Kotigobba 3 ಚಿತ್ರದ 10 ಗಂಟೆ ಶೋ ಕ್ಯಾನ್ಸಲ್​: ಬುಕ್​ ಮೈ ಶೋದಲ್ಲೂ ಕಾಣುತ್ತಿಲ್ಲ ಸಿನಿಮಾ ಹೆಸರು..!

ಬೆಳಗ್ಗೆಯೇ ಆರಂಭವಾಗಬೇಕಿದ್ದ ಕೋಟಿಗೊಬ್ಬ 3 ಸಿನಿಮಾದ ಮೊಲದ ಶೋ ಕ್ಯಾನ್ಸಲ್​ ಆಗಿತ್ತು. ಈಗ 10 ಗಂಟೆಯ ಪ್ರದರ್ಶನವೂ ರದ್ದಾಗಿದೆ. ಅಲ್ಲದೆ ಆನ್​ಲೈನ್​ನಲ್ಲೂ ಕೋಟಿಗೊಬ್ಬ 3 ಸಿನಿಮಾದ ಟಿಕೆಟ್ ಮಾರಾಟಕ್ಕೆ ಬ್ರೇಕ್​ ಬಿದ್ದಿದೆ. 

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ಕಿಚ್ಚ ಸುದೀಪ್  (Kichcha Sudeep)​ ಅಭಿನಯದ ಬಹುನಿರೀಕ್ಷಿತ ಸಿನಿಮಾ (Kotigobba 3) ಮೊದಲಿನಿಂದಲೂ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಈ ಸಿನಿಮಾದ ಟೀಸರ್​ ರಿಲೀಸ್​  (Kotigobba 3 Teaser)ಆದಾಗಲೂ ಚಿತ್ರತಂಡ ಸಮಸ್ಯೆ ಎದುರಿಸಿತ್ತು. ನಂತರದಲ್ಲಿ ಟೀಸರ್​ ಅನ್ನು ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ನಿಂದ ತೆಗೆಯಲಾಗಿತ್ತು. ಕೆಲ ದಿನಗಳ ಹಿಂದೆ ಸಮಸ್ಯೆ ಬಗೆಹರಿದಿದ್ದು  ಟೀಸರ್​ ಅನ್ನು ಮತ್ತೆ ಆನಂದ್ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ಮತ್ತೆ ರಿಲೀಸ್ ಮಾಡಲಾಯಿತು. ಈಗ ಸಿನಿಮಾ ರಿಲೀಸ್​ಗೂ ವಿಘ್ನ ಎದುರಾಗಿದೆ. ಮೊದಲ ದಿನವೇ ಕಿಚ್ಚ ಸುದೀಪ್​ ಅವರನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಬೆಳಿಗ್ಗೆ 5 ಗಂಟೆಗೆ ಚಿತ್ರಮಂದಿರಗಳ ಬಳಿ ಬಂದು ಮೊದಲ ಶೋ ನೋಡಲು ಕಾಯುತ್ತಿದ್ದವರಿಗೆ  ಹಬ್ಬದಂದು ಬೇಸರವಾಗಿದೆ. 

ಹೌದು, ಬೆಳಗ್ಗೆಯೇ ಆರಂಭವಾಗಬೇಕಿದ್ದ ಕೋಟಿಗೊಬ್ಬ 3 ಸಿನಿಮಾದ ಮೊಲದ ಶೋ ಕ್ಯಾನ್ಸಲ್​ ಆಗಿತ್ತು. ಈಗ 10 ಗಂಟೆಯ ಪ್ರದರ್ಶನವೂ ರದ್ದಾಗಿದೆ. ಅಲ್ಲದೆ ಆನ್​ಲೈನ್​ನಲ್ಲೂ ಕೋಟಿಗೊಬ್ಬ 3 ಸಿನಿಮಾದ ಟಿಕೆಟ್ ಮಾರಾಟಕ್ಕೆ ಬ್ರೇಕ್​ ಬಿದ್ದಿದೆ.

Kotigobba Fan Show stopped, Kotigobba Morning show is not there, Kotigobba 3 Release, Sudeep in Double shade in Kotigobba 3, Kotigobba-3 release, Kotigobba-3 release in prasanna theatre, Kotigobba-3 show is unseen, Fans rushing into the theater, ಕೋಟಿಗೊಬ್ಬ-3 ಬಿಡುಗಡೆ, ಪ್ರಸನ್ನ ಚಿತ್ರಮಂದಿರದಲ್ಲಿ ಕೋಟಿಗೊಬ್ಬ-3 ಬಿಡುಗಡೆ, ತೆರೆಕಾಣದ ಕೋಟಿಗೊಬ್ಬ-3, ಚಿತ್ರಮಂದಿರದೊಳಗೆ ನುಗ್ಗಿದ ಅಭಿಮಾನಿಗಳು, Salga will release in 300 screens, Kotigobba Cutout, Kichcha Sudeep in Kotigobba, Salaga, Duniya Vijay's Salaga, Salaga, Duniya Vijay's Salaga, Duniya Vijay's Salaga Pre-Release Event, Duniya Vijay Visit to annamma devi temple, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ದುನಿಯಾ ವಿಜಯ್, Duniya Vijay's Salaga Pre-Release Event, siddaramaiah to attend Salaga Pre-Release Event, dk shivakumar to attend Salaga Pre-Release Event, puneeth rajkumar to attend Salaga Pre-Release Event, upendra to attend Salaga Pre-Release Event, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಸಲಗ ಕಾರ್ಯಕ್ರಮಕ್ಕೆ ಅತಿಥಿಗಳ ಪಟ್ಟಿ, Duniya Vijay starrer Salaga Movie, Salaga Movie trailer release, Salaga movie release date, Salaga Pre Release event, Puneeth Rajkumar will attend trailer launch event, Salaga trailer launch event, Salaga Team Invites Puneeth Rajkumar For Trailer Launch, Puneeth Rajkumar will launch salaga trailer, Former CM Siddaramaiah, ಸಲಗ ಸಿನಿಮಾದ
ಕೋಟಿಗೊಬ್ಬ 3 ಸಿನಿಮಾದ ಬೆಳಗಿನ ಶೋ ರದ್ದು


ಹೌದು, ಬುಕ್​ ಮೈ ಶೋ, ಐನಾಕ್ಸ್​, ಪಿವಿಆರ್​ ಆನ್​ಲೈನ್​ ಕೋಟಿಗೊಬ್ಬ 3 ಸಿನಿಮಾದ ಟಿಕೆಟ್ ಮಾರಾಟವನ್ನು ಸದ್ಯಕ್ಕೆ ನಿಲ್ಲಿಸಿವೆ. ಯಾವ ಆನ್​ಲೈನ್​ ವೇದಿಕೆಗಳಲ್ಲೂ ಕೋಟಿಗೊಬ್ಬ 3 ಸಿನಿಮಾದ ಹೆಸರೇ ಕಾಣಿಸುತ್ತಿಲ್ಲ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮಧ್ಯಾಹ್ನದಿಂದ ಸಿನಿಮಾ ಪ್ರದರ್ಶನ ಆರಂಭವಾಗಬಹುದು ಎನ್ನಲಾಗಿದೆ. ಮಧ್ಯಾಹ್ನದ ಹೊತ್ತಿಗೆ ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ಇಂದು ಪ್ರದರ್ಶನ ಆರಂಭವಾಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: Kotigobba 3-Salaga: ತಲೆಯೆತ್ತುತ್ತಿದೆ ಕಿಚ್ಚನ 75 ಅಡಿ ಉದ್ದದ ಕಟೌಟ್​: 300 ಚಿತ್ರಮಂದಿರಗಳಲ್ಲಿ ಸಲಗ ವಿಜಯಯಾತ್ರೆ

ಕೊರೋನಾ ಕಾರಣದಿಂದಾಗಿ ಸುದೀಪ್ ಅಭಿನಯದ ಯಾವುದೇ ಸಿನಿಮಾಗಳು ರಿಲೀಸ್​ ಆಗಿರಲಿಲ್ಲ. ಎರಡೂವರೆ ವರ್ಷಗಳಿಂದ ಸುದೀಪ್​ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಆಯುಧಪೂಜೆ ದಿನ ನಿರಾಶೆಯಾಗಿದೆ. ಮಧ್ಯಾಹ್ನದ ಹೊತ್ತಿಗೆ ಸಮಸ್ಯೆ ಬಗೆಹರಿಸುವುದಾಗಿ ಚಿತ್ರತಂಡ ಭರವಸೆ ನೀಡಿದೆ.

ಫ್ಯಾನ್ಸ್ ಶೋ ಕ್ಯಾನ್ಸಲ್​...

ಬೆಳಗಿನ ಪ್ರದರ್ಶನಕ್ಕೆ ಲೈಸನ್ಸ್ ಸಿಗದ ಹಿನ್ನಲೆಯಲ್ಲಿ ಶೋ ರದ್ದಾಗಿದೆ ಎಂದು ಹೇಳಲಾಗಿತ್ತು. ರಾಜ್ಯಾದ್ಯಂತ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಸಿನಿಮಾ ರಿಲೀಸ್ ಆಗಿದ್ದು, ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತಂತೆ.

ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಸಿದ್ದೇಲಿಂಗೇಶ್ವರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ನಡೆಯಬೇಕಿತ್ತು. ತುಮಕೂರಿನಲ್ಲಿ ಫ್ಯಾನ್ ಶೋ ರದ್ದು ಮಾಡಿದ್ದಾರೆ. ಗಾಯತ್ರಿ ಥಿಯೇಟರ್​​ನಲ್ಲಿ ಬೆಳಗ್ಗೆ 7.30ಕ್ಕೆ ಕೋಟಿಗೊಬ್ಬ 3 ಫ್ಯಾನ್ಸ್ ಶೋ ಇತ್ತು. ಆದರೆ ಈಗ ಶೋ ಕ್ಯಾನ್ಸಲ್ ಆಗಿದೆ.

ಇದನ್ನೂ ಓದಿ: ಸಂತೋಷ್‌ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಹೋದ Salaga: 300 ಚಿತ್ರಮಂದಿರಗಳಲ್ಲಿ 1,200 ಶೋಗಳು..!

ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್​ಗಳು ಕಣ್ಮನ ಸೆಳೆಯುವ ಲೊಕೇಷನ್​, ಸಖತ್ ಆ್ಯಕ್ಷನ್​ ಸೀಕ್ವೆನ್ಸ್​ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್​ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್​ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಅವರ ಸ್ಪೆಷರ್ ಅಪಿಯರೆನ್ಸ್​ ಸಹ ಈ ಸಿನಿಮಾದಲ್ಲಿದೆ.

ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್​ ಸಹ ಬ್ರೇಕ್​ ಹಾಕಿಲ್ಲ. ಇನ್ನು ಸಿನಿಮಾದ ವಿಲನ್​ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್​​ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.
Published by:Anitha E
First published: