ಸ್ಯಾಂಡಲ್ವುಡ್ ಬಾದಷಾ ಕಿಚ್ಚ (Kichcha Sudeep) ಸುದೀಪ್ ಮುಂದಿನ ಸಿನಿಮಾ ಯಾವುದು? ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲವೇ? ಮುಂದಿನ ಚಿತ್ರಕ್ಕೆ ಯಾವ ರೀತಿ ತಯಾರಿ ನಡೆಸಿದ್ದಾರೆ ಕಿಚ್ಚ ಸುದೀಪ್.? ಇದೇನೋ ಸರಿ, ಕಿಚ್ಚನಿಗಾಗಿಯೇ ಅನೂಪ್ (Anup Bhandari) ಭಂಡಾರಿ ಕಥೆ ಬರೆದಿದ್ದಾರೆ. ಅದು ಫೈನಲ್ ಆಯಿತೇ? ಕಿಚ್ಚನ (Sueepa Next Film) ಮುಂದಿನ ಚಿತ್ರ ಹೇಗೆ ಇರುತ್ತದೆ? ಯಾರು ಇವರ ಸಿನಿಮಾದ ಡೈರೆಕ್ಟರ್? ಕಿಚ್ಚನ ಮುಂದಿನ ಚಿತ್ರವೂ ಪ್ಯಾನ್ ಇಂಡಿಯಾ ಚಿತ್ರ ಆಗಿರುತ್ತದೆಯೆ? ಜಾಕ್ (Jack Manju) ಮಂಜು ಅವರೇ ಕಿಚ್ಚನ ಮುಂದಿನ ಚಿತ್ರದ ಪ್ರೋಡ್ಯೂಸರ್ ಆಗ್ತಾರಾ? ಈ ಎಲ್ಲ ಪ್ರಶ್ನೆಗಳು ಈಗ ಇವೆ.
ಇದರ ಸುತ್ತ ಒಂದಷ್ಟು ನೋಡುತ್ತಾ ಹೋದರೆ, ಅಲ್ಲಿ ಎಲ್ಲವೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೂ ಈಗ ಒಂದು ಉತ್ತರ ಸಿಕ್ಕಿದೆ. ಅದು ಇಲ್ಲಿದೆ ಓದಿ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದು?
ಕನ್ನಡ ಸಿನಿಮಾ ರಂಗದ ಕಿಚ್ಚ ಸುದೀಪ್ ಸಿನಿಮಾ ಪ್ರೀತಿ ದೊಡ್ಡದಿದೆ. ಸಿನಿಮಾಗಳನ್ನ ಅಳೆದು ತೂಗಿಯೇ ಆಯ್ಕೆ ಮಾಡ್ತಾರೆ. ಸುಮ್ನೆ ಎಲ್ಲ ಸಿನಿಮಾ ಒಪ್ಪಿಕೊಳ್ಳೋದಿಲ್ಲ. ವಿಕ್ರಾಂತ್ ರೋಣ ಸಿನಿಮಾ ಕೂಡ ಹಾಗೆ ಒಪ್ಪಿಕೊಂಡ ಸಿನಿಮಾನೆ ಆಗಿತ್ತು.
ವಿಕ್ರಾಂತ್ ರೋಣ ಚಿತ್ರಕ್ಕಾಗಿಯೇ ಸುದೀಪ್ ಪಕ್ಕಾ ಸಿದ್ದತೆ ನಡೆಸಿದ್ದರು. ಅದರಂತೆ ವಿಕ್ರಾಂತ್ ರೋಣ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿಯೇ ಕಾಣಿಸಿಕೊಂಡು ಪ್ರೇಕ್ಷಕರ ಮತ್ತು ಮಕ್ಕಳ ದಿಲ್ ಕೂಡ ಕದ್ದರು. ಆದರೆ ಇದಾದ ಮೇಲೆ ಕಿಚ್ಚನ ಮುಂದಿನ ಸಿನಿಮಾ ಯಾವುದು?
ಜಾಕ್ ಮಂಜು ಮುಂದಿನ ಚಿತ್ರದಲ್ಲಿ ಕಿಚ್ಚ ಸುದೀಪ್ ಅನ್ನೋ ಸುದ್ದಿ!
ವಿಕ್ರಾಂತ್ ರೋಣ ಸಿನಿಮಾ ಆದ್ಮೇಲೆ ಕಿಚ್ಚ ಸುದೀಪ್ ಬೇರೆ ಯಾವ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಹಲವು ತಿಂಗಳು ಯಾವುದೇ ಚಿತ್ರದ ವಿಷಯವೂ ಹೊರ ಬರಲೇ ಇಲ್ಲ. ಇದರ ಮಧ್ಯನೆ ಒಂದು ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾದ ಸುದ್ದಿ ಹೊರ ಬಿದ್ದಿತ್ತು.
ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ನಿರ್ಮಾಣದಲ್ಲಿ ಒಂದು ಸಿನಿಮಾ ಪ್ಲಾನ್ ಆಗಿದೆ. ಈ ಚಿತ್ರಕ್ಕೆ ಬಿಗ್ ಹೀರೋನೆ ಬರ್ತಾರೆ ಅನ್ನೋ ಮಾತು ಕೂಡ ಇತ್ತು. ಸುದ್ದಿ ಕೂಡ ವೈರಲ್ ಆಗಿತ್ತು. ಆದರೆ ಅದು ಸುಳ್ಳು ಅನ್ನೋದನ್ನ ಸ್ವತಃ ನಿರ್ಮಾಪಕ ಜಾಕ್ ಮಂಜು ಅವರು ಸ್ಪಷ್ಟಪಡಿಸಿದರು.
ಲೈಕಾ ಮೀಡಿಯಾ ಜೊತೆಗೆ ಕಿಚ್ಚನ ಸಿನಿಮಾ ಯಾವಾಗ?
ಕಿಚ್ಚನ ಮುಂದಿನ ಸಿನಮಾ ಲೈಕಾ ಮೀಡಿಯಾ ಜೊತೆಗೆ ಅನ್ನೋ ಮಾತು ಕೂಡ ಬಲವಾಗಿಯೇ ಹರಿದಾಡುತ್ತಿದೆ. ದೊಡ್ಡ ಪ್ರೋಜೆಕ್ಟ್ಗಾಗಿಯೇ ಸುದೀಪ್ ಅವರನ್ನ ಲೈಕಾ ಮೀಡಿಯಾ ಎರಡು ವರ್ಷದ ಹಿಂದೇನೆ ಸಂಪರ್ಕಿಸಿದೆ. ಆದರೆ ಸುದೀಪ್ ಬ್ಯುಸಿ ಇದ್ದ ಕಾರಣ, ಅದು ಆಗ ಸಾಧ್ಯವಾಗಿರಲಿಲ್ಲ. ಈಗ ಶೀಘ್ರದಲ್ಲಿಯೇ ಲೈಕಾ ಮೀಡಿಯಾ ಪ್ರೋಜೆಕ್ಟ್ನ ಮಾಹಿತಿ ಹೊರ ಬೀಳುತ್ತದೆ ಅನ್ನೋ ಸುದ್ದಿನೂ ಇದೆ.
ಹೊಂಬಾಳೆ ಜೊತೆಗೆ ಕಿಚ್ಚನ ಹೊಸ ಸಿನಿಮಾ ಪಯಣ!
ಹೌದು, ಈ ಒಂದು ಮಾತು ಕೂಡ ಇದೆ. ಲೈಕಾ ಮೀಡಿಯಾದ ಹೊರತಾಗಿ, ಹೊಂಬಾಳೆ ಜೊತೆಗೂ ಕಿಚ್ಚ ಸುದೀಪ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿನೂ ಇದೆ. ಹೊಂಬಾಳೆಯ ಕಾರ್ತಿಕ್ ಗೌಡ ಜೊತೆಗೆ ಕಿಚ್ಚ ಸುದೀಪ್ ಇರೋ ಒಂದು ಫೋಟೋ ವೈರಲ್ ಆಗಿತ್ತು. ಅಂದಿನಿಂದಲೇ ಈ ಒಂದು ಮಾತು ಈಗ ಕೇಳಿ ಬರುತ್ತಲೇ ಇದೆ.
ಕನ್ನಡದಲ್ಲಿ ಕಿಚ್ಚನ ಕಬ್ಜ ಸಿನಿಮಾದ ಖದರ್ ಜೋರು!
ವಿಕ್ರಾಂತ್ ರೋಣ ಚಿತ್ರದ ಮೂಲಕ ಜನರ ದಿಲ್ ಕದ್ದ ಕಿಚ್ಚ ಸುದೀಪ್, ಮುಂದಿನ ಕನ್ನಡ ಸಿನಿಮಾ ಯಾವುದು ಅಂತ ಕೇಳೋರಿಗೆ ಸದ್ಯಕ್ಕೆ ಕಬ್ಜ ಸಿನಿಮಾದ ಮಾಹಿತಿ ಕೊಡಬಹುದು.
ಯಾಕೆಂದ್ರೆ, ಇತರ ಚಿತ್ರಗಳ ಅಧಿಕೃತ ಮಾಹಿತಿ ಇನ್ನೂ ಹೊರ ಬರಬೇಕಿದೆ. ಹೀಗಾಗಿಯೇ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ರಿಲೀಸ್ ಆಗಬಹುದಾದ ಕಬ್ಜ ಚಿತ್ರದಲ್ಲಿಯೇ ಕಿಚ್ಚನ ಖದರ್ ಅನ್ನ ಕನ್ನಡ ಪ್ರೇಕ್ಷಕರು ನೋಡಬಹುದು.
ಅನೂಪ್ ಭಂಡಾರಿ ಸಿನಿಮಾ ಏನ್ ಆಯಿತು?
ಇನ್ನುಳಿದಂತೆ ಕಿಚ್ಚನ ಮುಂದಿನ ಸಿನಿಮಾ ಲೈಕಾ ಮೀಡಿಯಾ ಜೊತೆಗೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಬಲವಾಗಿಯೆ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಸಾಕಷ್ಟು ಕುತೂಹಲ ಕೂಡ ಮೂಡಿದೆ.
ಹಾಗೇನೆ ಕನ್ನಡ ಸಿನಿಮಾ ಯಾವುದು ಅನ್ನೋ ಪ್ರಶ್ನೆನೂ ಇದೆ. ಇದರ ಬೆನ್ನಲ್ಲಿಯೇ ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ ಕಥೆ ಬರೆದಿದ್ದಾರೆ. ಅದನ್ನ ಫೈನಲ್ ಮಾಡೋ ಹಂತಕ್ಕೂ ಬಂದಿದ್ದಾರೆ. ಆದರೆ ಇನ್ನೂ ಯಾವುದು ಹೊರಗೆ ಬಿದ್ದಿಲ್ಲ ಅಷ್ಟೆ. ಯಾವುದಕ್ಕೂ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ