Seema.RSeema.R
|
news18-kannada Updated:December 12, 2020, 6:21 PM IST
ಸುದೀಪ್
ತೆಲುಗು ನಟ ವಿಜಯ ರಂಗರಾಜು ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಸಂದರ್ಶನದಲ್ಲಿ ಆಡಿರುವ ಮಾತು ಕನ್ನಡ ಅಭಿಮಾನಿಗಳನ್ನು ಕೆಣಕಿದೆ. ವಿಷ್ಣುದಾದ ಅವರ ಅವಹೇಳನದ ಮಾತುಗಳ ವಿರುದ್ಧ ಕನ್ನಡ ಅಭಿಮಾನಿಗಳು ಸೇರಿದಂತೆ ಚಂದನವನದ ತಾರೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾದ ಮೆರು ಪ್ರತಿಭೆ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಖಂಡನೀಯ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಈ ವೇಳೆ ಚಿತ್ರರಂಗದ ನಾಯಕರೆಲ್ಲಾ ಒಟ್ಟಾಗಿ ನಿಂತಿದ್ದು, ತೆಲುಗು ನಟನ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲಿಯೂ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ಕಿಚ್ಚ ಸುದೀಪ್ ತೆಲುಗು ನಟನ ವಿರುದ್ಧ ಸಿಡಿದೆದ್ದಿದ್ದಾರೆ. ವಿಡಿಯೋದಲ್ಲಿ ಹರಿಹಾಯ್ದಿರುವ ಅವರು, ವಿಜಯ ರಂಗರಾಜನ್ ಅವರ ಗಂಡಸ್ತನದ ಬಗ್ಗೆ ಪ್ರಶ್ನಿಸಿದ್ದಾರೆ.
ತೆಲುಗು ನಟ ವಿಜಯ ರಂಗರಾಜನ್ ವಿರುದ್ಧ ಹರಿಹಾಯ್ದಿರುವ ಅವರು, ನಾನು ವಿಷ್ಣು ದಾದ ಅಭಿಮಾನಿಯಾಗಿ, ಅವರ ಅಭಿಮಾನಿಗಳ ಪ್ರತೀಕವಾಗಿ ಈ ವಿಡಿಯೋ ಮಾಡುತ್ತಿದ್ದೇನೆ ಎಂದಿದ್ದಾರೆ. ವ್ಯಕ್ತಿ ಬದುಕಿದ್ದಾಗ ಈ ರೀತಿ ಮಾತನಾಡಿದ್ದರೆ ನಾನು ನಿಮ್ಮ ಗಂಡಸ್ತನ ಒಪ್ಪುತ್ತಿದ್ದೆ. ಕೋಟಿ ಕೋಟಿ ಜನರ ಆರಾಧ್ಯ ದೈವವಾಗಿರುವ ವಿಷ್ಣು ಸರ್ ಇಲ್ಲದಾಗ ಈ ರೀತಿ ನಾಲಿಗೆ ಹರಿಬಿಟ್ಟು ಬಹಳ ದೊಡ್ಡ ತಪ್ಪು ಮಾಡಿದ್ದೀರಾ. ಎಲ್ಲಾ ಸಿನಿಮಾ ಉದ್ಯಮದವರು ಬಾಂಧವ್ಯದಿಂದ ನಡೆಯಬೇಕಾದರೆ, ನಿಮ್ಮ ಈ ಮಾತು ಎಲ್ಲಾ ಭಾಷಾ ಸಿನಿಮಾ ನಟರ ನಡುವೆ ಉಳಿಹಿಂಡಿದಂತೆ ಆಗುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ ಕಲಾವಿದರು ಎಂದಿಗೂ ಇತರೆ ಭಾಷಾ ಕಲಾವಿದರನ್ನು ಬೇರೆಯಾಗಿ ನೋಡಿಲ್ಲ. ಎಲ್ಲರಿಗೂ ನಾವು ಪ್ರೀತಿ, ಗೌರವ ಕೊಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಆಡಿರುವ ನಿಮ್ಮ ಈ ಮಾತುಗಳು ನಮ್ಮ ಉದ್ಯಮದಲ್ಲಿ ಅಲ್ಲ ನಿಮ್ಮ ಸಿನಿ ಉದ್ಯಮದವರೇ ಒಪ್ಪುವುದಿಲ್ಲ. ವಿಷ್ಣು ಸರ್ ಇಲ್ಲದಿರಬಹುದು. ಆದರೆ, ನಾವಿದ್ದೇವೆ. ನೀವು ಆಡಿದ ಮಾತನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಎಚ್ಚರಿಸಿದ್ದಾರೆ.
The most important quality for an artist to possess is to respect and love our fellow artists,irrespective of the place...
Posted by Puneeth Rajkumar on Saturday, 12 December 2020
ಕೇವಲ ನಟ ಕಿಚ್ಚ ಸುದೀಪ್ ಮಾತ್ರವಲ್ಲದೇ, ಜಗ್ಗೇಶ್, ಪುನೀತ್ ರಾಜಕುಮಾರ್, ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸೇರಿದಂತೆ ಹಲವು ನಟರು ವಿಜಯ ರಂಗರಾಜು ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಕಲಾವಿದನಾಗಬೇಕಾದರೆ ಅವನಿಗಿರಬೇಕಾದ ಮೊದಲ ಅರ್ಹತೆ ತನ್ನ ಸಹದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗು ಪ್ರೀತಿಯನ್ನು ತೋರುವುದು ಯಾವುದೇ ಭಾಷೆಯ ನಟರಾದರು ಗೌರವ ಮೊದಲು ಎಂದು ಪುನೀತ್ ರಾಜ್ಕುಮಾರ್ ಕೂಡ ಟ್ವೀಟ್ ಮಾಡಿ ತೆಲುಗು ನಟರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸಿಂಹದ ಕಾಲರ್ಗೆ ಹಿಡಿಯೋಕೆ ಯಾರಿಂದ ಸಾಧ್ಯ. ಅವರಿಗೆ ಅಷ್ಟು ಧೈರ್ಯ ಇದ್ದಿದ್ದರೆ, ವಿಷ್ಣು ಅವರು ಬದುಕಿದ್ದಾಗಲೇ ಹೇಳಬಹುದಿತ್ತು. ಅವರು ಇಲ್ಲದಾಗ ಹೇಳುತ್ತಿರುವ ಈ ವ್ಯಕ್ತಿಯ ಮಾತು ಸುಳ್ಳು, ಸುಮ್ಮನೆ ಮೀಸೆ ಬೆಳೆಸಿಕೊಂಡರೆ ಧೈರ್ಯಶಾಲಿ ಎನಿಸಿಕೊಳ್ಳುವುದಿಲ್ಲ ಎಂದು ಅನಿರುದ್ಧ್ ಕೂಡ ಹರಿಹಾಯ್ದಿದ್ದರು.
Published by:
Seema R
First published:
December 12, 2020, 6:12 PM IST