ಬಿಗ್ ಬಾಸ್ ಕನ್ನಡ ಸೀಸನ್ 8 ಮುಕ್ತಾಯವಾದ ನಂತರ ಬಿಗ್ ಬಾಸ್ ಮಿನಿ ಸೀಸನ್ ಆರಂಭವಾಗಿದೆ. ಆಗಸ್ಟ್ 14ರಿಂದ ಅದೇ ಬಿಗ್ ಬಾಸ್ ಮನೆಯಲ್ಲಿ ಅದೇ ಕ್ಯಾಮೆರಾಗಳ ಮುಂದೆ ಕೇವಲ 6 ದಿನಗಳ ಕಾಲ ಕೇವಲ ಸೆಲೆಬ್ರಿಟಿಗಳು ಮಾತ್ರ ಇಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಲ ಕಳೆಯುತ್ತಿದ್ದಾರೆ ಎಂದ ಮಾತ್ರಕ್ಕೆ ಅಲ್ಲಿ ಸುಮ್ಮನೆ ಟೈಮ್ಪಾಸ್ಗಾಗಿ ಈ ಸೆಲೆಬ್ರಿಟಿಗಳನ್ನು ಕಳುಹಿಸಲಾಗಿಲ್ಲ. ಬದಲಾಗಿ ಅವರಿಗೂ ಸಹ ಕೆಲವು ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಎಂದಿನಂತೆ ಇತರೆ ಸ್ಪರ್ಧಿಗಳು ಮಾಡಿದಷ್ಟು ಗಂಭೀರವಾಗಿ ಈ ಸ್ಪರ್ಧಿಗಳು ಟಾಸ್ಕ್ಗಳಲ್ಲಿ ಭಾಗಿಯಾಗದಿದ್ದರೂ ಪ್ರೇಕ್ಷಕರನ್ನು ರಂಜಿಸುವಲ್ಲಿ ಮಾತ್ರ ಹಿಂದೆ ಬೀಳುತ್ತಿಲ್ಲ. ಆಗಸ್ಟ್ 14ರಿಂದ ಆರಂಭವಾಗಿರುವ ಈ ಕಾರ್ಯಕ್ರಮ ಆಗಸ್ಟ್ 28ರಂದು ಮುಕ್ತಾಯವಾಗಲಿದೆ. ಆದರೆ,ಈ ಮಿನಿ ಸೀಸನ್ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಇರುತ್ತೋ ಅಥವಾ ಇಲ್ಲವೋ ಅನ್ನೋದು ಖಚಿತವಾಗಿರಲಿಲ್ಲ.
ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ನಟಿಸುತ್ತಿರುವ 15 ಮಂದಿ ಕಿರುತೆರೆ ಕಲಾವಿದರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ನ ಈ ಹಿಂದೆ ಭಾಗಿಯಾಗಿ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮದಲ್ಲಿದ್ದಾರೆ. ಮೊದಲಿಗೆ ಈ ಜರ್ನಿ ಕನ್ನಡ ಬಿಗ್ ಬಾಸ್ ಫ್ಯಾಮಿಲಿ ಎಂದು ಆರಂಭವಾಗಿ 6 ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗಿತ್ತು. ಈಗ ಈ ಕಾರ್ಯಕ್ರಮ 15 ದಿನಗಳ ಕಾಲ ಪರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರತಿ ರಾತ್ರಿ 10.30ರಿಂದ 11.30ರವರೆಗೆ ಈ ಮಿನಿ ಸೀಸನ್ನ ಸಂಚಿಕೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಎರಡು ವಾರಾಂತ್ಯಗಳು ಸಿಗಲಿವೆ. ಈ ವಾರಾಂತ್ಯದ ಸಂಚಿಕೆಗಳನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರಂತೆ ಎಂದೂ ಹೇಳಲಾಗುತ್ತಿತ್ತು.
ಇದನ್ನೂ ಓದಿ: Kichcha Sudeep- Shivarajkumar: ಶಿವಣ್ಣನ 124ನೇ ಸಿನಿಮಾಗೆ ಕ್ಲ್ಯಾಪ್ ಮಾಡಿದ ಕಿಚ್ಚ ಸುದೀಪ್
ಹೌದು, ಈ ಹಿಂದೆ ಮಿನಿ ಸೀಸನ್ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳುತಾರೋ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಈಗ ಈ ಕುರಿತಂತೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರ ಜತೆಗಿನ ಒಂದು ಫೋಟೋ ಶೇರ್ ಮಾಡಿರುವ ಪರಮೇಶ್ವರ ಗುಂಡ್ಕಲ್ ಅವರು, ಈ ಬಿಗ್ ಬಾಸ್ ಮಿನಿ ಸೀಸನ್ನ ಫಿನಾಲೆಯನ್ನು ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಿರೂಪಕರಾದ ನಿರಂಜನ್ ದೇಶಪಾಂಡೆ, ಅಕುಲ್ ಬಾಲಾಜಿ, ನಯನಾ ನಾಗರಾಜ್, ಹೃತ್ವಿಕ್ ಮಠದ, ಅಭಿನವ್ ವಿಶ್ವನಾಥನ್, ಚಂದನಾ ಅನಂತಕೃಷ್ಣ, ,ರಮೋಲಾ, ಕಿರಣ್ ರಾಜ್, ಧನುಷ್, ಭ್ವ್ಯಾ ಗೌಡ, ತ್ರಿವಿಕ್ರಮ್, ಗಗನ್ ಚಿನ್ನಪ್ಪ, ಪ್ರೇರಣಾ ಕಂಬಂ ಹಾಗೂ ಕೌಸ್ತುಬಾ ಮಣಿ ಸ್ಪರ್ಧಿಗಳಾಗಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಲಾಗುತ್ತಿದ್ದ ಟಾಸ್ಕ್ಗಳನ್ನೇ ಮತ್ತೆ ಕೊಡಲಾಗುತ್ತಿದೆ. ಆದರೆ, ಈ ಮಿನಿ ಸೀಸನ್ನಲ್ಲಿ ಗೆದ್ದವರಿಗೆ ಯಾವ ರೀತಿಯ ಬಹುಮಾನ ಸಿಗಲಿದೆ ಅನ್ನೋದು ಮಾತ್ರ ಇನ್ನು ಬಹಿರಂಗವಾಗಿಲ್ಲ. ಆದರೆ ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಗೆದ್ದ ಸ್ಪರ್ಧಿಗಳಿಗೆ ವಿವಿಧ ರೀತಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದಂತೆ. ಇನ್ನು ಫಿನಾಲೆಯಲ್ಲಿ ಏನೆಲ್ಲ ವಿಶೇಷತೆ ಇರಲಿದೆ ಅನ್ನೋದು ಮಾತ್ರ ರಿವೀಲ್ ಆಗಿಲ್ಲ.
ಇದನ್ನೂ ಓದಿ: Rashmika Mandanna: ಮಾಡೋಕೆ ಕೆಲಸ ಇಲ್ಲ ಅಂದ್ರೆ ರಶ್ಮಿಕಾ ಮಂದಣ್ಣ ಏನೆಲ್ಲ ಮಾಡ್ತಾರೆ ನೋಡಿ..!
ಬಿಗ್ ಬಾಸ್ ಸೀಸನ್ 8 ಮುಗಿದಿದ್ದು, ಮಜಾ ಭಾರತದ ಹಾಸ್ಯ ಕಲಾವಿದ ಮಂಜು ಪಾವಗಡ ವಿನ್ನರ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿ ಮುಂದಿನ ಸೀಸನ್ಗೆ ತಯಾರಿ ಮಾಡಿಕೊಳ್ಳುತ್ತಿದೆಯಂತೆ. ಹೌದು, ಶೀಘ್ರದಲ್ಲೇ ಬಿಗ್ ಬಾಸ್ ಕನ್ನಡ 9ನೇ ಸೀಸನ್ನ ಸಂಚಿಕೆಯ ಕುರಿತಾಗಿ ಪ್ರಕಟಣೆಯಾಗಲಿದೆಯಂತೆ. ಈ ಸಂಚಿಕೆ ಅಕ್ಟೋಬರ್ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ