News18 India World Cup 2019

Video: ನಟಸಾರ್ವಭೌಮ ಚಾಲೆಂಜ್​: ಅಪ್ಪು ನೀಡಿದ ಸವಾಲನ್ನು​ ಸ್ವೀಕರಿಸಿದ ಪುಟಾಣಿ ಅಭಿಮಾನಿಗಳು..!

Anitha E | news18
Updated:November 22, 2018, 4:38 PM IST
Video: ನಟಸಾರ್ವಭೌಮ ಚಾಲೆಂಜ್​: ಅಪ್ಪು ನೀಡಿದ ಸವಾಲನ್ನು​ ಸ್ವೀಕರಿಸಿದ ಪುಟಾಣಿ ಅಭಿಮಾನಿಗಳು..!
Anitha E | news18
Updated: November 22, 2018, 4:38 PM IST
ನ್ಯೂಸ್​ 18 ಕನ್ನಡ 

ಪವರ್​ ಸ್ಟಾರ್​ ಪುನೀತ್ ಪಕ್ಕ ನಿಲ್ಲಬೇಕು, ಅವರ ಜೊತೆಗೊಂದು ಸೆಲ್ಫಿ ತೆಗೆದುಕೊಳ್ಳಬೇಕು ಅನ್ನೋದು ಪುನೀತ್ ಅವರ ಎಷ್ಟೋ ಅಭಿಮಾನಿಗಳ ಆಸೆ. ಅದಕ್ಕೆ ಖುದ್ದು ಅಪ್ಪುಈಗ ಅವಕಾಶ ಕಲ್ಪಿಸಿದ್ದಾರೆ. ಈ ಬಾರಿ ಕೇವಲ ಪಕ್ಕ ನಿಲ್ಲೋದಷ್ಟೇ ಅಲ್ಲ. 'ನಟ ಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆಯನ್ನ ಸಹ ಏರಬಹುದು. ಅದಕ್ಕಾಗಿ ಅಭಿಮಾನಿಗಳು ಒಂದು ಸವಾಲನ್ನು ಸ್ವೀಕರಿಸಬೇಕು.

ಅದು 'ನಟಸಾರ್ವಭೌಮ' ಸಿನಿಮಾ ಟೈಟಲ್ ಕಾರ್ಡ್ ರಿವೀಲ್ ವೀಡಿಯೋ ಮಾದರಿಯಲ್ಲೇ ತಮ್ಮದೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ #Natasaarvabhowma ಎಂದು ಬರೆದು ಅದನ್ನು ಪೋಸ್ಟ್​ ಮಾಡಬೇಕು. ಅದರ ವಿವರಗಳನ್ನು ಮತ್ತೊಮ್ಮೆ ಪುನೀತ್​ ಅವರ ಮಾತಲ್ಲೇ ಕೇಳಿ.

 





ಪುನೀತ್ ಹೀಗೆ ಹೇಳಿದ್ದೇ ತಡ, ಅಭಿಮಾನಿಗಳು ಆ ಕ್ಷಣದಿಂದಲೇ ಸವಾಲಿಗೆ ಜೈ ಅಂದಿದ್ದಾರೆ.  'ನಟಸಾರ್ವಭೌಮ' ಟೈಟಲ್ ಕಾರ್ಡ್ ರಿವೀಲ್ ವಿಡಿಯೋತರವೇ ತಮ್ಮದೊಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಅಪ್ಪು ಅಂದರೆ ಪುಟ್ಟ ಮಕ್ಕಳಿಗೆ ತುಂಬಾನೆ ಇಷ್ಟ. ಹೀಗಾಗಿ ಮೊದಲಿಗೆ ಅಪ್ಪು ನೀಡಿದ ಸವಾಲನ್ನು ಸ್ವೀಕರಿಸಿರೋದು ಪುಟಾಣಿ ಅಭಿಮಾನಿಗಳು. ಚೋಟಾ ಅಭಿಮಾನಿಗಳ ವಿಡಿಯೋಗಳು ಸಖತ್ ಕ್ಯೂಟ್ ಆಗಿವೆ.

 



 



ಟ್ವಿಟರ್​ನಲ್ಲಿ ಸದ್ಯ ಅಪ್ಪು ಹವಾ ಜೋರಾಗಿದ್ದು, 'ನಟಸಾರ್ವಭೌಮ' ಸವಾಲಿನ ಹೆಸರಿನಲ್ಲಿ ಸಾವಿರಾರು ರಿ-ಟ್ವೀಟ್‍ಗಳು ಆಗುತ್ತಿವೆ. 'ನಟಸಾರ್ವಭೌಮ'ನನ್ನ ಟ್ರೆಂಡ್ ಮಾಡುತ್ತಿವೆ. ಅದರಲ್ಲೂ ಬಗೆಯ ಬಗೆಯ ವಿಡಿಯೋಗಳಂತೂ, ಇನ್ನಷ್ಟು ಅಂತಹ ವಿಡಿಯೋ ಮಾಡಲು ಪ್ರೋತ್ಸಾಹಿಸುತ್ತಿವೆ.

'ನಟಸಾರ್ವಭೌಮ' ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋದೆ ಈ ಸಿನಿಮಾ ಹೈಲೈಟ್. ಅಷ್ಟೇ ಅಲ್ಲ 'ರಣವಿಕ್ರಮ' ನಂತರ ಪವನ್ ಒಡೆಯರ್ ಪುನೀತ್‍ಗಾಗಿ ಆ್ಯಕ್ಷನ್ ಕಟ್ ಹೇಳಿರೋದು ಮಗದೊಂದು ಹೈಲೈಟ್. ಹೀಗೆ ಸಾಕಷ್ಟು ಹೈಲೈಟ್ಸ್ ಇರುವುದರಿಂದಲೇ ಅಪ್ಪು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿದೆ ಈ ಸಿನಿಮಾ.

ನಿಮಗೆಲ್ಲ ಗೊತ್ತಿರುವಂತೆ 'ನಟಸಾರ್ವಭೌಮ' ಸಿನಿಮಾದ ಚಿತ್ರೀಕರಣ ಬುಧವಾರವಷ್ಟೇ ಮುಗಿದಿದೆ.. ಕುಂಬಳಕಾಯಿ ಒಡೆದು ಪ್ಯಾಕಪ್ ಆಗಿದ್ದನ್ನ ಸಂಭ್ರಮಿಸಿದೆ ಚಿತ್ರ ತಂಡ. ಸದ್ಯಕ್ಕೆ ಈ ಸಿನಿಮಾದ ಟೀಸರ್ ಹಾಗೂ ಒಂದಷ್ಟು ಮೇಕಿಂಗ್ ಸ್ಟಿಲ್ಸ್ ಬಿಟ್ಟರೆ ಚಿತ್ರದ ಬೇರೆ ಯಾವ ವಿಷಯವೂ ರಿವೀಲ್​ ಆಗಿಲ್ಲ. ಹೀಗಾಗಿ ಥಿಯೇಟರ್​ನಲ್ಲಿ ಈ ಸಿನಿಮಾ ನೋಡೋ ಮೊದಲು, ಹಾಡುಗಳನ್ನ ಕೇಳಲು, ಟ್ರೈಲರ್ ನೋಡಲು ಚಿತ್ರ ಪ್ರೇಮಿಗಳು ಕಾಯುತ್ತಿದ್ದಾರೆ. ಅದಕ್ಕಾಗಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ ಈ ತಂಡ.

 



 

 
First published:November 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...