Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್​ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್​ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ ಎಂದು ಸುದೀಪ್​ ಹೇಳಿದ್ದಾರೆ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  ಎರಡನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಸ್ಪೂರ್ತಿ ಗೌಡ ಹೊರ ಹೋಗಿದ್ದಾರೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದರು . ಈ ಪೈಕಿ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಕುತೂಹಲಕ್ಕೆ ತೆರೆಬಿದ್ದಿದ್ದು, ಅತಿ ಕಡಿಮೆ ವೋಟ್ ಪಡೆದು ಸ್ಫೂರ್ತಿ ಗೌಡ (Spoorthi Gowda) ಎಲಿಮಿನೇಟ್ ಆಗಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್​, ಬಿಗ್​ ಬಾಸ್ ಮನೆಯಲ್ಲಿರೋ ಜಸ್ವಂತ್​ ಹಾಗೂ ನಂದುಗೂ ಖಡಕ್ ವಾರ್ನಿಂಗ್​ ಕೊಟ್ಟಿದ್ದಾರೆ.  

ಜಶ್ವಂತ್​ಗೆ ವಾರ್ನಿಂಗ್​ ಕೊಟ್ಟ ಸುದೀಪ್​

ಬಿಗ್​ ಬಾಸ್​​ಗೆ ಎಂಟ್ರಿ ಕೊಟ್ಟಾಗ ಜಶ್ವಂತ್​ ಹಾಗೂ ನಂದು ಒಂದೇ ಸ್ಪರ್ಧಿಗಳೆಂದು ಘೋಷಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರಿಬ್ಬರು ಪ್ರತ್ಯೇಕವಾಗಿ ಆಟ ಮುಂದುವರಿಸಬೇಕು ಎಂದು ಬಿಗ್​ ಬಾಸ್​ ಆದೇಶಿಸಿದರು. ಆದರೂ ಕೂಡ ಜಶ್ವಂತ್​ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ. ಅದನ್ನು ಕಿಚ್ಚ ಸುದೀಪ್ ಗಮನಿಸಿದ್ದಾರೆ. ಈ ಬಗ್ಗೆ ಜಶ್ವಂತ್​​ರನ್ನು ಸುದೀಪ್​ ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಚರ್ಚೆ ಮಾಡಿ ನಾಮಿನೇಟ್​ ಮಾಡುವಂತಿಲ್ಲ

ಪ್ರತಿ ವಾರ ಎಲ್ಲರೂ ಒಬ್ಬೊಬ್ಬರನ್ನು ನಾಮಿನೇಟ್​ ಮಾಡಬೇಕು. ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್​ ಮಾಡಬೇಕೇ ಹೊರತು, ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ. ಆದರೆ ಜಶ್ವಂತ್​ ಅವರು ಆ ನಿಯಮ ಮುರಿದಿದ್ದಾರೆ. ಗರ್ಲ್​ಫ್ರೆಂಡ್​ ನಂದು ಜೊತೆ ಅವರು ನಾಮಿನೇಷನ್​ ಬಗ್ಗೆ ಚರ್ಚೆ ಮಾಡಿದ್ದರು. ಅದನ್ನು ಗಮನಿಸಿದ ಸುದೀಪ್​ ಅವರು ಎಚ್ಚರಿಕೆ ನೀಡಿದ್ದಾರೆ.

Bigg Boss Kannada OTT 14 and 15th contestants Jashwanth Bopanna and Nandini life story
ಜಶ್ವಂತ್ ಮತ್ತು ನಂದು


ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ!?

ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್​ ಮಾಡುವಂತಿಲ್ಲ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ಇದನ್ನು ಜಶ್ವಂತ್​ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು.

ಬಿಗ್​ ಬಾಸ್​ ಮನೆಯಿಂದ ಔಟ್

ಸದ್ಯ ಲೋಕೇಶ್​ ಮತ್ತು ಅರ್ಜುನ್​ ರಮೇಶ್​ ಅವರು ಗಾಯದ ಸಮಸ್ಯೆಯ ಕಾರಣಕ್ಕೆ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ಕಿರಣ್​ ಯೋಗೇಶ್ವರ್​ ಹಾಗೂ ಸ್ಫೂರ್ತಿ ಗೌಡ ಅವರು ಕಡಿಮೆ ವೋಟ್​ ಪಡೆದು ಎಲಿಮಿನೇಟ್​ ಆಗಿದ್ದಾರೆ. ಇನ್ನುಳಿದ 12 ಜನರು ತಮ್ಮದೇ ತಂತ್ರಗಳ ಮೂಲಕ ಆಟ ಮುಂದುವರಿಸಿದ್ದಾರೆ.

ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಫೂರ್ತಿ ಗೌಡ, ಸಾನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್​ ಅಡಿಗ, ಆರ್ಯವರ್ಧನ್ ಗುರೂಜಿ ಮೇಲೆ ನಾಮಿನೇಟ್​ ಆಗಿದ್ರು. ಇವರಲ್ಲಿ ಎಲ್ಲರೂ ಟಾಸ್ಕ್​ನನ್ನು ಉತ್ತಮವಾಗಿ ಆಡಿದ್ರು. ಆದ್ರೆ ಸ್ಫೂರ್ತಿ ಗೌಡ ನೀಡಿದ ಪರ್ಫಾರ್ಮೆನ್ಸ್ ಕಡಿಮೆ ಹೀಗಾಗಿ ಅವರಿಗೆ ಹೆಚ್ಚು ವೋಟ್​ ಬಿದ್ದಿಲ್ಲ.

ಇದನ್ನೂ ಓದಿ: Bigg Boss OTT: ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸ್ಪರ್ಧಿಗಳ ಸರ್ಕಸ್, ಪ್ರೇಕ್ಷಕರಿಗೆ ಮಜವೋ ಮಜ!

ಸ್ಪೂರ್ತಿ ಗೌಡಗೆ ಅತಿ ಕಡಿಮೆ ವೋಟ್​

ಮೊದಲು ರಾಕೇಶ್ ಸೇಫ್ ಎಂದು ಸುದೀಪ್ ಘೋಷಿಸಿದರು. ನಂತರ ಆರ್ಯವರ್ಧನ್, ಸಾನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್ ಎಂದು ಸುದೀಪ್ ಘೋಷಿಸಿದರು. ಬಳಿಕ ಸ್ಫೂರ್ತಿ ಹೊರ ಹೋಗುತ್ತಿರುವ ಬಗ್ಗೆ ತಿಳಿಸಿದ್ರು.

ಸ್ಪೂರ್ತಿಗೆ ಕಿಚ್ಚ ಸುದೀಪ್​ ಕ್ಲಾಸ್​

ಟಾಸ್ಕ್​ ವಿಚಾರದಲ್ಲಿ ನೀವು ತಪ್ಪು ಮಾಡಿದ್ರಿ ಎಂದು ಸುದೀಪ್​ ಹೇಳಿದ್ದಾರೆ. ನಿಮಗೆ ಆಟವಾಡಲು ಚಾನ್ಸ್​ ಸಿಕ್ಕಿದ್ರು ಬಳಸಿಕೊಳ್ಳಲಿಲ್ಲ ಯಾಕೆ? ಉದಾಸೀನಾ ತೋರಿದ್ರಿ ಎಂದು ಸುದೀಪ್​ ಕಿಡಿಕಾರಿದ್ರು.
Published by:Pavana HS
First published: