ಕಾಂತಾರ (Kantara) ಸಿನಿಮಾ (Cinema) ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಜನರು ಕಾಂತಾರ ಸಿನಿಮಾ ಮೋಡಿಗೆ ಒಳಗಾಗಿದ್ದಾರೆ. ಸಿನಿಮಾದ ಹಾಡು, ಸೀನ್, ಡೈಲಾಗ್ (Dialogue)ಬಹಳಷ್ಟು ಜನರಿಗೆ ನಾಲಗೆ ತುದಿಯಲ್ಲಿದೆ. ಅಷ್ಟು ಕ್ರೇಜ್ ಸೃಷ್ಟಿಸಿರುವ ಸಿನಿಮಾ ರೀಲ್ಸ್ ವಿಡಿಯೋ ಮಾಡುವವರನ್ನೂ ಬಿಟ್ಟಿಲ್ಲ. ಯೂಟ್ಯೂಬ್, ಇನ್ಸ್ಟಾಗ್ರಾಮ್ ರೀಲ್ಸ್ ಸೇರಿದಂತೆ ವಿಡಿಯೋ ಮೇಕಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕಾಂತಾರ ಸಿನಿಮಾದ ಆಡಿಯೋ ಕ್ಲಿಪ್ಗಳು ಹರಿದಾಡುತ್ತಿವೆ. ಇದೀಗ ಕಾಂತಾರದ ಕೊನೆಯ ದೃಶ್ಯ, ಪ್ರೇಕ್ಷರಿಗೆ ಗೂಸ್ಬಂಪ್ಸ್ ಕೊಟ್ಟ ಸೀನ್ ವೈರಲ್ ಆಗಿದೆ. ಫೇಮಸ್ ವಿಡಿಯೋ ಮೇಕರ್ ಆಗಿರುವ ಕಿಲಿ ಪೌಲ್ (Kili Paul) ಈ ವೈರಲ್ ಕ್ಲಿಪ್ಗೆ ಲಿಪ್ ಸಿಂಕ್ ಮಾಡಿದ್ದು ಅವರ ವಿಡಿಯೋ ಅಭಿಮಾನಿಗಳಿಗೆ ಮೆಚ್ಚುಗೆಯಾಗಿದೆ.
ಕಾಂತಾರದ ಸೀನ್
ಏಟು ತಿಂದು ನೆಲಕ್ಕೆ ಬೀಳುವ ರಿಷಬ್ ಶೆಟ್ಟಿಯನ್ನು ದೈವ ಬಂದು ಎಬ್ಬಿಸುವ ಒಂದು ಸುಂದರವಾದ ದೃಶ್ಯ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿದೆ.
ಈಗ ಈ ಸಿನಿಮಾ ಸೀನ್ ಅನ್ನು ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ರಿಕ್ರಿಯೇಟ್ ಮಾಡಿದ್ದಾರೆ. ಅವರು ಶಿವನಂತೆ ನೆಲದ ಮೇಲೆ ಬಿದ್ದಿರುವುದನ್ನು ಆಮೇಲೆ ಆವೇಶದಿಂದ ಏಳುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದು.
59 ನಿಮಿಷಗಳ ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಲಾಗಿದ್ದು ಇದಕ್ಕೆ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. 993 ಜನರು ವಿಡಿಯೋ ನೋಡಿ ರಿಯಾಕ್ಟ್ ಮಾಡಿದ್ದು 19 ಸಾವಿರ ವ್ಯೂಸ್ ಗಳಿಸಿದೆ. ನೆಟ್ಟಿಗರು ವಿಡಿಯೋವನ್ನು ತಮ್ಮ ವಾಲ್ನಲ್ಲಿ ಶೇರ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Malavika Avinash: ಆಪ್ತರ ಮದುವೆಯಲ್ಲಿ ಮಾಳವಿಕಾ! ಈ ಸೀರೆ ಕೊಡಿಸಿದ್ದು ಯಾರು ಗೊತ್ತಾ?
ಕಿಲಿ ಪೌಲ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಯಾವುದೇ ಸಿನಿಮಾ, ವಿಡಿಯೋ ವೈರಲ್ ಆದಾಗ ನಟ ಅದರ ಆಡಿಯೋಗೆ ಲಿಪ್ ಸಿಂಕ್ ಮಾಡಿ ವಿಡಿಯೋಗಳನ್ನು ಮಾಡುತ್ತಾರೆ. ಅಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬೇಗನೆ ವೈರಲ್ ಆಗುತ್ತವೆ.
ಯಾರು ಈ ಕಿಲಿ ಪೌಲ್?
ತಾಂಜೇನಿಯಾ ಮೂಲಕ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಮತ್ತು ಸಹೋದರಿ ನೀಮಾ ಪೌಲ್ ಇಬ್ಬರು ವಿಶ್ವದ ಪ್ರಸಿದ್ಧ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ, ಡ್ಯಾನ್ಸ್ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಲ್ಲೂ ಭಾರತದ ಹಾಡುಗಳಿಗೆ ಲಿಪ್ ಸಿಂಗ್ ಮಾಡುವ ಮೂಲಕ ಬಹಳ ಖ್ಯಾತಿ ಗಳಿಸಿದ್ದರು.
ಬಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ಸೇರಿದಂತೆ ಬಹುತೇಕ ಭಾಷೆಯ ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ. ಕಿಲಿ ಪೌಲ್ ರೀಲ್ ಸಿಕ್ಕಾಪಟ್ಟೆ ವೈರಲ್ ಆಗುವ ಜೊತೆಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿರುವ ಕಿಲಿ ಪೌಲ್ ಭಾರತೀಯರಿಗೂ ಅಚ್ಚುಮೆಚ್ಚು.
ಕಿಲಿ ಪೌಲ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆ ಮಾತುಗಳನ್ನು ಹೇಳಿದ್ದರು. ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಹೊಗಳಿದ್ದರು. ಬಳಿಕ ಕಿಲಿ ಪೌಲ್ ಧನ್ಯವಾದ ತಿಳಿಸಿದ್ದರು. ಪ್ರಧಾನಿ ಮೋದಿ ಬೇರೆ ಬೇರೆ ಭಾಷೆಯ ಭಾರತೀಯ ಹಾಡುಗಳಿಗೆ ವಿಡಿಯೋ ಮಾಡುವಂತೆ ಯುವಜನರಿಗೆ ಸಲಹೆ ನೀಡಿದ್ದರು. ಮೋದಿ ಮಾತಿಗೆ ಕಿಲಿ ಪೌಲ್ ಸಂತೋಷಗೊಂಡಿದ್ದರು. ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ್ದರು. ಅದೇ ರೀತಿ ಧನ್ಯವಾದವನ್ನೂ ತಿಳಿಸಿದ್ದರು. ಈ ಮೂಲಕ ಕಿಲಿ ಪೌಲ್ ಖ್ಯಾತಿ ಮತ್ತಷ್ಟು ಹೆಚ್ಚಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ