ಇಂದು 'ನಟಸಾರ್ವಭೌಮ' ಟ್ರೈಲರ್​ ರಿಲೀಸ್​; ಪುನೀತ್​ಗೆ ಕಿಚ್ಚ ಸುದೀಪ್​ ಹೇಳಿದ್ದೇನು?

ಇಂದು ಬೆಳಗ್ಗೆ 10 ಗಂಟೆಗೆ ಪುನೀತ್​ ಅಭಿನಯದ ಬಹುನಿರೀಕ್ಷಿತ 'ನಟಸಾರ್ವಭೌಮ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗಲಿದೆ.

ಸುದೀಪ್- ಪುನೀತ್

ಸುದೀಪ್- ಪುನೀತ್

  • News18
  • Last Updated :
  • Share this:
ಪವನ್ ಒಡೆಯರ್​ ನಿರ್ದೇಶನದಲ್ಲಿ ಪುನೀತ್​ ರಾಜ್​ಕುಮಾರ್​ ಅಭಿನಯಿಸಿರುವ 'ನಟಸಾರ್ವಭೌಮ' ಸಿನಿಮಾದ ಟ್ರೈಲರ್​ ಇಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ. ರಾಕ್​ಲೈನ್​ ವೆಂಕಟೇಶ್​ ನಿರ್ಮಿಸಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆಗಳೂ ಸಾಕಷ್ಟಿವೆ. ಈಗಾಗಲೇ ಈ ಸಿನಿಮಾದ ಆಡಿಯೋ ರಿಲೀಸ್​ ಆಗಿದ್ದು, ಯೋಗರಾಜ್​ ಭಟ್​ ಬರೆದಿರುವ ಎಣ್ಣೆ ಸಾಂಗ್​ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಟಸಾರ್ವಭೌಮ ಸಿನಿಮಾದ ಫಸ್ಟ್​ ಲುಕ್​​ಗೂ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಕೈಯಲ್ಲಿ ಕ್ಯಾಮೆರಾ ಹಿಡಿದು ಸ್ಟೈಲಿಶ್​ ಆಗಿ ನಿಂತಿದ್ದ ಪುನೀತ್​ ಪೋಸ್ಟರ್​ ಕಂಡು ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿತ್ತು. ಅಂದಹಾಗೆ, ಈ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೋಡಿಯಾಗಿ ರಚಿತಾ ರಾಮ್​ ಕಾಣಿಸಿಕೊಳ್ಳಲಿದ್ದಾರೆ. ಇಂದು ಅವರ ಇನ್ನೊಂದು ಸಿನಿಮಾ 'ಸೀತಾರಾಮ ಕಲ್ಯಾಣ' ಕೂಡ ರಿಲೀಸ್​ ಆಗಿದೆ. ಅದರ ನಡುವೆ ಇದೇ ದಿನ ನಟಸಾರ್ವಭೌಮ ಸಿನಿಮಾದ ಟ್ರೈಲರ್​ ಕೂಡ ಬಿಡುಗಡೆಯಾಗುತ್ತಿರುವ ರಚಿತಾಗೆ ಡಬಲ್ ಧಮಾಕ ಎಂದೇ ಹೇಳಬಹುದು.

ಇದನ್ನೂ ಓದಿ: ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ಕದನ ವಿರಾಮ; ಸಿಎಂ ಎಚ್​ಡಿಕೆ ಮಗನ ಸಿನಿಮಾ ವಿಕ್ಷೀಸಿದ ಸರ್ವಪಕ್ಷ ಶಾಸಕರು

ಇಂದು ಟ್ರೈಲರ್​ ಬಿಡುಗಡೆ​ ಮಾಡುತ್ತಿರುವ ನಟಸಾರ್ವಭೌಮ ತಂಡಕ್ಕೆ ಕಿಚ್ಚ ಸುದೀಪ್​ ಶುಭಾಶಯ ಹೇಳಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಕಿಚ್ಚ ಸುದೀಪ್​ ಹಾಗೂ ರಾಜ್​ಕುಮಾರ್​ ಫ್ಯಾಮಿಲಿ ನಡುವೆ ಉತ್ತಮವಾದ ನಂಟಿದೆ. ಶಿವರಾಜ್​ ಕುಮಾರ್​, ಪುನೀತ್​ ಜೊತೆಗೆ ಸುದೀಪ್​ ಬಹಳ ಆಪ್ತ ಸಂಬಂಧ ಹೊಂದಿದ್ದಾರೆ. ತಾವೊಬ್ಬ ಸ್ಟಾರ್​ ಆಗಿದ್ದುಕೊಂಡು ಬೇರೆ ಸ್ಟಾರ್​ಗಳ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ಸುದೀಪ್​ ಗುಣದ ಬಗ್ಗೆ ಟ್ವಿಟ್ಟರ್​ನಲ್ಲಿ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.ಇದನ್ನೂ ಓದಿ:  ಜನವರಿ 25ರಿಂದ 'ನಟಸಾರ್ವಭೌಮ'ನ ಜಾತ್ರೆ: ಫೆಬ್ರುವರಿಯಲ್ಲಿ ತೆರೆ ಮೇಲೆ ಅಪ್ಪು ಯಾತ್ರೆ..!

ಟ್ವೀಟ್ ಮೂಲಕ ನಟ ಪುನೀತ್ ರಾಜ್​ಕುಮಾರ್​, ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ಗೆ ಶುಭಾಶಯ ಕೋರಿರುವ ಸುದೀಪ್, ನಟಸಾರ್ವಭೌಮ ಸಿನಿಮಾ ಮುಂಜಾನೆಯ ಸೂರ್ಯನಂತೆ ಹೊಳೆಯಲಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಲಿ. ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

ಇದಕ್ಕೆ ಪುನೀತ್​ ರಾಜ್​ಕುಮಾರ್​ ರೀಟ್ವೀಟ್​ ಮಾಡಿದ್ದು, ಥ್ಯಾಂಕ್ಯೂ ಸುದೀಪ್​. ನಿಮ್ಮ ಅಭಿನಯದ ಪೈಲ್ವಾನ್​ ಟೀಸರ್​ ಕೂಡ ಸಿನಿಮಾ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸುದೀಪ್​ ಮತ್ತು ಪುನೀತ್​ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಲ್ಯದ ಗೆಳೆಯರು ನೀವು. ಸದಾ ಹೀಗೇ ಒಬ್ಬರಿಗೊಬ್ಬರು ಪ್ರೋತ್ಸಾಹಿಸಿಕೊಳ್ಳುತ್ತಾ ಇರಿ ಎಂದು ಹಳೇ ಫೋಟೋಗಳನ್ನು ಹಾಕಿ ಸಂತೋಷ ಹೊರಹಾಕಿದ್ದಾರೆ.

 

First published: