Kotigobba 3: ಲಯನ್ ಇಸ್ ಬ್ಯಾಕ್: ಸಂಕ್ರಾಂತಿಗೆ ಕಿಚ್ಚನ ಕಿಚ್ಚಿನ ಲುಕ್

Kotigobba 3 Motion Poster: ಸುದೀಪ್ ಜೊತೆಯಾಗಿ ಮಾಲಿವುಡ್ ಸುಂದರಿ ಮಡೊನ್ನ ಸೆಬಾಸ್ಟಿಯನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ ಹಾಗೂ ನವಾಬ್ ಷಾ ಮುಂತಾದವರು ಬಣ್ಣ ಹಚ್ಚಿದ್ದಾರೆ.

zahir | news18-kannada
Updated:January 14, 2020, 7:18 PM IST
Kotigobba 3: ಲಯನ್ ಇಸ್ ಬ್ಯಾಕ್: ಸಂಕ್ರಾಂತಿಗೆ ಕಿಚ್ಚನ ಕಿಚ್ಚಿನ ಲುಕ್
Kiccha Sudeep
  • Share this:
ಸ್ಯಾಂಡಲ್​ವುಡ್ ಬಾದ್​ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರಿಎಂಟ್ರಿ ಕೊಟ್ಟಿದ್ದಾರೆ. ಅದು ಅಂತಿಂಥ ಎಂಟ್ರಿಯಲ್ಲ. ರಟಕ್​ಟಟ್ಟಾ ರಟಕ್​ಟಟ್ಟಾ ರಟಕ್​ಟಟ್ಟಾ ರಟಕ್​ಟಟ್ಟಾ ರಟ್ಟಾ ಎಂಟ್ರಿ. ಹೌದು, ಬಹುನಿರೀಕ್ಷಿತ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರದ ಮೋಷನ್​ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ.

ಸಂಕ್ರಾಂತಿ ಉಡುಗೊರೆಯಾಗಿ ಚಿತ್ರತಂಡ ಕಿಚ್ಚನ ಕಿಚ್ಚಿನ ಪೋಸ್ಟರ್​ರನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸ್ಟೈಲಿಷ್ಟ್ ಲುಕ್​ನಲ್ಲಿ ಮತ್ತೊಮ್ಮೆ ಬಾದ್​ಷಾ ಖದರ್ ಮರೆದಿದ್ದಾರೆ. ಕೈಯಲ್ಲಿ ಸಿಗರೇಟ್, ತಲೆಯಲ್ಲಿ ಹ್ಯಾಟ್​, ಕೂಲಿಂಗ್​ ಗ್ಲಾಸ್​ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನ ಹೊಸ ಲುಕ್​ ಅಭಿಮಾನಿಗಳ ಸಂಕ್ರಾಂತಿಗೆ ಕಿಚ್ಚು ಹಚ್ಚಿದಂತಿದೆ.

ಇನ್ನು ಕೂಲಿಂಗ್ ಗ್ಲಾಸ್​ನಲ್ಲಿ ವಿಲನ್​ಗಳು ತೂರಿ ಹೋಗುತ್ತಿರುವ ದೃಶ್ಯಗಳನ್ನು ತೋರಿಸಿರುವುದು ಗಮನ ಸೆಳೆಯುತ್ತದೆ. ಮುಖ್ಯವಾಗಿ ಅರ್ಜುನ್ ಜನ್ಯ ನೀಡಿರುವ ಕೋಟಿಗೊಬ್ಬನ ಥೀಮ್​ ಸಂಗೀತ ರೋಮಾಂಚನಕಾರಿಯಾಗಿರುವುದಂತು ಸುಳ್ಳಲ್ಲ.

ಬಿಡುಗಡೆಯಾದ ಒಂದು ಗಂಟೆಯಲ್ಲೇ ಕೋಟಿಗೊಬ್ಬ3 ಚಿತ್ರದ ಮೋಷನ್ ಪೋಸ್ಟರ್​ ಅನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಚಿತ್ರವನ್ನು ಶಿವಕಾರ್ತಿಕ್ ನಿರ್ದೇಶನ ಮಾಡುತ್ತಿದ್ದು, 'ರಾಮ್​ಬಾಬು ಪ್ರೊಡಕ್ಷನ್ಸ್' ಬ್ಯಾನರ್​ನಲ್ಲಿ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕೋಟಿಗೊಬ್ಬ ಮುಂದುವರೆದ ಭಾಗದಲ್ಲಿ ಸುದೀಪ್ ಜೊತೆಯಾಗಿ ಮಾಲಿವುಡ್ ಸುಂದರಿ ಮಡೊನ್ನ ಸೆಬಾಸ್ಟಿಯನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ ಹಾಗೂ ನವಾಬ್ ಷಾ ಮುಂತಾದವರು ಬಣ್ಣ ಹಚ್ಚಿದ್ದಾರೆ.


ಇದನ್ನೂ ಓದಿ: ಕೆರಳಿದ ಕಂಗಳ ಶಿವಣ್ಣ: ಪೋಸ್ಟರ್ ನೋಡಿ ಅಭಿಮಾನಿಗಳು ಅಂದ್ರು ಭಲೇ ಭಜರಂಗಿ..!
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading