'ಪೈಲ್ವಾನ್' ಕಿಚ್ಚ ಸುದೀಪ್ ಅಭಿನಯದ ಹು ನಿರೀಕ್ಷಿತ ಸಿನಿಮಾ. ಹೆಬ್ಬುಲಿ ನಂತರ ಕೃಷ್ಣ ಮತ್ತೆ ಸುದೀಪ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಕೇವಲ ಸುದೀಪ್ ಲುಕ್ಕು-ಗೆಟಪ್ನಿಂದಲೇ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.. ಇಂತಹ ಈ ಸಿನಿಮಾ ಈಗ ಖಡಕ್ ಟೀಸರ್ನಿಂದಲೇ ಸಂಕ್ರಾಂತಿಗೆ ಕಿಚ್ಚು ಹಚ್ಚಿದೆ.
'ಪೈಲ್ವಾನ್', ಸ್ಯಾಂಡಲ್ವುಡ್ನ ಬಾಕ್ಸಾಫಿಸ್ ಚಿಂದಿ ಮಾಡುತ್ತೆ ಎಂದು ಹೇಳಲಾಗುತ್ತಿರುವ ಸಿನಿಮಾ. ಕೇವಲ ಒಂದೆರಡು ಪೋಸ್ಟರ್, ಚಿಕ್ಕದೊಂದು ಟೀಸರ್ನಿಂದಲೇ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆಲ್ಲ ಕಾರಣ ಕಿಚ್ಚ ಸುದೀಪ್. ಹೌದು, ಇದೇ ಮೊದಲ ಬಾರಿಗೆ 'ಪೈಲ್ವಾನ್' ಮೂಲಕ ಬಾಕ್ಸರ್ ಪಾತ್ರದಲ್ಲಿ ರಾರಾಜಿಸಲು ಸಜ್ಜಾಗಿದ್ದಾರೆ ಕಿಚ್ಚ.
ಈ ಸಿನಿಮಾದ ಮತ್ತೊಂದು ಆಕರ್ಷಣೆ ಅಂದರೆ ನಿರ್ದೇಶಕ ಕೃಷ್ಣ. ಇವರ ನಿರ್ದೇಶನದಲ್ಲಿ, ಸುದೀಪ್ ನಟನೆಯಲ್ಲಿ ಈ ಮುನ್ನ 'ಹೆಬ್ಬುಲಿ' ಸಿನಿಮಾ ಬಂದಿತ್ತು. ಬಾಕ್ಸಾಫಿಸ್ನಲ್ಲಿ ಭರ್ಜರಿಯಾಗಿಯೇ ಘರ್ಜಿಸಿತ್ತು. ಈಗ ಅದೇ ರೀತಿಯ ಹಿಟ್ ನೀಡೋಕೆ ಸಜ್ಜಾಗಿದೆ ಸುದೀಪ್-ಕೃಷ್ಣ ಜೋಡಿ.
ಇದನ್ನೂ ಓದಿ: ಎರಡು ದಿನದೊಳಗೆ 1.20 ಕೋಟಿ ವೀಕ್ಷಣೆ ಪಡೆದ ರಣವೀರ್ ಸಿಂಗ್ ಹಾಡಿರುವ 'ಗಲ್ಲಿ ಬಾಯ್'ನ ರ್ಯಾಪ್ ಹಾಡು..!
'ಪೈಲ್ವಾನ್' ಮೇಲಿನ ನಿರೀಕ್ಷೆಗಳನ್ನು ಮೀರಿ ನಿಲ್ಲುವಂತಹ ಟೀಸರ್ ಅನ್ನ ಚಿತ್ರ ತಂಡ ಬಿಡುಗಡೆ ಮಾಡಿದೆ. ಸಂಕ್ರಾಂತಿ ಸಂಭ್ರಮಕ್ಕೆ ಕಿಚ್ಚು ಹಚ್ಚುವಂತೆ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿದೆ ಈ ಟೀಸರ್. 'ಪೈಲ್ವಾನ್' ಚಿತ್ರಕ್ಕಾಗಿ ತನುಮನವನ್ನೇ ಅರ್ಪಿಸಿದ್ದಾರೆ ಕಿಚ್ಚ ಸುದೀಪ್.
ಚಿತ್ರದಲ್ಲಿನ ಬಾಕ್ಸರ್ ಪಾತ್ರಕ್ಕಾಗಿ ದೇಹವನ್ನ ದಂಡಿಸಿರೋ ಸುದೀಪ್ ಸುಮಾರು 16 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. 'ಪೈಲ್ವಾನ್' ಶುರುವಾಗುವ ಮುನ್ನ 89 ಕೆ.ಜಿ ತೂಕವಿದ್ದ ಸುದೀಪ್ ಈಗ 73 ಕೆ.ಜಿಗೆ ತೂಕವನ್ನ ಕಡಿಮೆ ಮಾಡಿಕೊಂಡಿದ್ದಾರೆ. ಅದು ಟೀಸರ್ ಝಲಕ್ನಲ್ಲಿಯೂ ಕಾಣಿಸುತ್ತೆ.
Kickass #PailwaanTeaser.thank you @krisshdop this is just awesome. @KicchaSudeep here goes the chorus from all your fans...ಢಮರು ಢಮರು ಡಮರುಗಾ
ತಿಮಿರು ತಿಮಿರು ಕಲಿಯುಗಾ
ಎದೆಯ ಕುಲುಮೆ ಧಗಧಗಾ
ಹೊಡೆತ ಕೊಡುವ ಜಂಗಿ ಕುಸ್ತಿಯಲ್ಲಿ ಇವನು ರಣಸಾಹಸಿ ಗಟ್ಟಿಗ #BandanodoPailwaan https://t.co/lzJ2nipjTw pic.twitter.com/zDntblRA0m
— swapnakrishna (@iswapnakrishna) January 15, 2019
Sir @KicchaSudeep your #pailwaanTeaser is super.. very promising 👍🏽 https://t.co/yCy7Y4bfma
— PURIJAGAN (@purijagan) January 15, 2019
Thank u so mch @purijagan sir...
specially for taking time off to watch it .... thank u 🤗✨✨✨ https://t.co/MOV91lonZj
— Kichcha Sudeepa (@KicchaSudeep) January 15, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ