Vikrant Rona: ವಿಕ್ರಾಂತ್ ರೋಣ ಟ್ರೈಲರ್​ಗೆ ಭರ್ಜರಿ ರೆಸ್ಪಾನ್ಸ್, ದಾಖಲೆ ಬರೆದ ಕಿಚ್ಚ

'ವಿಕ್ರಾಂತ್ ರೋಣ' ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆಯಿಂದ ಭರ್ಜರಿ ರೆಸ್ಪಾನ್ಸ್ ದೊರಕಿತು. ಟ್ರೈಲರ್​ ಗಾಗಿ ಕಾಯುತ್ತಿದ್ದ ಅಬಿಮಾನಿಗಳಿಗೆ ಸೂಪರ್ ಆಗಿ ಕಿಚ್ಚನ ದರ್ಶನವಾಗಿದೆ. 

ವಿಕ್ರಾಂತ್ ರೋಣ

ವಿಕ್ರಾಂತ್ ರೋಣ

  • Share this:
ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್​ ರೋಣ (Vikrant Rona)​ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ​​ ಬಿಡುಗಡೆ ಆಗಿದ್ದು, ಎಲ್ಲಡೆಯಿಂದ ಭಜರ್ರಿ ರೆಸ್ಪಾನ್ಸ್ ದೊರಕಿದೆ. ಟ್ರೈಲರ್ ನೋಡಿದ ಕನ್ನಡ ಸಿನಿ ರಸಿಕರು ಇದು ಸ್ಯಾಂಡಲ್​ ವುಡ್​ನ್ನು ಇನ್ನೊಂದು ಲೇವಲ್​ಗೆ ತೆಗೆದುಕೊಂಡು ಹೋಗುವುದು ಪಕ್ಕಾ ಎನ್ನುತ್ತಿದ್ದಾರೆ. ಕಿಚ್ಚನ (Kiccha) ಅಭಿಮಾನಿಗಳಿಗಂತೂ ಇದುಒಂದು ಹಬ್ಬದ ಊಟದಂತಾಗಿದೆ. ಇದರ ನಡುವೆ ಚಿತ್ರವು ಕನ್ನಡ ಸೇರಿದಮತೆ 6 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಎಲ್ಲಾ ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಯೆಗಳು ಸಿಗುತ್ತಿದೆ. ಈಗಾಗಲೇ ಟ್ರೈಲರ್​​ ಲಾಂಚ್ (Trailer Launch) ಕಾರ್ಯಕ್ರಮದಲ್ಲಿ ವಿಕ್ರಾಂತ್ ರೋಣನನ್ನು ಕಣ್ಣುತುಂಬಿಸಿಕೊಂಡಿದ್ದ ಗಣ್ಯರೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗುವ ಮೂಲಕ ಹೊಸ ಸಂಚಲನವನ್ನೇ ಮೂಡಿಸಿದೆ. ಟ್ರೈಲರ್ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಆಗಿದೆ.

ದಾಖಲೆ ಬರೆದ ವಿಕ್ರಾಂತ್ ರೋಣ:

'ವಿಕ್ರಾಂತ್ ರೋಣ' ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆಯಿಂದ ಭರ್ಜರಿ ರೆಸ್ಪಾನ್ಸ್ ದೊರಕಿತು. ಟ್ರೈಲರ್​ ಗಾಗಿ ಕಾಯುತ್ತಿದ್ದ ಅಬಿಮಾನಿಗಳಿಗೆ ಸೂಪರ್ ಆಗಿ ಕಿಚ್ಚನ ದರ್ಶನವಾಗಿದೆ. ಟ್ರೈಲರ್ ಒಂದು ಗಂಟೆಗೆ ವೀವ್ಸ್ 5 ಲಕ್ಷ ದಾಟಿದೆ. ಒಂದು ಗಂಟೆಯಲ್ಲಿ ಕನ್ನಡದ ಟ್ರೈಲರ್ 522,328 ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಇದೀಗ ಟ್ರೈಲರ್ ಬಿಡುಗಡೆಯಾಗಿ ಇಂದಿಗೆ ಕನ್ನಡದಲ್ಲಿ 6 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಉಳಿದ ಭಾಷೆಗಳಲ್ಲಿಯೂ ಸಖತ್ ಆಗಿ ರನ್ ಆಗುತ್ತಿರುವ ವಿಕ್ರಾಂತ್ ರೋಣ ಎಲ್ಲಡೆ ಧೂಳೆಬ್ಬಿಸುತ್ತಿದ್ದಾನೆ.ಈವರೆಗೆ ಕನ್ನಡದಲ್ಲಿ 6 ಮಿಲಿಯನ್, ಹಿಂದಿಯಲ್ಲಿ 2.1 ಮಿಲಿಯನ್, ತೆಲುಗಿನಲ್ಲಿ 3.3 ಮಿಲಿಯನ್, ಇಂಗ್ಲಿಷ್​ ನಲ್ಲಿ 324 K, ತಮಿಳಿನಲ್ಲಿ 1.9 ಮಿಲಿಯನ್ ಮತ್ತು ಮಲೆಯಾಳಂ ನಲ್ಲಿ  1.3 ಮಿಲಿಯನ್  ವೀಕ್ಷಣೆ ಪಡೆಯುವ ಮೂಲಕ ದಾಖಲೆ ಬರೆದಿದೆ. ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುವ ಮೂಲಕ ಕನ್ನಡದ ಮತ್ತೊಂದು ಚಿತ್ರವು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ನಿರೀಕ್ಷೆಯನ್ನು ಮೂಡಿಸಿದೆ.

ಟ್ರೈಲರ್​ಗೆ ಪಿಧಾ ಆದ ಸಿನಿ ರಸಿಕರು:

ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನಯು ದುಪ್ಪಟ್ಟು ಮಾಡಿದೆ. ಕಥೆಯಲ್ಲಿನ ಟ್ವಿಸ್ಟ್ ಗಳು ಸಿನಿ ಪ್ರೇಮಿಗಳಲ್ಲಿ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಟ್ರೈಲರ್​ ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರದ ಪರಿಚಯ ಮಾಡಲಾಗಿದೆ. ಆದರೆ ನಿರ್ದೇಶಕ ಅನುಫ್ ಭಂಡಾರಿ ಸಖತ್ ಟ್ವಿಸ್ಟ್ ನೀಡಿದ್ದು, ಟ್ರೈಲರ್ ನೋಡಿದವರಲ್ಲಿ ಸುದೀಪ್ ಚಿತ್ರದಲ್ಲಿ ಡಬಲ್ ರೋಲ್ ನಲ್ಲಿ ನಟಿಸಿದ್ದಾರಾ ಎಂಬ ಸಂಶಯ ಮೂಡುವಂತಿದೆ.

ಯಕ್ಷ ಪ್ರಶ್ನೆಯಾಗಿ ಉಳಿದ ವಿಲನ್:

ಹೌದು, ಟ್ರೈಲರ್ ನೋಡಿದವರಲ್ಲಿ ಸಿನಿಮಾದ ಕುರಿತು ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದು, ನಿರ್ದೇಶಕ ಅನೂಫ್ ಭಂಡಾರಿ ಚಿತ್ರವದಲ್ಲಿ ಸಖತ್ ಟ್ವೀಸ್ಟ್ ಇಟ್ಟಿರುವುದಂತೂ ಪಕ್ಕಾ ಎನ್ನುವಂತಾಗಿದೆ. ಅದರಲ್ಲಿಯೂ ಸುದೀಪ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರಾ ಎಂಬ ಒಂದು ಪ್ರಶ್ನೆಯಾದರೆ, ಇತ್ತ ಸಿನಿಮಾದ ವಿಲನ್ ಯಾರು ಎನ್ನುವುದು ಇನ್ನೂ ಚಿತ್ರತಂಡ ರಿವೀಲ್ ಮಾಡದಿರುವುದರಿಂದ ಸುದೀಪ್ ಅವರು ಹೀರೋನಾ ಅಥವಾ ವಿಲನ್​ನಾ ಎಂಬ ಪ್ರಶ್ನೆಗಳು ಕಾಡುತ್ತಿದೆ. ಎಲ್ಲದಕ್ಕೂ ಉತ್ತರ ಜುಲೈ 28ಕ್ಕೆ ದೊರಕಲಿದೆ.
Published by:shrikrishna bhat
First published: