Bigg Boss OTT: ಸೋನುಗೌಡ ಕಳ್ಳಾಟಕ್ಕೆ ಸಿಟ್ಟಾದ ಕಿಚ್ಚ; ಟ್ರೋಲ್​ ರಾಣಿಗೆ ಲಾಸ್ಟ್​ ವಾರ್ನಿಂಗ್​ ಕೊಟ್ಟ ಸುದೀಪ್​​!

ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದು ಕಿಚ್ಚ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

ಸೋನು ಗೌಡ, ಸುದೀಪ್​

ಸೋನು ಗೌಡ, ಸುದೀಪ್​

  • Share this:
ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. 4 ವಾರಗಳನ್ನು ಮುಗಿಸಿ  5ನೇ ವಾರಕ್ಕೆ ಕಾಲಿಟ್ಟಿದ್ದಾರೆ.  ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda) ಬಿಗ್ ಬಾಸ್ ಮನೆಯಲ್ಲೂ ಭಾರೀ ಸದ್ದು ಮಾಡ್ತಿದ್ದಾರೆ. ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. ವಾರ ವಾರವೂ ಏನಾದ್ರೂ ಕಿರಿಕ್​ ಮಾಡಿಕೊಳ್ಳೋ ಸೋನು ಗೌಡ ಅವರನ್ನು ಸುದೀಪ್​ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬಿಗ್​ ಬಾಸ್​ಗೆ ಗೌರವ ನೀಡಿಲ್ಲ ಸೋನು ಗೌಡ

ಬಿಗ್​ ಬಾಸ್​ಗೆ ಮನೆ ಮಂದಿಯೆಲ್ಲಾ ಗೌರವ ಕೊಡ್ಬೇಕು, ಅಲ್ಲದೇ ಅವರು ನೀಡೋ ಆದೇಶಗಳನ್ನು ಪಾಲಿಸೋದು ಸ್ಪರ್ಧಿಗಳ ಕರ್ತವ್ಯವಾಗಿರುತ್ತದೆ. ಆದರೆ ಬಿಗ್​ ಬಾಸ್​ ನೀಡಿದ ಆದೇಶಗಳಿಗೆ ಸೋನು ಗೌಡ ಅವರು ಗೌರವ ನೀಡಿಲ್ಲ. ಅಷ್ಟೇ ಅಲ್ಲದೇ, ಬಿಗ್​ ಬಾಸ್​ಗೆ ಆವಾಜ್​ ಹಾಕುವ ರೀತಿಯಲ್ಲಿ ಅವರು ವರ್ತಿಸಿದ್ದನ್ನು ಎಲ್ಲರೂ ನೋಡಿದ್ದಾರೆ.

Bigg Boss Kannada OTT Host Kiccha Sudeep schools Sonu Srinivas Gowda yet again
ಸೋನು ಗೌಡ, ಸುದೀಪ್​​


ಸೋನು ಗೌಡಗೆ ಸುದೀಪ್​ ತರಾಟೆ

ವಾರದ ಕಥೆ ಕಿಚ್ಚನ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಬಿಗ್​ ಬಾಸ್​ ಮನೆಯಲಿ ಸೋನು ಗೌಡ ಅವರ ವರ್ತನೆಯನ್ನು ಖಂಡಿಸಿದ್ದಾರೆ. ಬಿಗ್​ ಬಾಸ್​ಗೆ ಅಪಮಾನ ಮಾಡೋ ರೀತಿ ನಡೆದುಕೊಂಡ ಸೋನುಗೌಡ ಅವರನ್ನು ಸುದೀಪ್​ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್​ಬಾಸ್​ ಮನೆಯಲ್ಲಿ ಡಬಲ್​ ಎಲಿಮಿನೇಷನ್; ಚೈತ್ರಾ, ಅಕ್ಷತಾ ಕುಕ್ಕಿ ಔಟ್​!

ನಿಮಗೆ ಬಿಗ್​ ಬಾಸ್ ಆದೇಶ ನೀಡೋದಿಲ್ಲ

ನಿಮ್ಮ ಮಾತುಗಳು ಕ್ಯೂಟ್​ ಆಗಿ ಇರಲಿಲ್ಲ. ಬಿಗ್​ ಬಾಸ್​ಗೆ ಅವಮಾನ ಮಾಡುವ ರೀತಿಯಲ್ಲಿ ಇತ್ತು. ಇನ್ಮುಂದೆ ನಿಮಗೆ ಬಿಗ್​ ಬಾಸ್​ ಆದೇಶವೇ ನೀಡುವುದಿಲ್ಲ ಎಂದು ಕಿಚ್ಚ ಸುದೀಪ್​ ಎಚ್ಚರಿಕೆ ನೀಡಿದ್ದಾರೆ. ಸೋನು ಗೌಡ ವರ್ತನೆಗೆ ಸುದೀಪ್​ ಕೆಂಡಾಮಂಡಲರಾದ್ರು.

ಬಿಗ್​ ಬಾಸ್​​ ಮನೆಯಲ್ಲಿ ಸೋನುಗೌಡ

ಬಿಗ್​ ಬಾಸ್ ಕನ್ನಡ ಒಟಿಟಿ ಮನೆಯಲ್ಲಿ ಅಡುಗೆ ಮಾಡುವುದು ಮುಖ್ಯ ಕೆಲಸ. ಎಲ್ಲರೂ ಅಡುಗೆ ಕೆಲಸದಲ್ಲಿ ಭಾಗಿಯಾದರೆ ಒಳ್ಳೆಯದು. ಆದರೆ ಸೋನು ಶ್ರೀನಿವಾಸ್​ ಗೌಡ ಅವರು ಅಡುಗೆ ವಿಚಾರದಲ್ಲಿ ಕಳ್ಳಾಟ ಆಡಿದ್ದಾರೆ. ತಮಗೆ ಅಡುಗೆ ಬರುತ್ತದೆ ಎಂಬ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ನಾಲ್ಕನೇ ವಾರದಲ್ಲಿ ಆ ಸತ್ಯ ಬಯಲಾಗಿದೆ. ಇದನ್ನು ಗಮನಿಸಿದ ಸುದೀಪ್​  ಸೋನುಗೌಡಗೆ  ನೇರವಾಗಿ ಬೆಂಡೆತ್ತಿದ್ದಾರೆ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ತಪ್ಪೊಪ್ಪಿಕೊಂಡು ಸೋನುಗೌಡ ಕಣ್ಣೀರು

ಸೋನು ಗೌಡ ಅವರು ಮಾತನಾಡುವಾಗ ಪದೇ ಪದೇ ಉಗಿಯುತ್ತಾರೆ. ಅದನ್ನೂ ಸುದೀಪ್​ ಪ್ರಶ್ನಿಸಿದ್ದಾರೆ. ಮಾಡಿದ ತಪ್ಪುಗಳನ್ನು ವಾರದ ಪಂಚಾಯಿತಿಯಲ್ಲಿ ಎಲ್ಲರ ಎದುರು ತಪ್ಪು ಒಪ್ಪಿಕೊಂಡು ಸೋನು ಗೌಡ ಕಣ್ಣೀರು ಹಾಕಿದ್ದಾರೆ. ಟ್ರೋಲ್​  ರಾಣಿಗೆ ಸುದೀಪ್​ ಅನೇಕ ಬಾರಿ ವಾರ್ನಿಂಗ್ ಕೊಟ್ರು ಸೋನು ಮಾತ್ರ ಯಾರ ಮಾತು ಕೇಳ್ತಿಲ್ಲ

a movie based social media star sonu srinivas gowda screens pvn
ಸೋನು ಗೌಡ


ಮನೆ ಮಂದಿಗೂ ವಾರ್ನಿಂಗ್​ ಕೊಟ್ಟ ಸುದೀಪ್​

ದೊಡ್ಮನೆಯಲ್ಲಿ ಕೆಲವರು ಬಳಸುವ ಭಾಷೆ ಕೂಡ ಸುದೀಪ್​ಗೆ ಹಿಡಿಸಿಲ್ಲ. ಆ ಬಗ್ಗೆಯೂ ಚಾಟಿ ಬೀಸಿದ್ದಾರೆ. ನಿಮ್ಮಲ್ಲಿ ತುಂಬ ಜನ ಮಾತನಾಡುವ ಏಕವಚನ ನಿಜಕ್ಕೂ ಚಪ್ಪಲಿ ತಗೊಂಡು ಹೊಡೆದಂತೆ ಇರುತ್ತೆ. ಸ್ನೇಹಿತರಾದ ನಂತರ ಏಕವಚನ ಇರಬಾರದು ಅಂತಲ್ಲ. ಆದರೆ ನಿಮ್ಮ ಏಕವಚನದಲ್ಲಿ ಗೌರವ ಕಾಣಿಸಿಲ್ಲ ಎಂದು ಸುದೀಪ್​ ಹೇಳಿದ್ದು ಮನೆ ಮಂದಿಗೆಲ್ಲಾ ವಾರ್ನಿಂಗ್​ ನೀಡಿದ್ದಾರೆ.
Published by:Pavana HS
First published: