Kichcha Sudeep: ಸಾವಿರ ಪರದೆಗಳಲ್ಲಿ Kotigobba 3 ಸಿನಿಮಾ ರಿಲೀಸ್​: ಸೋಮವಾರದಿಂದ ಅಡ್ವಾನ್ಸ್​ ಬುಕಿಂಗ್ ಆರಂಭ..!

ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದ್ದು, ನಿನ್ನೆಯಷ್ಟೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ದಸರಾ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಿನಿಮಾ ಪ್ರದರ್ಶ ಮಾಡುವ ಪರದೆಗಳ ಸಂಖ್ಯೆಯನ್ನು ಹೆಚ್ಚಿಸುವ ಲೆಕ್ಕಾಚಾರದಲ್ಲಿದೆಯಂತೆ ಚಿತ್ರತಂಡ.

ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​

ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​

  • Share this:
ಬಹಳ ಸಮಯದ ನಂತರ ಕಿಚ್ಚ ಸುದೀಪ್ (Kichcha Sudeep) ಅವರನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸುದೀಪ್​ ಅಭಿನಯದ ಸಿನಿಮಾ ಕೋಟಿಗೊಬ್ಬ 3 (Kotigobba 3)ಇನ್ನೇನು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಮುಂದಿನ ಗುರುವಾರ ಅಂದರೆ ಅ.14ರಂದು ಈ ಸಿನಿಮಾ ಗ್ರ್ಯಾಂಡ್​ ಆಗಿ ರಿಲೀಸ್ ಆಗುತ್ತಿದೆ. ಸೂರಪ್ಪ ಬಾಬು ನಿರ್ಮಿಸಿರುವ ಕೋಟಿಗೊಬ್ಬ 3 ಸಿನಿಮಾವನ್ನು ರಾಜ್ಯದಾದ್ಯಂತ ಸಾವಿರ ಪರದೆಗಳಲ್ಲಿ ಸಿನಿಮಾ ಪ್ರದರ್ಶಿಸಲು ತಯಾರಿ ನಡೆಸಿದೆಯಂತೆ ಚಿತ್ರತಂಡ. ಒಂದೇ ದಿನ ಅಂದರೆ ಅಕ್ಟೋಬರ್ 14ರಂದು ಕೋಟಿಗೊಬ್ಬ 3 ಸಿನಿಮಾದ ಜೊತೆ ದುನಿಯಾ ವಿಜಯ್ (Duniya Vijay) ನಿರ್ದೇಶನ ಮಾಡಿ ನಟಿಸಿರುವ ಸಲಗ (Salaga) ಸಹ ತೆರೆ ಕಾಣುತ್ತಿದೆ. 

ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಿದ್ದು, ನಿನ್ನೆಯಷ್ಟೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾ ದಸರಾ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಸಿನಿಮಾ ಪ್ರದರ್ಶ ಮಾಡುವ ಪರದೆಗಳ ಸಂಖ್ಯೆಯನ್ನು ಹೆಚ್ಚಿಸುವ ಲೆಕ್ಕಾಚಾರದಲ್ಲಿದೆಯಂತೆ ಚಿತ್ರತಂಡ.






ಹಬ್ಬದಂದು ಸಿನಿಮಾ ರಿಲೀಸ್ ಆಗುತ್ತಿರುವ ಕಾರಣಕ್ಕೆ ಅಂದು ಮಾರ್ನಿಂಗ್ ಶೋ ಇಡಬಾರದು ಅನ್ನೋ ನಿರ್ಧಾರಕ್ಕೆ ಬರಲಾಗಿದೆಯಂತೆ. ಇನ್ನು, ಸೋಮವಾರದಿಂದಲೇ ಸಿನಿಮಾ ಟಿಕೆಟ್​ ಅನ್ನು ಬುಕ್​ ಮಾಡಿಕೊಳ್ಳಬಹುದಂತೆ. ಆನ್​ಲೈನ್​ನಲ್ಲಿ ಅಡ್ವಾನ್ಸ್​ ಬುಕಿಂಗ್ ಆರಂಭವಾಗಲಿದೆ.

ನಿನ್ನೆ ರಿಲೀಸ್ ಆಗಿರುವ ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1.5 ಮಿಲಿಯನ್​ ಮಂದಿ ಟ್ರೇಲರ್ ವೀಕ್ಷಿಸಿದ್ದು, ಒಂದು ಲಕ್ಷದ 66 ಸಾವಿರ ಮಂದಿ ಲೈಕ್ಸ್​ ಕೊಟ್ಟಿದ್ದಾರೆ. 20 ಸಾವಿರಕ್ಕೂ ಅಧಿಕ ಕಮೆಂಟ್​ ಬಂದಿದೆ. ಕೋಟಿಗೊಬ್ಬ 3 ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​. ಇದರಲ್ಲಿ ಸುದೀಪ್​ ಅವರನ್ನುಸಾಹಸಮಯ ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Kichcha Sudeep: ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಕಿಚ್ಚ ಸುದೀಪ್​

ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್​ಗಳು ಕಣ್ಮನ ಸೆಳೆಯುವ ಲೊಕೇಷನ್​, ಸಖತ್ ಆ್ಯಕ್ಷನ್​ ಸೀಕ್ವೆನ್ಸ್​ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್​ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್​ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಅವರ ಸ್ಪೆಷರ್ ಅಪಿಯರೆನ್ಸ್​ ಸಹ ಈ ಸಿನಿಮಾದಲ್ಲಿದೆ

ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​ನಲ್ಲಿ ಸಖತ್ ಡೈಲಾಗ್ಸ್​ ಇವೆ. ಅದರಲ್ಲೂ ಎಲ್ಲರ ಗಮನ ಸೆಳೆದಿರುವ ಡೈಲಾಗ್​ ಎಂದರೆ, ಚಿನ್ನ.....ಲೈಫ್​ನಲ್ಲಿ ಎರಡು ಪಾಠ ಕಲಿತಿದ್ದೀನಿ. ಒಂದು ಓವರ್ ಆಗಿ ಮಾತನಾಡಬಾರದು.... ಎರಡನೆಯದು ಓವರ್​ ಆಗಿ ಮಾತನಾಡೋದನ್ನ ಕೇಳಿಸಿಕೊಳ್ಳಲೂ ಬಾರದು ಅಂತ ಡೈಲಾಗ್​ ಹೊಡೆಯುತ್ತಾರೆ. ನಂತರ, ಸೋ ನೀನು ಮಾತನಾಡುತ್ತಿರುವ... ನಾನು ಬಾಯಿ ಮುಚ್ಚಿಕೊಂಡಿರುತ್ತೇನೆ ಅಂತ ಸನ್ನೆ ಮಾಡಿ ತೋರಿಸುತ್ತಾರೆ ಸುದೀಪ್​. ಇದು ಅಭಿಮಾನಿಗಳ ಫೇವರಿಟ್ ಡೈಲಾಗ್​ ಹಾಗೂ ಸೀನ್​ ಆಗಿದೆ. ಇದನ್ನು ಸಿನಿರಂಗದಲ್ಲಿರುವ ಕೆಲವರಿಗೆ ಕೊಟ್ಟಿರುವ ಪಂಚ್​ ಎಂದು ಹೇಳುತ್ತಿದ್ದಾರೆ.

ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್​ ಸಹ ಬ್ರೇಕ್​ ಹಾಕಿಲ್ಲ. ಇನ್ನು ಸಿನಿಮಾದ ವಿಲನ್​ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್​​ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.

ಇದನ್ನೂ ಓದಿ: Kichcha Sudeep: 133 ವರ್ಷ ಹಳೆಯ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್..!

ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್​ ಸಹ ಬ್ರೇಕ್​ ಹಾಕಿಲ್ಲ. ಇನ್ನು ಸಿನಿಮಾದ ವಿಲನ್​ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್​​ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.
Published by:Anitha E
First published: