ಕಿಕಿ ಸವಾಲಿನಿಂದ ತಲೆ ಬುರುಡೆಗೆ ಪೆಟ್ಟು ಮಾಡಿಕೊಂಡ ಯುವತಿ..!

news18
Updated:August 2, 2018, 3:23 PM IST
ಕಿಕಿ ಸವಾಲಿನಿಂದ ತಲೆ ಬುರುಡೆಗೆ ಪೆಟ್ಟು ಮಾಡಿಕೊಂಡ ಯುವತಿ..!
news18
Updated: August 2, 2018, 3:23 PM IST
ನ್ಯೂಸ್​ 18 ಕನ್ನಡ

ಕೆನಡಾದ ರ‍್ಯಾಪ್‌ ಗಾಯಕ ಗ್ರೇರ್ಕ್​ ಹಾಡಿರುವ ಇನ್​ ಮೈ ಫೀಲಿಂಗ್ಸ್​ ಹಾಡಿಗೆ ಆರಂಭವಾಗಿರುವ 'ಕಿಕಿ' ಚಾಲೆಂಜ್​ನಿಂದಾಗಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಲಿಸುವ ವಾಹನದಿಂದ ಇಳಿದು ನರತ್ಯ ಮಾಡುವ ಅಪಾಯಕಾರಿ ಸವಾಲನ್ನು ಸ್ವೀಕರಿಸಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಂಡರೆ, ಇಲ್ಲೊಬ್ಬರು ತಲೆ ಬುರುಡೆಗೆ ಪೆಟ್ಟು ಮಾಡಿಕೊಂಡಿದ್ದಾರೆ.

18 ವರ್ಷದ ಆ್ಯನಾ ವಾರ್ಡೆನ್ ಕಿಕಿ ಚಾಲೆಂಜ್​ ಸ್ವೀಕರಿಸಿ ಚಲಿಸುವ ಕಾರಿನಿಂದ ಇಳಿಯುವಾಗ ಕೆಳಗೆ ಬಿದ್ದು, ತಲೆ ಬುರುಡೆಗೆ ಪೆಟ್ಟಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವಂತಾಗಿತ್ತು.

ಕಾರಿನಿಂದ ಇಳಿದಾಗ ಬಿದ್ದಿದ್ದು ಮಾತ್ರ ನೆನಪಿದೆಯಂತೆ. ಮುಂದೇನಾಯಿತು ಎಂದು ಅವರಿಗೆ ಗೊತ್ತಿಲ್ಲ ಎಂದು ​ ಡಬ್ಲ್ಯುಎಕ್ಯೂಡಿ ಟಿವಿಗೆ ಆ್ಯನಾ ಹೇಳಿಕೆ ನೀಡಿದ್ದಾರೆ.

ಅಮೆರಿಕದ ಕೆಲವು ವಿಡಿಯೋಗಳಲ್ಲಿ ಚಲಿಸುವ ವಾಹನಗಳಿಂದ ಇಳಿದು ನರತ್ಯ ಮಾಡಲು ಹೋಗಿ ಅಪಘಾತಕ್ಕೀಡಾದವರನ್ನು ನೋಡಬಹುದಾಗಿದೆ. ಅದರಲ್ಲಿ ಕಾರಿನಿಂದ ಇಳಿದು ನರತ್ಯ ಮಾಡುತ್ತಾ ಎದುರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದುಕೊಂಡ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...