾಡಿಗೆ ಸಖತ್ ಆಗಿಯೇ ಕುಣಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಿಲಿ ಡ್ಯಾನ್ಸ್ ನೋಡಿ ಯಶ್ ಅಭಿಮಾನಿಗಳು ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಸಿನಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಕಿಲಿ ‘ಗಲಿ ಗಲಿ ಮೇ’ ಡ್ಯಾನ್ಸ್’ಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್!
ಆಫ್ರಿಕಾದ ತಾಂಜೇನಿಯಾದ ಕಿಲಿ ಪೌಲ್ ಕೆಜಿಎಫ್ ಚಾಪ್ಟರ್ 1ರ ಹಿಂದಿ ಅವತರಣಿಕೆಯ ‘ಗಲಿ ಗಲಿ ಮೇ’ ಹಾಡಿಗೆ ಕುಣಿದಿದ್ದಾರೆ. ಸಿನಿಮಾದಲ್ಲಿ ಯಶ್ ಜೊತೆ ಬಾಲಿವುಡ್ ಬೆಡಗಿ ಮೌನಿ ರಾಯ್ ಹೆಜ್ಜೆ ಹಾಕಿದ್ದರು. ಅದೇ ಹಾಡಿಗೆ ಕಿಲಿ ಸಖತ್ ಆಗಿ ಕುಣಿದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಕಿಲಿ ಪೌಲ್ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ಸ್ ಇದೆ. 13 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಫಾಲೋ ಮಾಡುತ್ತಾರೆ. ಇದೀಗ ಕಿಲಿ ನೃತ್ಯಕ್ಕೆ 13 ಲಕ್ಷಕ್ಕೂಅಧಿಕ ಲೈಕ್ಸ್’ಗಳು ಬಂದಿವೆ. ಇದುವರೆಗೂ 1795ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಕಿಲಿ ನೃತ್ಯ ಇದೇ ಮೊದಲಲ್ಲ
ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ಸಿನಿಮಾಗಳ ಹಾಡಿಗೆ ಈಗಾಗಲೇ ಕಿಲಿ ಹೆಚ್ಚೆ ಹಾಕಿದ್ದಾರೆ. ಇತ್ತೀಚಿಗಷ್ಟೇ ‘ಪುಷ್ಪ’ ಸಿನಿಮಾದ ‘ಊ ಅಂಟಾವಾ ಮಾವ..’ ಹಾಡಿಗೆ ಕಿಲಿ ಹೆಜ್ಜೆ ಹಾಕಿದದರು. ಆ ಮೂಲಕ ಅವರು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈಗ ‘ಕೆಜಿಎಫ್’ ಸಿನಿಮಾದ ‘ಗಲಿ ಗಲಿ ಮೇ’ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ರಾಕಿ ಭಾಯ್ ಸ್ಟೈಲ್’ಗೆ ಫಿದಾ ಆದ ಕಿಲಿ
ಇನ್ನು ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಕಿಲಿಗೆ ತುಂಬಾನೇ ಇಷ್ಟವಂತೆ. ಕೆಜಿಎಫ್ ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿರೋ ಕಿಲಿ, ರಾಕಿ ಭಾಯ್ ಸ್ಟೈಲ್’ಗೆ ಫಿದಾ ಆಗಿದ್ದಾರಂತೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಕಿಲಿ ಬರೆದುಕೊಂಡಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀನಿಧಿ ಶೆಟ್ಟಿ, ಗಲಿ ಗಲಿ ಮೇ ಹಾಡಿಗೆ ಸೊಂಟ ಬಳುಕಿಸಿದ್ದ ಮೌನಿರಾಯ್, ಗಾಯಕಿ ನೇಹಾ ಕಕ್ಕರ್ ಸೇರಿದಂತೆ ಹಲವರನ್ನು ಇನ್ಸ್ಟಾಗ್ರಾಮ್ನಲ್ಲಿ ನೆನಪಿಸಿಕೊಂಡಿದ್ದಾರೆ.
ಇನ್ನು ಕೆಜಿಎಫ್ ಚಾಪ್ಟರ್ ಹಲವು ದಾಖಲೆಗಳನ್ನು ನಿರ್ಮಿಸಿ, ಜನರ ಮನಸ್ಸಲ್ಲಿ ಇಂದಿಗೂ ಚಿರಸ್ಥಾಯಿಯಾಗಿದೆ. ಇದೀಗ ಕೆಜಿಎಫ್ ಚಾಪ್ಟರ್ 2 ಮೇಲೆ ಸಿನಿ ಪ್ರಿಯರ ಕಣ್ಣು ನೆಟ್ಟಿದೆ. ಕೆಜಿಎಫ್ 2 ಬಂದಮೇಲೆ ಮತ್ತೆ ರಾಖಿ ಭಾಯ್ ನದ್ದೇ ಹವಾ ಅಂತ ಯಶ್ ಅಭಿಮಾನಿಗಳು ಸಂಭ್ರಮಿಸ್ತಿದ್ದಾರೆ.
ವರದಿ: ಅಣ್ಣಪ್ಪ ಆಚಾರ್ಯ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ