Pailwaan: ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಹಿಸುದ್ದಿ; ಪೈಲ್ವಾನ್ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಅವಕಾಶ!

pailwaan: ಕಿಚ್ಚ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೈಲ್ವಾನ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಬಗ್ಗೆ ಮಾತನಾಡಲು ಇಂದು ಸಂಜೆ ಸುದೀಪ್ ಟ್ವಿಟ್ಟರ್​ನಲ್ಲಿ ಲೈವ್ ಬರಲಿದ್ದಾರೆ.

Sushma Chakre | news18-kannada
Updated:September 7, 2019, 10:51 AM IST
Pailwaan: ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಿಹಿಸುದ್ದಿ; ಪೈಲ್ವಾನ್ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಅವಕಾಶ!
ಪೈಲ್ವಾನ್​
  • Share this:
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ. 'ಗಜಕೇಸರಿ' ಖ್ಯಾತಿಯ ನಿರ್ದೇಶಕ ಕೃಷ್ಣ ನಿರ್ದೇಶಿಸಿರುವ ಪೈಲ್ವಾನ್ ಸಿನಿಮಾ ಮುಂದಿನ ವಾರವೇ ತೆರೆ ಕಾಣಲಿದೆ. ಈಗಾಗಲೇ ಪೈಲ್ವಾನ್ ಸಿನಿಮಾದ ಟ್ರೈಲರ್ ಹಾಗೂ ವಿಡಿಯೋ ಸಾಂಗ್ ಬಹಳ ಸದ್ದು ಮಾಡುತ್ತಿದೆ.

ಕಿಚ್ಚ ಸುದೀಪ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೈಲ್ವಾನ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಬಗ್ಗೆ ಮಾತನಾಡಲು ಇಂದು ಸಂಜೆ ಸುದೀಪ್ ಟ್ವಿಟ್ಟರ್​ನಲ್ಲಿ ಲೈವ್ ಬರಲಿದ್ದಾರೆ. ಈ ವೇಳೆ ಅಭಿಮಾನಿಗಳು ಪೈಲ್ವಾನ್ ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿಮ್ಮ ನೆಚ್ಚಿನ ನಟನಿಗೆ ನೇರವಾಗಿ ಕೇಳಬಹುದು.

ಈ ಕುರಿತು ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಶನಿವಾರ ಸಂಜೆ ಟ್ವಿಟ್ಟರ್ ನಲ್ಲಿ ಲೈವ್ ಬರಲಿದ್ದೇನೆ. ಪೈಲ್ವಾನ್ ಚಿತ್ರಕ್ಕೆ ಸಂಬಂಧಿಸಿದ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ.  #AskPailwaan ಎಂಬ ಟ್ಯಾಗ್​ ಬಳಸಿ ನಿಮ್ಮ ಪ್ರಶ್ನೆಗಳನ್ನು ಕೇಳಿದರೆ ನಾನು ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ತೆಲುಗು ಭಾಷೆಯಲ್ಲೂ ತೆರೆ ಕಾಣಲಿರುವ 'ಪೈಲ್ವಾನ್' 3 ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆ ಕಾಣಲಿದೆ. ಆಕಾಂಕ್ಷಾ ಸಿಂಗ್ ಪೈಲ್ವಾನ್​ ಸಿನಿಮಾದಲ್ಲಿ ಸುದೀಪ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಏನೇ ಪ್ರಶ್ನೆಗಳಿದ್ದರೂ ಇಂದು ಟ್ವಿಟ್ಟರ್​ ಮೂಲಕ ಕೇಳಬಹುದು.

First published: September 7, 2019, 10:36 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading