ಸ್ಯಾಂಡಲ್ವುಡ್ನ (Sandalwood) ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಚಿತ್ರಕ್ಕೆ ಪೈರಸಿ (Piracy) ಕಾಟ ಎದುರಾಗಿತ್ತು. ಆದರೂ ಕಿಚ್ಚನ ಅಬ್ಬರಕ್ಕೆ ಯಾವುದೇ ಕೊರತೆ ಆಗಲಿಲ್ಲ. ವಿಕ್ರಾಂತ್ ರೋಣ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದೆ. ಅದಲ್ಲದೇ ಇದೀಗ ಚಿತ್ರವು ಜಪಾನ್ ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಈ ಕುರಿತು ಸ್ವತಃ ಕಿಚ್ಚ ಅವರೇ ಮಾಹಿತಿ ನೀಡಿದ್ದು, ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಅಲ್ಲದೇ ಓರ್ವ ಚಿತ್ರ ನೋಡಲು ಬರೋಬ್ಬರಿ 300 ಕಿಮೀ ಬಂದಿದ್ದಾರಂತೆ.
ಜಪಾನ್ ದೇಶದಲ್ಲಿಯೂ ಕಿಚ್ಚನ ಅಬ್ಬರ:
ಹೌದು, ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಆದರೆ ಇದೀಗ ಚಿತ್ರತಂಡ ಒಂದು ಹೆಜ್ಜೆ ಮುಂದುವರೆದಿದ್ದು, ಚಿತ್ರವವನ್ನು ಜಪಾನ್ ದೇಶದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.
Soon ❤️❤️ https://t.co/lcStFxUrtj
— Kichcha Sudeepa (@KicchaSudeep) August 1, 2022
ಕಿಚ್ಚನಿಗಾಗಿ 300 KM ಪ್ರಯಾಣ:
ಜರ್ಮನಿಯಲ್ಲಿ ಕನ್ನಡಿಗರೊಬ್ಬರು 'ವಿಕ್ರಾಂತ್ ರೋಣ' ಚಿತ್ರವನ್ನು ನೋಡಲು 300 ಕಿ.ಮೀ ಪ್ರಯಾಣ ಮಾಡಿದ್ದಾರಂತೆ. ಪರೀಕ್ಷಿತ್ ಗೌಡ ಎನ್ನುವವರು ಟಿಕೆಟ್ ಫೋಟೊ ಟ್ವೀಟ್ ಮಾಡಿ 'ಅದ್ಭುತ ಸಿನಿಮಾ. ಅನೂಪ್ ಭಂಡಾರಿ ನಿರ್ದೇಶನ, ಸುದೀಪ್ ಆಕ್ಟಿಂಗ್ ಚೆನ್ನಾಗಿದೆ. ಇಂತಹ ಮತ್ತಷ್ಟು ಪ್ರಯೋಗಾತ್ಮಕ ಸಿನಿಮಾಗಳು ಇನ್ನಷ್ಟು ಬರಬೇಕು‘ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಟ ಸುದೀಪ್ ಸಹ ಪ್ರತಿಕ್ರಿಯೆ ನೀಡಿದ್ದಾರೆ.
❤️❤️❤️🥂 https://t.co/oH3j6jZyVU
— Kichcha Sudeepa (@KicchaSudeep) August 2, 2022
ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಒಟ್ಟು ಕಲೆಕ್ಷನ್ ಮೊದಲ ವಾರಾಂತ್ಯದಲ್ಲಿ 110 ಕೋಟಿ ರೂ ಎನ್ನಲಾಗುತ್ತಿದೆ. ಹಿಂದಿ ಬೆಲ್ಟ್ನಲ್ಲಿ ಸುಮಾರು 6 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದೆ. ವಾರದ ದಿನಗಳಲ್ಲಿ ವಿಕ್ರಾಂತ್ ರೋಣ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಟ್ರೇಡ್ ವರದಿಗಳ ಪ್ರಕಾರ ವಿಕ್ರಾಂತ್ ರೋಣ ಈ ವಾರ ಕಲೆಕ್ಷನ್ನಲ್ಲಿ ಸ್ವಲ್ಪ ಕುಸಿತವನ್ನು ಕಾಣಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: Vikrant Rona: ಕಿಚ್ಚನ ಸಿನಿಮಾಗೆ ಮತ್ತೆ ಪೈರಸಿ ಕಾಟ, ಗುಡುಗಿದ ವಿಕ್ರಾಂತ್ ರೋಣ ನಿರ್ಮಾಪಕ
ಸಿನಿಮಾ ವ್ಯಾಪಾರ ವಿಶ್ಲೇಷಕ ಸುಮಿತ್ ಕಡೆಲ್ ಪ್ರಕಾರ, ವಿಕ್ರಾಂತ್ ರೋಣ ತನ್ನ ಮೊದಲ ವಾರಾಂತ್ಯದಲ್ಲಿ ಜಾಗತಿಕವಾಗಿ 110 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿದೆ., "#VikrantRona 5 ದಿನಗಳಲ್ಲಿ ರೂ 100 ಕೋಟಿ ದಾಟಿದೆ, ಒಟ್ಟಾರೆಯಾಗಿ ವಿಶ್ವದಾದ್ಯಂತ ಸುಮಾರು ರೂ 110 ಕೋಟಿಗಳನ್ನು ಕೆಲಕ್ಷನ್ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ