ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಸಂಬಂಧಿಸಿದ ವಾಲ್ಮೀಕಿ ಜಾತ್ರೆ (Valmiki Jathre) ವಿಚಾರವಾಗಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುದೀಪ್ (Sudeep) ಅವರು ವಾಲ್ಮೀಕಿ ಜಾತ್ರೆಗೆ ಬರುತ್ತಾರೆ ಎನ್ನಲಾಗಿತ್ತು. ನಂತರ ಅವರಿಗೆ ಆಹ್ವಾನವಿಲ್ಲ ಎಂದು ಹೇಳಲಾಯಿತು. ಹಾಗಿದ್ದರೆ ಅಸಲಿಗೆ ನಡೆದಿದ್ದೇನು? ನಿಜಕ್ಕೂ ಅವರಿಗೆ ಜಾತ್ರೆಗೆ ಆಹ್ವಾನ ಇರಲಿಲ್ವಾ? ಇದ್ದರೆ ಕಿಚ್ಚ ಯಾಕೆ ಮಿಸ್ ಮಾಡಿದ್ರು? ಜಾತ್ರೆ ಇದ್ದ ವಿಚಾರ ತಿಳಿದರೂ ಶೂಟಿಂಗ್ಗೆ (Shooting) ಹೋದ್ರಾ ನಟ? ಈ ಎಲ್ಲ ಪ್ರಶ್ನೆಗಳಿಗೆ ಕಿಚ್ಚ ಸುದೀಪ್ ಅವರ ಟ್ವೀಟ್ (Tweet) ಈಗ ಉತ್ತರವಾಗಿದೆ.
ಕಿಚ್ಚ ಸುದೀಪ್ ಅವರ ತಂದೆಯನ್ನು ಭೇಟಿಯಾಗಿ ಜಾತ್ರೆಗೆ ಆಹ್ವಾನ ನೀಡಿರುವ ಪೋಟೋ ವೈರಲ್ ಆಗಿದೆ. ಸುದೀಪ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸುದೀಪ್ ತಂದೆ ಸಂಜೀವ್ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದ ಪೋಟೋ ವೈರಲ್ ಆಗಿದ್ದು ಈಗ ಮತ್ತೊಂದು ಚರ್ಚೆ ಶುರುವಾಗಿದೆ.
ಕಿಚ್ಚ ಅವರ ತಂದೆಗೆ ಆಹ್ವಾನ
ವಾಲ್ಮೀಕಿ ಮಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಮತ್ತು ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಅವರು ಆಹ್ವಾನ ನೀಡಿದ್ದು ಸುದೀಪ್ ತಂದೆಯನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಸುದೀಪ್ ಅವರನ್ನು ಕಳುಹಿಸುವಂತೆ ಕೇಳಿಕೊಳ್ಳಲಾಗಿತ್ತು.
ತಂದೆ ಜಾತ್ರೆ ಸುದ್ದಿ ಸುದೀಪ್ ಅವರಿಗೆ ಹೇಳಿಲ್ವಾ?
ಹಾಗಿದ್ದರೆ ಸುದೀಪ್ ಅವರಿಗೆ ಜಾತ್ರೆಯ ಆಹ್ವಾನದ ವಿಚಾರವನ್ನೆನ್ನು ಅವರ ತಂದೆ ತಿಳಿಸಿಲ್ವಾ ಎನ್ನುವ ಚರ್ಚೆ ಈಗ ಶುರುವಾಗಿದೆ. ಸುದೀಪ್ ಬರುತ್ತಾರೆ ಎಂದು ಅವರ ಅಭಿಮಾನಿಗಳು ಖುಷಿಯಲ್ಲಿದ್ದರು. ಆದರೆ ನಂತರದಲ್ಲಿ ನಟ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎನ್ನುವ ವಿಚಾರ ರಿವೀಲ್ ಆಗಿದೆ. ಕಿಚ್ಚ ಅವರ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳು ಅವರು ಬರುತ್ತಿಲ್ಲ ಎನ್ನುವ ವಿಚಾರ ತಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಸುದೀಪ್ ಟ್ವೀಟ್ ಸ್ಪಷ್ಟನೆ
ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ. ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ. ಪ್ರೀತಿ ಇರಲಿ. ಶಾಂತರೀತಿಯಿಂದ ವರ್ತಿಸಿ. ಪ್ರೀತಿಯೊಂದಿಗೆ ನಿಮ್ಮ ಕಿಚ್ಚ ಎಂದು ನಟ ಟ್ವೀಟ್ ಮಾಡಿದ್ದಾರೆ.
ಆಗಿದ್ದೇನು?
ವೇದಿಕೆ ಮೇಲೆ ಆಗಮಿಸಿದ್ದ ವಾಲ್ಮೀಕಿ ಶ್ರೀಗಳು, ಜಾತ್ರೆಗೆ ಕಿಚ್ಚ ಸುದೀಪ್ ಬರೋದಿಲ್ಲ ಎಂದು ಘೋಷಣೆ ಮಾಡಿದ್ದರು. ಶ್ರೀಗಳು ಘೋಷಣೆ ಮಾಡುತ್ತಿದ್ದಂತೆ ರೊಚ್ಚಿಗೆದ್ದ ಅಭಿಮಾನಿಗಳು, ಕಾರ್ಯಕ್ರಮದಲ್ಲಿದ್ದ ಚೇರುಗಳನ್ನು ಪುಡಿ ಪುಡಿ ಮಾಡಿದ್ದರು. ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಬಿಜೆಪಿ ಶಾಸಕ ರಾಜುಗೌಡ ಅವರು, ನಟ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಯಾಚಿಸಿದ್ದಾರೆ.ವಿಡಿಯೋದಲ್ಲಿಈ ಬಗ್ಗೆ ಮಾತನಾಡಿರುವ ಯಾದಗಿರಿ ಜಿಲ್ಲೆಯ ಸುರಪುರ ಶಾಸಕ ರಾಜುಗೌಡ, ವಾಲ್ಮೀಕಿ ಜಾತ್ರೆಗೆ ನಾನು ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸ್ವಾಮೀಜಿಗಲು, ಹಲವು ಗಣ್ಯರು ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ನಟ ಸುದೀಪ್ ಅಭಿಮಾನಿಗಳು ಸಾಕಷ್ಟು ಜನ ಬಂದಿದ್ದರು. ಆದರೆ ಸುದೀಪ್ ಅವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ, ಅವರ ಗಮನಕ್ಕೂ ತಂದಿರಲಿಲ್ಲ. ಈ ಕಾರ್ಯಕ್ರಮಕ್ಕಾಗಿ ಯಾರು ಕೂಡ ಹೋಗಿ ಸುದೀಪ್ ಅವರಿಗೆ ಆಹ್ವಾನ ಕೊಟ್ಟಿರಲಿಲ್ಲ, ಆದ್ದರಿಂದಲೇ ಅವರು ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ