Sudeepa Movie: ಕಬ್ಜ ಚಿತ್ರದ ಕಿಚ್ಚನ ಮತ್ತೊಂದು ರೂಪ ರಿವೀಲ್! ಏನದು ಗೊತ್ತೇ?

ಖಡಕ್ ಲುಕ್‌ನ ಕನ್ನಡದ ಕಿಚ್ಚ ಸುದೀಪ್ ರೋಲ್ ಸೂಪರ್

ಖಡಕ್ ಲುಕ್‌ನ ಕನ್ನಡದ ಕಿಚ್ಚ ಸುದೀಪ್ ರೋಲ್ ಸೂಪರ್

ಚಿತ್ರದ ಟ್ರೈಲರ್ ರಿಲೀಸ್ ಆಗೋದೇ ತಡ, ಕಿಚ್ಚನ ಖಡಕ್ ಲುಕ್ ರಿವೀಲ್ ಆಗಿದೆ. ಪೊಲೀಸ್ ಡ್ರೆಸ್ ಧರಿಸಿಕೊಂಡ ಕಿಚ್ಚ ಸುದೀಪ್ ಇಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ವೀರ ಮದಕರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಆ ಕಿಚ್ಚನಿಗೂ ಕಬ್ಜ ಚಿತ್ರದ ಈ ಕಿಚ್ಚನಿಗೂ ತುಂಬಾ ವ್ಯತ್ಯಾಸ ಇದೆ ಅಂತಲೇ ಹೇಳಬಹುದು.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಒಂದೇ ಒಂದು ಚಿತ್ರ 2O23 ರಲ್ಲಿ ಇಲ್ವೇ ಇಲ್ಲ ಅನ್ನುವ ಹೊತ್ತಿಗೆ ಕಬ್ಜ ಸಿನಿಮಾ (Kabzaa Movie) ಹಾಗೇನಿಲ್ಲ ಅಂತಿದೆ. ಹೌದು,  ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅದ್ಭುತವಾದ ಪಾತ್ರವನ್ನ ಮಾಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ (Upendra) ಈ ಚಿತ್ರದಲ್ಲಿ ಲೀಡ್ ಅಲ್ಲಿದ್ದರೂ ಕಿಚ್ಚನ ಮಹತ್ವ ಇಲ್ಲಿ ಎಲ್ಲೂ  ಕಡಿಮೆ ಆಗಿಲ್ಲ. ರಿಯಲ್ ಸ್ಟಾರ್ ಉಪ್ಪಿ ಮತ್ತು ಕಿಚ್ಚನ ಪಾತ್ರ ಎರಡೂ ಇಲ್ಲಿ ಸಮನಾಗಿಯೇ ಇವೆ. ಇವುಗಳನ್ನ ದೊಡ್ಡ ಪರದೆ ಮೇಲೆ ನೋಡಿದ್ರೆ, ಆಗಲೇ ಇದರ ಇಂಪ್ಯಾಕ್ಟ್ ಎಲ್ಲರಿಗೂ ತಿಳಿಯುತ್ತದೆ.


ಇದೇನೋ ಸರಿ, ಆದರೆ ಶಿವಣ್ಣನ ಪಾತ್ರ ಈ ಚಿತ್ರದಲ್ಲಿ ಏನೂ ಅಂತ ಏನಾದ್ರೂ ಕೇಳಿದ್ರೆ, ಅದಕ್ಕೂ ಉತ್ತರ ಇದ್ದೇ ಇದೆ.  ಶಿವರಾಜ್‌ ಕುಮಾರ್ (Shivaraj Kumar)ಇಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಆದರೆ ಈ  ಪಾತ್ರಕ್ಕೂ ಇಲ್ಲಿ ಮಹತ್ವ ಜಾಸ್ತಿನೇ ಇದೆ. ಇಷ್ಟೆಲ್ಲಾ ಮಹತ್ವದ ಪಾತ್ರಗಳ ಚಿತ್ರದಲ್ಲಿ ಕಿಚ್ಚನ ಪಾತ್ರದ ಗತ್ತು ಬೇರೆ ಇದೆ. ಇದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.


Kichcha Sudeepa another Look in Kabzaa Movie Reveal
  ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್


ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ ಬೇರೆ ರೀತಿ ಇದೆ. ವೀರ ಮದಕರಿ ಚಿತ್ರದಲ್ಲಿ ಪೊಲೀಸ್ ಆಗಿ ಕಿಚ್ಚು ಹಚ್ಚಿದ್ದ ಕಿಚ್ಚ ಸುದೀಪ್, ಇಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಈ ಪಾತ್ರದ ಪರಿಚಯ ಈಗಾಗಲೇ ಆಗಿದೆ.




ಕಿಚ್ಚನ ಅದ್ಭುತ ಸ್ಟೈಲ್​ಗೆ ಮರುಳಾದ ಕಿಚ್ಚನ ಹುಡುಗರು


ಗಿರಿಜಾ ಮೀಸೆಯನ್ನ ಬಿಟ್ಟು ಖಡಕ್ ಆಗಿಯೂ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚನ ಈ ಪಾತ್ರ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿರೋದು ಕೂಡ ಅಷ್ಟೇ ಸತ್ಯ . ಇಂತಹ ಈ ಪಾತ್ರಕ್ಕೆ ನಿರ್ಮಾಪಕ ನಿರ್ದೇಶಕ ಆರ್.ಚಂದ್ರು  ಒಳ್ಳೆ ಹೆಸರನ್ನೆ ಇಟ್ಟಿದ್ದಾರೆ. ಆ ಹೆಸರು ಕೇಳಿದ್ರೆ ನಿಮಗೆ ಬೇಜಾನ್ ಖುಷಿನೂ ಆಗುತ್ತದೆ.


ಹೌದು, ಕಿಚ್ಚ ಸುದೀಪ್ ಈ ಕಬ್ಜ ಚಿತ್ರದಲ್ಲಿ ಭಾರ್ಗವ್ ಭಕ್ಷಿ ಅನ್ನುವ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಪರಿಚಯ ಈಗಾಗಲೇ ಚಿತ್ರದ ಮೊದಲ ಟೀಸರ್‌ನಲ್ಲಿಯೇ ಆಗಿದೆ. ಇದನ್ನ ನೋಡಿದಾಗ, ಹಲವರಿಗೆ ಈ ಪಾತ್ರ ಎಂತಹದ್ದು ಅನ್ನುವ ಡೌಟು ಕೂಡ ಇತ್ತು.


ಖಡಕ್ ಲುಕ್‌ನ ಕಿಚ್ಚ ಸುದೀಪ್ ರೋಲ್ ಸೂಪರ್


ಆದರೆ ಚಿತ್ರದ ಟ್ರೈಲರ್ ರಿಲೀಸ್ ಆಗೋದೇ ತಡ, ಕಿಚ್ಚನ ಖಡಕ್ ಲುಕ್ ರಿವೀಲ್ ಆಗಿದೆ. ಪೊಲೀಸ್ ಡ್ರೆಸ್ ಧರಿಸಿಕೊಂಡ ಕಿಚ್ಚ ಸುದೀಪ್ ಇಲ್ಲಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ವೀರ ಮದಕರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಆ ಕಿಚ್ಚನಿಗೂ ಕಬ್ಜ ಚಿತ್ರದ ಈ ಕಿಚ್ಚನಿಗೂ ತುಂಬಾ ವ್ಯತ್ಯಾಸ ಇದೆ ಅಂತಲೇ ಹೇಳಬಹುದು.


ಕಿಚ್ಚ ಸುದೀಪ್ ಪಾತ್ರದ ಸುತ್ತ ಹಲವು ಕುತೂಹಲ ಕೂಡ ಇವೆ. ಕಾರಣ, ಚಿತ್ರದ ಈ ಹಿಂದಿನ ಹಾಡಿನಲ್ಲಿ ಇಬ್ಬರು ಹುಡುಗರನ್ನ ಆರ್.ಚಂದ್ರು ತೋರಿಸಿದ್ದರು. ಅಮ್ಮನ ಪ್ರೀತಿಯ ಮಕ್ಕಳಿವರು ಅನ್ನೋದನ್ನು ಇದೇ ಹಾಡಿನಲ್ಲಿಯೇ ತೋರಿಸಿದ್ದರು.


ಸೂಪರ್ ಸ್ಟಾರ್‌ಗಳ ಕಬ್ಜ ಚಿತ್ರದಲ್ಲಿ ಬಾಲ ಕಲಾವಿದರು!


ಆ ಇಬ್ಬರು ಮಕ್ಕಳಲ್ಲಿ ಕಿಚ್ಚನ ಪಾತ್ರ ಒಂದಾದ್ರೆ, ಇನ್ನೂ ಒಂದು ರಿಯಲ್ ಸ್ಟಾರ್ ಉಪೇಂದ್ರ ಅನ್ನುವ ಅನುಮಾನಗಳೂ ಹುಟ್ಟಿದ್ದವು. ಆದರೆ ಶಿವರಾಜ್ ಕುಮಾರ್ ಪಾತ್ರದ ವಿಷಯ ರಿವೀಲ್ ಆಗಿದ್ದೇ ತಡ, ಚಿತ್ರದಲ್ಲಿ ಅಲ್ಲಿವರೆಗೂ ಇದ್ದ ಡೌಟ್ ಮತ್ತಷ್ಟು ಕುತೂಹಲ ಕೆರಳಿಸಿದೆ.


Kichcha Sudeepa another Look in Kabzaa Movie Reveal
ಕಿಚ್ಚನ ಅದ್ಭುತ ರೂಪಕ್ಕೆ ಮರುಳಾದ ಕಿಚ್ಚನ ಹುಡುಗರು


ಕಬ್ಜ ಚಿತ್ರ 1945 ರಿಂದ 1987ರ ಕಾಲಘಟ್ಟದ ಕಥೆಯನ್ನ ಹೇಳುತ್ತಿದೆ. ಸ್ವತಂತ್ರ ಪೂರ್ವದಿಂದಲೇ ಶುರು ಆಗೋ ಈ ಕಥೆಯಲ್ಲಿ ಯಾರನ್ನ ಯಾರು ಕಬ್ಜ ಮಾಡಿದ್ರು ಅನ್ನೋದು ಕೂಡ ಈಗೀನ ಟ್ರೈಲರ್ ನಲ್ಲಿ ಕೊಂಚ ರಿವೀಲ್ ಆದಂತೆ ಕಾಣುತ್ತಿದೆ.


ಇಡೀ ದೇಶವನ್ನೆ ಕಬ್ಜ ಮಾಡಲಿರೋ ಕನ್ನಡದ 3 ಸ್ಟಾರ್ಸ್


ಕಿಚ್ಚ ಸುದೀಪ್, ರಿಯಲ್‌ಸ್ಟಾರ್ ಉಪೇಂದ್ರ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ರಂತಹ ಸ್ಟಾರ್ ನಟರು ಈ ಚಿತ್ರದಲ್ಲಿ ಅತಿ ದೊಡ್ಡ ಕಥೆಯನ್ನ ಹೊತ್ತು ತರುತ್ತಿದ್ದಾರೆ. ಬಹು ಕೋಟಿಯ ಈ ಚಿತ್ರದಲ್ಲಿ ಬಹು ತಾರೆಯರೂ ಇದ್ದಾರೆ. ಎಲ್ಲರಿಗೂ ಅವರದೇ ಆದ ಮಹತ್ವದ ಪಾತ್ರವೇ ಇದೆ.


ಇದನ್ನೂ ಓದಿ: Ramesh Aravind: ಶಿವಾಜಿ ಸುರತ್ಕಲ್ ರಿಲೀಸ್ ಡೇಟ್ ಫಿಕ್ಸ್! ಇಲ್ಲಿದೆ ಫುಲ್ ಡೀಟೆಲ್ಸ್


ಇದನ್ನ ಕಂಡ ಕನ್ನಡ ನಾಡಿನ ಜನ ಅಷ್ಟೇ ಅಲ್ಲ, ಇಡೀ ಪ್ಯಾನ್ ಇಂಡಿಯಾ ಮಂದಿನೇ ಆಯಾ ಭಾಷೆಯಲ್ಲಿ ನೋಡಿ ಖುಷಿಪಡಲಿದ್ದಾರೆ. ಅಂತಹ ಈ ಚಿತ್ರದಲ್ಲಿ ಇನ್ನು ಏನೇನೋ ಇದೆ. ಅದನ್ನ ತಿಳಿಯೋಕೆ ಮಾರ್ಚ್‌-17 ರವರೆಗೂ ಕಾಯಲೇಬೇಕು. ಆ ದಿನ ಕಬ್ಜ ರಿಲೀಸ್ ಆಗಿ ಇಡೀ ಸಿನಿ ಪ್ರೇಮಿಗಳಿಗೆ ಹೊಸದೊಂದು ಥ್ರಿಲ್ ಮೂಡಿಸೋಕೆ ರೆಡಿ ಆಗಿದೆ.

First published: