ಕಳೆದೆರಡು ವರ್ಷಗಳಿಂದ ಕೊರೋನಾ(Corona) ಮಹಾಮಾರಿ ಇಂದ ಸಾಲುಸಾಲು ಸಾವು-ನೋವುಗಳು(Death) ಸಂಭವಿಸುತ್ತಲೇ ಇವೆ.. ಅದರಲ್ಲೂ 2021ರ ಸಿನಿಮಾರಂಗದ(Film Industry) ಪಾಲಿಗೆ ಅತ್ಯಂತ ಕಹಿ ವರ್ಷವಾಗಿತ್ತು.. ಹೀಗಾಗಿ 2022ರಲ್ಲಾದರೂ ಸಿಹಿಸುದ್ದಿ ಕೇಳುವಂತಾಗಲಿ ಎಂದು ಎಲ್ಲರೂ ಪ್ರಾರ್ಥನೆ(Prayer) ಮಾಡುತ್ತಿದ್ದರು..ಆದ್ರೆ 2022ರ ಆರಂಭದಿಂದಲೂ ಒಂದಲ್ಲ ಒಂದು ಸಾವಿನ ಸುದ್ದಿ ಕೇಳಿ ಬರುತ್ತಲೇ ಇದೆ.. ಕೊರೋನಾ ಮಹಾಮಾರಿಯ ಆರ್ಭಟ ಒಂದು ಕಡೆ ಅಧಿಕವಾಗುತ್ತಿದೆ ಸಾವಿನ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದೆ.. ಅದರಲ್ಲೂ 2022 ಬಾಲಿವುಡ್ ಮಂದಿಯ ಪಾಲಿಗೆ ಕಹಿಯಾಗಿದ್ದು, ವರ್ಷದ ಆರಂಭದಿಂದಲೂ ಒಬ್ಬರಲ್ಲ ಒಬ್ಬರು ನಿಧಾನವಾಗುತ್ತಿದ್ದಾರೆ. ಅದರಲ್ಲೂ ಕಳೆದೆರಡು ದಿನಗಳಿಂದ ಬಾಲಿವುಡ್(Bollywood) ಹಾಗೂ ಹಿಂದಿ(Hindi) ಚಿತ್ರರಂಗದ ನಟ ನಟಿಯರಿಗೆ ಆಘಾತದ ಮೇಲೆ ಆಘಾತ ಉಂಟಾಗುತ್ತಲಿದೆ. ಮಹಾಭಾರತ ಧಾರಾವಾಹಿಯಲ್ಲಿ ಅರ್ಜುನನ ಪಾತ್ರ ಮಾಡಿದ್ದ ಶಾಹಿರ ಶೇಕ್ ಅವರ ತಂದೆ ನಿನ್ನೆಯಷ್ಟೇ ಕೊರೊನಾದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಇಂದು ಬಾಲಿವುಡ್ ನಲ್ಲಿ ಮೂವರು ವಿಧಿವಶರಾಗಿದ್ದಾರೆ.
ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಭಾವ ಜೇಸನ್ ವಾಟ್ಕಿನ್ಸ್, ಗಾಯಕ ಶಾನ್ ಅವರ ತಾಯಿ ಸೊನಾಲಿ ಮುಖರ್ಜಿ ಹಾಗೂ ಬಾಲಿವುಡ್ ನಟ ಅರುಣ್ ವರ್ಮಾ ಅವರು ನಿಧನರಾಗಿದ್ದಾರೆ. ಒಂದೇ ದಿನ ಈ ಮೂವರ ಸಾವು ಸಂಭವಿಸಿದೆ ಎಂಬುದು ಆಘಾತಕಾರಿ ಸಂಗತಿ. ಅರುಣ್ ವರ್ಮಾ ಮತ್ತು ಸೊನಾಲಿ ಮುಖರ್ಜಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರೆ, ಜೇಸನ್ ವಾಟ್ಕಿನ್ಸ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣಾದ ಜೇಸನ್ ವಾಟ್ಕಿನ್ಸ್: ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಭಾವ ಜೇಸನ್ ವಾಟ್ಕಿನ್ಸ್ ಅವರು ಮುಂಬೈನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.. ಇನ್ನೂ ಈ ಘಟನೆ ನಡೆದಾಗ ರೆಮೋ ಡಿಸೋಜಾ ಮತ್ತು ಅವರ ಪತ್ನಿ ಲಿಸೆಲ್ಲೆ ಅವರು ಗೋವಾದಲ್ಲಿದ್ದರು. ಇನ್ನು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಭಾವ ಜೇಸನ್ ವಾಟ್ಕಿನ್ಸ್ ಕೆಲವು ದಿನಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ ಅನಾರೋಗ್ಯದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಬಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿಬರುತ್ತಿದೆ..
ಶಾನ್ ತಾಯಿ ನಿಧನ: ಇನ್ನು ಕನ್ನಡ ಹಿಂದಿ ತೆಲುಗು ಸೇರಿ ಹಲವಾರು ಭಾಷೆಗಳಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕ ಶಾನ್ ಅವರ ತಾಯಿ ಕೂಡ ಇಂದು ನಿಧನರಾಗಿದ್ದಾರೆ. ಶಾನ್ ಅವರ ತಾಯಿ ಸೊನಾಲಿ ಮುಖರ್ಜಿ ನಿಧನರಾಗಿರುವ ಸುದ್ದಿಯನ್ನು ಮತ್ತೊಬ್ಬ ಗಾಯಕ ಕೈಲಾಶ್ ಖೇರ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ..ಅಲ್ಲದೇ ಶಾನ ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವಿಟ್ಟರ್ನಲ್ಲಿ ಕೈಲಾಶ್ ಖೇರ್ ಪ್ರಾರ್ಥನೆ ಮಾಡಿದ್ದಾರೆ..
ಅನಾರೋಗ್ಯದಿಂದ ಅರುಣ್ ವರ್ಮಾ ವಿಧಿವಶ: ಬಾಲಿವುಡ್ ನಟ ಅರುಣ್ ವರ್ಮಾ (62) ನಿಧನರಾಗಿದ್ದಾರೆ. ಸಲ್ಮಾನ್ ಖಾನ್ ಅವರೊಂದಿಗೆ ‘ಕಿಕ್’, ‘ಮುಜೆ ಶಾದಿ ಕರೋಗೆ’ ಸಿನಿಮಾಗಳಲ್ಲಿ ನಟಿಸಿದ್ದ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು . ಭೋಪಾಲ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸನ್ನಿ ಡಿಯೋಲ್ ಅಭಿನಯದ ‘ಡಾಕಿತ್’ ಚಿತ್ರದ ಮೂಲಕ ಅರುಣ್ ವರ್ಮಾ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ನಾಯಕ್, ಪ್ರೇಮ ಗ್ರಂಥ, ಖಳನಾಯಕ್, ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಲ್ಮಾನ್ ಖಾನ್, ಟೈಗರ್ ಶ್ರಾಫ್, ರಿಷಿ ಕಪೂರ್ ಮುಂತಾದ ಪ್ರಮುಖ ನಾಯಕರ ಜೊತೆ ನಟಿಸಿದ್ದರು
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ