ಸುದೀಪ್​ ಅಭಿನಯದ ಪೈಲ್ವಾನ್ ಆಡಿಯೋ ಲಾಂಚ್​ಗೆ ಮುಹೂರ್ತ ಫಿಕ್ಸ್!; ಎಲ್ಲಿ, ಯಾವಾಗ? ಇಲ್ಲಿದೆ ವಿವರ

Pailwaan Sudeep: ಈಗಾಗಲೇ ‘ಪೈಲ್ವಾನ್​’ ಚಿತ್ರದ ಮೂರು ಹಾಡುಗಳು ರಿಲೀಸ್​ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ಮುಂಬರುವ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಸಿನಿರಸಿಕರದ್ದು. ಅದಕ್ಕೆ ಆಗಸ್ಟ್​ ತಿಂಗಳಲ್ಲಿ ಉತ್ತರ ಸಿಗಲಿದೆ.

Rajesh Duggumane | news18
Updated:August 2, 2019, 12:54 PM IST
ಸುದೀಪ್​ ಅಭಿನಯದ ಪೈಲ್ವಾನ್ ಆಡಿಯೋ ಲಾಂಚ್​ಗೆ ಮುಹೂರ್ತ ಫಿಕ್ಸ್!; ಎಲ್ಲಿ, ಯಾವಾಗ? ಇಲ್ಲಿದೆ ವಿವರ
ಸುದೀಪ್​
  • News18
  • Last Updated: August 2, 2019, 12:54 PM IST
  • Share this:
ಪೋಸ್ಟರ್​ ಹಾಗೂ ಟೀಸರ್​ ಮೂಲಕ ದೊಡ್ಡ ಮಟ್ಟದ ಕ್ರೇಜ್​ ಹುಟ್ಟು ಹಾಕಿರುವ ಸಿನಿಮಾ ‘ಪೈಲ್ವಾನ್​’. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್​ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಂತೂ ಸುಳ್ಳಲ್ಲ. ಈ ಬೇಸರವನ್ನು ಕಡಿಮೆ ಮಾಡಲು ಚಿತ್ರತಂಡ ಆಗಸ್ಟ್​​ನಲ್ಲಿ ಆಡಿಯೋ ಲಾಂಚ್​ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಬಗ್ಗೆ ಅಧಿಕೃತ​ ಮಾಹಿತಿ ನೀಡಿದ್ದಾರೆ ‘ಪೈಲ್ವಾನ್​’ ಹೀರೋ ‘ಕಿಚ್ಚ’ ಸುದೀಪ್​. ಟ್ವಿಟ್ಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಟ್ವೀಟ್​ನಲ್ಲಿ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಶೇಷ ಎಂದರೆ  ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್​ 9ರಂದೇ ‘ಪೈಲ್ವಾನ್​’ ಹಾಡುಗಳು ಹೊರ ಬರಲಿವೆ.

ಸಾಮಾನ್ಯವಾಗಿ ಆಡಿಯೋ ಲಾಂಚ್​ ಎಂದಾಗ ನೆನಪಿಗೆ ಬರುವುದು ಬೆಂಗಳೂರು. ಕನ್ನಡದ ಕೆಲವೇ ಕೆಲವು ಸಿನಿಮಾ ತಂಡಗಳು ಬೆಂಗಳೂರಲ್ಲದೇ ಬೇರೆ ಕಡೆಗಳಲ್ಲಿ ಆಡಿಯೋ ಲಾಂಚ್ ಮಾಡಿಕೊಂಡಿವೆ. ‘ಪೈಲ್ವಾನ್​’ ತಂಡ ಕೂಡ ಈಗ ಇದೇ ಮಾರ್ಗ ಅನುಸುರಿದೆ. ಚಿತ್ರದುರ್ಗದಲ್ಲಿ ಈ ಸಿನಿಮಾದ ಹಾಡುಗಳು ಬಿಡುಗಡೆ ಆಗಲಿವೆ.

ಇದನ್ನೂ ಓದಿ: ಕುಂಬಳಕಾಯಿ ಒಡೆಯುವ ಸಂಭ್ರಮದಲ್ಲಿ ‘ಪೈಲ್ವಾನ್’ ತಂಡ; ಕೆಲವೇ ತಿಂಗಳಲ್ಲಿ ತೆರೆಮೇಲೆ ಬರಲಿದೆ ಸುದೀಪ್​ ಚಿತ್ರ

ಈಗಾಗಲೇ ‘ಪೈಲ್ವಾನ್​’ ಚಿತ್ರದ ಮೂರು ಹಾಡುಗಳು ರಿಲೀಸ್​ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ಮುಂಬರುವ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಸಿನಿರಸಿಕರದ್ದು.

‘ಗಜಕೇಸರಿ’, ‘ಹೆಬ್ಬುಲಿ’ ಚಿತ್ರದ ನಿರ್ದೇಶಕ ಕೃಷ್ಣ ‘ಪೈಲ್ವಾನ್​’ಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ‘ಹೆಬ್ಬುಲಿ’ ನಂತರ ಅವರು ಮತ್ತೊಮ್ಮೆ ಸುದೀಪ್​ ಜೊತೆ ಕೈಜೋಡಿಸಿದ್ದಾರೆ. ಬಾಲಿವುಡ್​ ನಟರಾದ ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​, ಸುಶಾಂತ್​ ಸಿಂಗ್​ ಚಿತ್ರದಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಆಕಾಂಕ್ಷಾ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ