Pailwaan: ಪೈಲ್ವಾನ್​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!

Kichcha Sudeep: ಕಿಚ್ಚನ ಕುಸ್ತಿ ಹಾಗೂ ಕಿಕ್ ಬಾಕ್ಸಿಂಗ್ ನೋಡೋಕೆ ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ. ಪ್ರೇಕ್ಷಕರಿಗೆ ಟ್ರೀಟ್ ಕೊಡೋಕೆ, ಕಿಚ್ಚ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಹೇಗಿತ್ತು ಸುದೀಪ್ ಅವರ ವರ್ಕೌಟ್ ಪ್ಲಾನ್ ಹೇಗಿತ್ತು ಗೊತ್ತಾ..? 

Anitha E | news18-kannada
Updated:September 11, 2019, 9:16 AM IST
Pailwaan: ಪೈಲ್ವಾನ್​ ಚಿತ್ರಕ್ಕಾಗಿ ಕಿಚ್ಚ ಸುದೀಪ್​ ಜಿಮ್​ನಲ್ಲಿ ಬೆವರಿಳಿಸಿದ ವಿಡಿಯೋ ಇಲ್ಲಿದೆ..!
ಪೈಲ್ವಾನ್​ ಆದ ಕಿಚ್ಚ ಸುದೀಪ್​
Anitha E | news18-kannada
Updated: September 11, 2019, 9:16 AM IST
ಕಿಚ್ಚನನ್ನು 'ಪೈಲ್ವಾನ್​' ಆಗಿ ಬೆಳ್ಳಿ ತೆರೆ ಮೇಲೆ ನೋಡೋಕೆ ಒಂದೇ ಒಂದು ದಿನ ಬಾಕಿ ಇದೆ. ಇಂದು ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆಯೇ ಚಿತ್ರಮಂದಿರಗಳ ತೆರೆ ಮೇಲೆ 'ಪೈಲ್ವಾನ್' ಅಬ್ಬರ ಆರಂಭವಾಗಲಿದೆ.

ಕಿಚ್ಚನ ಕುಸ್ತಿ ಹಾಗೂ ಕಿಕ್ ಬಾಕ್ಸಿಂಗ್ ನೋಡೋಕೆ ಅಭಿಮಾನಿಗಳಂತೂ ಕಾತರದಿಂದ ಕಾಯುತ್ತಿದ್ದಾರೆ. ಪ್ರೇಕ್ಷಕರಿಗೆ ಟ್ರೀಟ್ ಕೊಡೋಕೆ, ಕಿಚ್ಚ ಕೂಡ ಸಾಕಷ್ಟು ಶ್ರಮವಹಿಸಿದ್ದಾರೆ. ಹೇಗಿತ್ತು ಸುದೀಪ್ ಅವರ ವರ್ಕೌಟ್ ಪ್ಲಾನ್​ ಅಂತ ಮುಂದೆ ಓದಿ.

ಕಿಚ್ಚ ಸುದೀಪ್​


45 ವರ್ಷದ ಹರೆಯದರಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚು ಸೀರಿಯಸ್ ಆದ ಕಿಚ್ಚ ಹಲವು ತಿಂಗಳ ಕಾಲ ವರ್ಕೌಟ್ ಮಾಡಿದ್ದಾರೆ. ಬೆವರಿಳಿಸಿ, ಮೈ ಹುರಿಗೊಳಿಸಿಕೊಂಡಿದ್ದಾರೆ. 'ಪೈಲ್ವಾನ್' ಚಿತ್ರದಿಂದ ಪ್ರಾರಂಭವಾದ ಅವರ ವರ್ಕೌಟ್ ಪ್ಲಾನ್​, ಈಗ ಅವರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಫಿಟ್ನೆಸ್ ಬಗ್ಗೆ ಸುದೀಪ್ ಅಷ್ಟರ ಮಟ್ಟಿಗೆ ಸೀರಿಯಸ್ ಆಗಿದ್ದಾರೆ. ಆರೋಗ್ಯವೇ ಭಾಗ್ಯ, ಎಂಬುದು ಕಿಚ್ಚನ ಮಂತ್ರವಾಗಿದೆ.

ಇದನ್ನೂ ಓದಿ: Puneeth Rajkumar: ಯುವರತ್ನ ಸಿನಿಮಾ ಚಿತ್ರೀಕರಣದ ವೇಳೆ ಗಲಾಟೆ: ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಪ್ರತಿಭಟನೆ..!

ಕೇವಲ ಬಾಡಿ ಬಿಲ್ಡ್ ಮಾಡಿಕೊಂಡರೆ ಸಾಕಾ ? ಕುಸ್ತಿ ಕಲಿಯೋದು ಬೇಡವಾ ? ಕಿಕ್ ಬಾಕ್ಸಿಂಗ್ ತರಬೇತಿ ಪಡೆಯದೆ ಇರಲು ಸಾಧ್ಯವಾ ? ಹೀಗಾಗಿಯೇ ಕಿಚ್ಚ ಸುದೀಪ್ ಅಖಾಡಕ್ಕಿಳಿದು ಕುಸ್ತಿಯನ್ನೂ ಕಲಿತರು. ಪಟ್ಟು ಹಿಡಿಯೋದು ಹೇಗೆ ? ಎದುರಾಳಿಯನ್ನು ಜಗ್ಗಿ ಬೀಳಿಸೋದು ಹೇಗೆ ? ಅನ್ನೋದರಲ್ಲಿ ತರಬೇತಿ ಪಡೆದು ಮಾಸ್ಟರ್​ ಆಗಿದ್ದಾರೆ. ಅವರು

ಜೀವನದಲ್ಲಿ ಜಿಮ್​ ಮೆಟ್ಟಿಲೇರದ ಕಿಚ್ಚ, ಹೇಗೆ ವರ್ಕೌಟ್​ ಮಾಡಡ್ತಿದ್ದು ಅಂತ ಇಲ್ಲೊಂದು ವಿಡಿಯೋದಲ್ಲಿದೆ ನೋಡಿ.
Loading...
ಸಿನಿಮಾಗಾಗಿ ಕಿಚ್ಚ ತರಬೇತುದಾರರಿಂದ ಕಿಕ್ ಬಾಕ್ಸಿಂಗ್ ಕಲಿತಿದ್ದಾರೆ. ಬಾಕ್ಸಿಂಗ್ ಮಾಡುವಾಗ ಕೈ ಹೇಗಿರಬೇಕು? ಹೇಗೆ ಡಿಫೆಂಡ್ ಮಾಡಿಕೊಳ್ಳೋದು ? ಅಟ್ಯಾಕ್ ಮಾಡೋದ್ಹೇಗೆ ? ರಿಂಗ್ ಒಳಗೆ ಹೇಗೆ ಓಡಾಡುತ್ತಿರಬೇಕು ? ಪಂಚ್‍ಗಳಿಂದ ಬಚಾವಾಗೋದು... ಹೀಗೆ ಪಕ್ಕಾ ಬಾಕ್ಸರ್​ನಂತೆ ಕಿಚ್ಚ ಖಡಕ್‍ ಆಗಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ಗ್ಲೌಸ್ ಧರಿಸಿ ವಿದೇಶಿ ಸ್ಟೈಲ್‍ನಲ್ಲಿ ರಿಂಗ್ ಒಳಗೆ ಹೊಡೆದಾಡಿದ್ರೆ, ಮತ್ತೊಮ್ಮೆ ಮಣ್ಣಿನ ಅಖಾಡದಲ್ಲಿ ಬಡಿದಾಡಿದ್ದಾರೆ.ಇನ್ನು 'ಪೈಲ್ವಾನ್' ಚಿತ್ರದ ಮೂಲಕ ಬಾಲಿವುಡ್‍ನ 90ರ ದಶಕದ ಆ್ಯಕ್ಷನ್ ಸ್ಟಾರ್ ಸುನೀಲ್ ಶೆಟ್ಟಿ ಸ್ಯಾಂಡಲ್‍ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಸರ್ಕಾರ್ ಎಂಬ ಪಂಟರ್ ಕುಸ್ತಿ ಮಾಸ್ಟರ್ ಪಾತ್ರದಲ್ಲಿ ನಟಿಸುವ ಮೂಲಕ, ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಖಡಕ್ ಬಾಡಿ ಹಾಗೂ ಫೈಟ್ಸ್ ಮೂಲಕ ಆ್ಯಕ್ಷನ್ ಸ್ಟಾರ್ ಅಣ್ಣಾ ಅಂತಲೇ ಕರೆಸಿಕೊಳ್ಳುವ ಸುನೀಲ್, 'ಪೈಲ್ವಾನ್' ಚಿತ್ರದಲ್ಲೂ ಫೈಟ್ಸ್ ಸಮಯದಲ್ಲಿ ಕಿಚ್ಚ ಸುದೀಪ್‍ಗೆ ಕೆಲ ಟಿಪ್ಸ್ ನೀಡಿದ್ದಾರಂತೆ.

ಇದನ್ನೂ ಓದಿ: Kaun Banega Crorepati 11: ಕೌನ್​ ಬನೇಗ ಕರೋಡ್​ ಪತಿ ಕಾರ್ಯಕ್ರಮದಲ್ಲಿ ಈ ವಾರ ಸೃಷ್ಟಿಯಾಗಲಿದೆ ಇತಿಹಾಸ..!

ಅಷ್ಟೇ ಯಾಕೆ, ಸುದೀಪ್ ಮತ್ತು ಸುನೀಲ್ ಶೆಟ್ಟಿ ಗೆಳೆತನ ಶುರುವಾಗಿದ್ದೇ ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್)ನಿಂದ. ಹೀಗಾಗಿಯೇ ಸೆಟ್‍ನಲ್ಲಿದ್ದರೂ ತಮ್ಮ ಕ್ರಿಕೆಟ್ ಆಟವನ್ನು ಮುಂದುವರಿಸಿದ್ದಾರೆ ಕಿಚ್ಚ ಮತ್ತು ಸುನೀಲ್ ಶೆಟ್ಟಿ. ಶೂಟಿಂಗ್ ಬ್ರೇಕ್‍ನಲ್ಲಿ ಬ್ಯಾಟ್, ಬಾಲ್ ಹಿಡಿದು ಕ್ರಿಕೆಟ್ ಆಡೋದು, ಕಿರಿಕ್ ಮಾಡಿಕೊಳ್ಳೋದೂ ಸಹ 'ಪೈಲ್ವಾನ್' ಸೆಟ್‍ನಲ್ಲಿ ಕಾಮನ್ ಆಗಿತ್ತು.

ಹಲವಾರು ವಿಶೇಷತೆಗಳಿಂದ ಕೂಡಿರುವ 'ಪೈಲ್ವಾನ್', ಪಂಚ ಭಾಷೆಗಳಲ್ಲಿ ಪಂಚ್ ನೀಡಲು ಇದೇ ಗುರುವಾರ ತೆರೆಗೆ ಅಪ್ಪಳಿಸಲಿದ್ದಾನೆ. 'ಬೇಗ ಬಾರೋ ಪೈಲ್ವಾನ...' ಅಂತ ಕಾತರದಿಂದ ಕಾಯುತ್ತಿರುವ ಕಿಚ್ಚನ ಅಭಿಮಾನಿಗಳಿಗೆ, 12ರಿಂದ 'ಬಂದ ನೋಡೋ ಪೈಲ್ವಾನ್...' ಅಂತ ಹಾಡಿ ಕುಣಿಯಲಿದ್ದಾರೆ.

Evelyn Sharma: ವೈರಲ್​ ಆಯ್ತು 'ಸಾಹೋ' ಬ್ಯೂಟಿಯ ಬಿಕಿನಿ ಫೋಟೋಗಳು

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...