ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿರುವಂತೆ ಸ್ಯಾಂಡಲ್ವುಡ್ನಲ್ಲಿ ಈ ಸ್ಟಾರ್ ಕಿಡ್ಗಳ ಅಬ್ಬರ ಅಷ್ಟಾಗಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಸಹ ಎಲೆ ಮರೆ ಕಾಯಿಯಂತೆ ಇದ್ದಾರೆ ಕನ್ನಡದ ಸ್ಟಾರ್ಗಳ ಮಕ್ಕಳು. ಅದರಲ್ಲೂ ಸುದೀಪ್ ಹಾಗೂ ದರ್ಶನ್ ಅವರ ಮಕ್ಕಳ ಬಗ್ಗೆ ಅಷ್ಟಾಗಿ ಎಲ್ಲೂ ಸುದ್ದಿಯಾಗಲಿ, ಚರ್ಚೆಗಳಾಗಲಿ ನಡೆದದ್ದು ತೀರಾ ಕಡಿಮೆ. ಆದರೆ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಈಗ ಸುದ್ದಿಯಲ್ಲಿದ್ದಾರೆ. ಅದೂ ಕೂಡ ಸುದೀಪ್ ಮಗಳು ಎನ್ನುವ ಕಾರಣಕ್ಕಿಂತ ಹೆಚ್ಚಾಗಿ ತನ್ನದೇ ಆದ ಕಾರಣದಿಂದಾಗಿ ಸಾನ್ವಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಕ್ಯಾಮೆರಾ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಸಾನ್ವಿ ಅವರ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ಅದು ಸಹ ಸಾನ್ವಿ ಈ ವಿಡಿಯೋ ರೆಕಾರ್ಡ್ ಮಾಡಿದ್ದು, ಅದನ್ನು ನೋಡಿದ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟಕ್ಕೂ ಸಾನ್ವಿಯ ಯಾವ ವಿಡಿಯೋ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಆಲೋಚಿಸುತ್ತಿದ್ದೀರಾ..?
ಕಿಚ್ಚ ಸುದೀಪ್ ಅವರ ಮಗಳು ಸಾನ್ವಿಗೆ ಈಗ 16 ವರ್ಷ. ಅಷ್ಟರಲ್ಲೇ ತನ್ನದೇ ಆದ ಯೂಟ್ಯೂಬ್ ಚಾನಲ್ ಮಾಡಿಕೊಂಡಿರುವ ಸಾನ್ವಿ ಅದರಲ್ಲಿ ತಮ್ಮ ಹಾಡಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೆ ಸಾನ್ವಿ ಸುದೀಪ್ ಅಮೆರಿಕದ ಗಾಯಕಿ ಆ್ಯಂಡ್ರಾ ಡೇ ಅವರ ರೈಸ್ ಅಪ್ ಇಂಗ್ಲಿಷ್ ಹಾಡಿಗೆ ದನಿಯಾಗಿದ್ದಾರೆ. ತಾವು ಹಾಡಿರುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಹಂಚಿಕೊಂಡಿದ್ದಾರೆ. ಸುಮಧುರ ಕಂಠದಿಂದ ಸಖತ್ತಾಗಿ ಹಾಡು ಹಾಡಿರುವ ಸಾನ್ವಿಯ ವಿಡಿಯೋಗೆ ಈಗಾಗಲೇ 39 ಸಾವಿರ ವೀಕ್ಷಣೆ ಹಾಗೂ 2 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ.
ಇದನ್ನೂ ಓದಿ: ತುಂಬು ಗರ್ಭಿಣಿ ಮಯೂರಿಗೆ ಎರಡನೇ ಸಲ ಸೀಮಂತ ಶಾಸ್ತ್ರ
ಇನ್ನು ಈ ವಿಡಿಯೋ ನೋಡಿ ಫಿದಾ ಆಗಿರುವ ನಟ ಜೆಕೆ (ಕಾರ್ತಿಕ್ ಜಯರಾಮ್) ತಮ್ಮ ಇನ್ಸ್ಟಾಗ್ರಾಂನಲ್ಲಿದ್ದ ಸಾನ್ವಿ ಬಗ್ಗೆ ಪ್ರೀತಿಯಿಂದ ಬರೆದುಕೊಂಡಿದ್ದಾರೆ. 11 ವರ್ಷಗಳಿಂದ ಸಾನ್ವಿಯನ್ನು ನೋಡುತ್ತಿದ್ದೇನೆ. ಸುಮಧುರ ಕಂಠವನ್ನು ದೇವರು ಉಡುಗೊರೆಯಾಗಿ ನೀಡಿದ್ದಾನೆ ಎನ್ನುವುದಕ್ಕಿಂತ ಸಾನ್ವಿಯ ಶ್ರಮವೂ ಇದರಲ್ಲಿದೆ, ಶುಭವಾಗಲಿ ಎಂದು ಜೆಕೆ ಪೋಸ್ಟ್ ಮಾಡಿದ್ದಾರೆ.
View this post on Instagram
ಬುರ್ಜ್ ಖಲೀಫ ಮೇಲೆ ವಿಕ್ರಾಂತ್ ರೋಣ⁰⁰! Phantom is now #VikrantRona. World's first movie to reveal Title Logo+180secs sneak peek on Burj Khalifa Jan 31st#VikrantRonaOnBurjKhalifa @VikrantRona ⁰@KicchaSudeep @jackmanjunath @alankar_pandian @Shaliniartss Invenio Films Zakir Khan pic.twitter.com/sHGSTB69j7
— Anup Bhandari (@anupsbhandari) January 21, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ