ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರ (Sudeepa Cinema Story) ಜೀವನದಲ್ಲಿ ವೀರ ಮದಕರಿ ಸಿನಿಮಾ ಕೂಡ ವಿಶೇಷವಾಗಿಯೇ ಇದೆ. ತೆಲುಗು ರಿಮೇಕ್ ಚಿತ್ರ ಇದಾಗಿದ್ದರೂ ಕೂಡ ಕಿಚ್ಚನ ಒಂದು ಅದ್ಭುತ ನಿರ್ದೇಶನದಲ್ಲಿ (Veera Madakari Movie) ಇಡೀ ಸಿನಿಮಾ ಕನ್ನಡ ಸಿನಿಮಾನೇ ಆಗಿತ್ತು. ಅಂತಹ ಈ ಚಿತ್ರ 100 ದಿನ ಓಡಿತ್ತು. ಬಾಕ್ಸ್ ಆಫೀಸ್ ಕೊಳ್ಳೆ (Veera Madakari Completes 14 Years) ಕೂಡ ಹೊಡೆದಿತ್ತು. ಆದರೆ ಇದು 14 ವರ್ಷದ ಹಿಂದಿ ಕಥೆನೆ ಆಗಿದೆ. ಮಾರ್ಚ್-20, 2009 ರಂದು ವೀರ ಮದಕರಿ ಸಿನಿಮಾ ರಿಲೀಸ್ ಆಗಿತ್ತು. ದಿನೇಶ್ ಗಾಂಧಿ (Sudeepa Cinema Complets 14 Year) ಈ ಚಿತ್ರಕ್ಕೆ ದುಡ್ಡುಹಾಕಿದ್ದರು. ಅದೇ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿವೆ ಓದಿ.
ವಿಕ್ರಮಾರ್ಕುಡು ರಿಮೇಕ್ ಮಾಡಿದ್ದರು ಕಿಚ್ಚ ಸುದೀಪ್
ವೀರ ಮದಕರಿ ಸಿನಿಮಾ ತೆಲುಗುವಿನ ವಿಕ್ರಮಾರ್ಕುಡು ಸಿನಿಮಾದ ರಿಮೇಕ್ ಆಗಿತ್ತು. ಆದರೆ ಕಿಚ್ಚನ ಅದ್ಭುತ ನಿರ್ದೇಶನದಲ್ಲಿ ಎಲ್ಲೂ ಇದು ರಿಮೇಕ್ ಸಿನಿಮಾ ಅನಿಸಲೇ ಇಲ್ಲ. ಅಪ್ಟಟ ಕನ್ನಡ ಸಿನಿಮಾನೇ ಆಗಿ ಬಿಟ್ಟಿತ್ತು. ಎಲ್ಲೂ ಯಥಾವತ್ತು ಕಾಪಿ ಅಂತಲೂ ಕಂಡು ಬರಲಿಲ್ಲ.
ವಿಕ್ರಮಾರ್ಕುಡು ಸಿನಿಮಾ ಕೂಡ ತೆಲುಗು ಭಾಷೆಯಲ್ಲಿ ಒಳ್ಳೆ ಹೆಸರು ಮಾಡಿತ್ತು. ತೆಲುಗು ನಟ ರವಿತೇಜ ಅಭಿನಯದ ಈ ಚಿತ್ರದ ಹಿಂದೆ ಅತಿ ದೊಡ್ಡ ಡೈರೆಕ್ಟರ್ ಇದ್ರು. ಅವರೇ ಎಸ್.ಎಸ್.ರಾಜಮೌಳಿ, ಇವರ ನಿರ್ದೇಶನದಲ್ಲಿ ಬಂದ ವಿಕ್ರಮಾರ್ಕುಡು ಸಿನಿಮಾ ಬ್ಲಾಕ್‌ಬಸ್ಟರ್ ಆಗಿತ್ತು.
ರಾಜಮೌಳಿ ಸಿನಿಮಾ ರಿಮೇಕ್ ಮಾಡಿದ ಕಿಚ್ಚ ಸುದೀಪ್
ಬ್ಲಾಕ್‌ಬಸ್ಟರ್ ಸಿನಿಮಾವನ್ನ ರಿಮೇಕ್ ಮಾಡೋದು ದೊಡ್ಡ ಜಾಲೆಂಜಿಂಗ್ ಜಾಬೇ ಬಿಡಿ. ಆದರೆ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರವನ್ನಅದ್ಭುತವಾಗಿಯೇ ಕನ್ನಡಿಕರಣಗೊಳಿಸಿದ್ದರು. ಸಿನಿಮಾ ಪ್ರೇಮಿಗಳು ಇದನ್ನ ಕನ್ನಡ ಸಿನಿಮಾನೆ ಅನ್ನೋಮಟ್ಟಿಗೆ ರಿಮೇಕ್ ಮಾಡಿದ್ದರು.
ಸುದೀಪ್ ಈ ಒಂದು ಚಿತ್ರದಲ್ಲಿ ಕೇವಲ ಡೈರೆಕ್ಟರ್ ಆಗಿರಲಿಲ್ಲ. ಅಭಿನಯ ಕೂಡ ಮಾಡಿದ್ದರು. ಮದಕರಿ ಮತ್ತು ಮುತ್ತತ್ತಿ ಸತ್ಯರಾಜು ಅನ್ನುವ ಎರಡೆರಡು ಪಾತ್ರಗಳನ್ನ ನಿವರ್ಹಿಸಿದ್ದರು. ಒಂದರಲ್ಲಿ ಅಪ್ಪಟ ಪ್ರಾಮಾಣಿಕ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡರು.
ಡಬಲ್ ರೋಲ್ ಅಲ್ಲಿ ಕಿಚ್ಚ ಸುದೀಪ್ ಅಭಿನಯ
ಇನ್ನೂ ಒಂದು ಪಾತ್ರದಲ್ಲಿ ಚಾಲಾಕಿ ಕಳ್ಳನಾಗಿ ಅಬ್ಬರಿಸಿದರು. ವಿಶೇಷವಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ ಈ ಮೊದಲೇ ಹೋಲಿ ಅನ್ನುವ ಚಿತ್ರವನ್ನ ರಾಗಿಣಿ ಒಪ್ಪಿಕೊಂಡಿದ್ದರು. ಇದು ಬರೋದು ಲೇಟ್ ಆಯಿತು. ಹಾಗಾಗಿಯೇ ವೀರಮದಕರಿ ಚಿತ್ರವೇ ರಾಗಿಣಿಯ ಮೊದಲ ಸಿನಿಮಾ ಆಯಿತು.
ರಾಗಿಣಿ ದ್ವಿವೇದಿ ಮತ್ತು ಕಿಚ್ಚ ಸುದೀಪ್ ಜೋಡಿಯ ಈ ಚಿತ್ರ ಸಾಕಷ್ಟು ಜನರಿಗೆ ಇಷ್ಟ ಆಯಿತು. ಎಂ. ಎಂ. ಕೀರವಾಣಿ ಸಂಗೀತದ ಹಾಡುಗಳೂ ಜನಕ್ಕೆ ಇಷ್ಟ ಆದವು. ನಿರ್ಮಾಪಕ ದಿನೇಶ್ ಗಾಂಧಿ ದುಡ್ಡು ಹಾಕಿದ್ದ ಈ ಚಿತ್ರದ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು.
ವೀರ ಮದಕರಿ ಚಿತ್ರದ ಹಿಂದಿನ ಶಕ್ತಿ ಯಾರು ಗೊತ್ತೇ?
ಅಂತಹ ಈ ಚಿತ್ರ ಕಿಚ್ಚ ಸುದೀಪ್ ಅವರಿಗೆ ಹೆಸರು ತಂದು ಕೊಡ್ತು. ನಟನೆ ಮತ್ತು ನಿರ್ದೇಶನದ ಜೊತೆಗೆ ಬೇರೆ ಭಾಷೆಯ ಚಿತ್ರಗಳನ್ನ ಕನ್ನಡಕ್ಕೆ ತರುವ ಕಲೆಯನ್ನ ಸುದೀಪ್ ಸಿದ್ದಿಸಿಕೊಂಡಿದ್ದಾರೆ ಅನ್ನುವ ವಿಚಾರವೂ ಈ ಮೂಲಕ ತಿಳಿಯಿತು ಅಂತಲೇ ಹೇಳಬಹುದು.
ಇದನ್ನೂ ಓದಿ: Kantara Movie: ಕಾಂತಾರ ಸಿನಿಮಾದ ಹೊಸ ಅಪ್‌ಡೇಟ್ಸ್! ಅಭಿಮಾನಿಗಳು ದಿಲ್ ಖುಷ್!
ಕಿಚ್ಚನ ಈ ವೀರ ಮದಕರಿ ಸಿನಿಮಾ ಈಗ 14 ವರ್ಷ ಪೂರೈಸಿದ್ದು ವಿಶೇಷವಾಗಿ ಇಂದು ಅಂದ್ರೆ ಮಾರ್ಚ್-20, 2009 ರಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಹಾಗೆ ಈ ಸಿನಿಮಾ ಇಂದಿಗೂ ಜನರಿಗೆ ಇಷ್ಟ ಆಗುತ್ತದೆ. ಸಿನಿಮಾದ ಹಾಡುಗಳೂ ಸ್ಪೆಷಲ್ ಆಗಿಯೇ ಜನರನ್ನ ಈಗಲೂ ಸೆಳೆದು ಬಿಡುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ