Kichcha Sudeep: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಕಿಚ್ಚ ಸುದೀಪ್​..!

Kichcha Sudeep: ವಿರಾಟ್​ ಕೋಹ್ಲಿ ಹಾಗೂ ಅನುಷ್ಕಾರನ್ನು ಕ್ರಿಕೆಟಿಗ ರೋಹಿತ್ ಶರ್ಮಾ ಟ್ವಿಟರ್​ನಲ್ಲಿ ಅನ್​ಫಾಲೋ ಮಾಡಿದ್ದು ಇನ್ನು ನೆನಪಿನಲ್ಲಿರುವಾಗಲೇ ಸ್ಯಾಂಡಲ್​ವುಡ್​ನ ಸ್ಟಾರ್ ನಟರೊಬ್ಬರು ಮತ್ತೊಬ್ಬ ನಟನನ್ನು ಅನ್​ಫಾಲೋ ಮಾಡಿದ್ದಾರೆ.

Anitha E | news18
Updated:August 26, 2019, 5:24 PM IST
Kichcha Sudeep: ಟ್ವಿಟರ್​ನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿದ ಕಿಚ್ಚ ಸುದೀಪ್​..!
ದರ್ಶನ್​ ಹಾಗೂ ಕಿಚ್ಚ ಸುದೀಪ್​
Anitha E | news18
Updated: August 26, 2019, 5:24 PM IST
ಕಿಚ್ಚ ಸುದೀಪ್​ ಹಾಗೂ ಡಿಬಾಸ್​ ದರ್ಶನ್​ ಸ್ಯಾಂಡಲ್​ವುಡ್​ನ ಜಿಗರಿ ದೋಸ್ತಿಗಳು ಎಂದೇ ಖ್ಯಾತರಾಗಿದ್ದವರು. ಆದರೆ ಒಮ್ಮೆ ಕಿಚ್ಚ ಸುದೀಪ್​ ಸಾರ್ವಜನಿಕವಾಗಿ ಸಂದರ್ಶನವೊಂದರಲ್ಲಿ ನೀಡಿದ್ದ ಒಂದೇ ಒಂದು ಹೇಳಿಕೆಯಿಂದಾಗಿ ಇವರ ನಡುವೆ ಬಿರುಕು ಮೂಡಿತ್ತು. ಆಗಿನಿಂದ ಇಲ್ಲಿಯವರೆಗೆ ಇವರ ನಡುವೆ ಮಾತುಕತೆ ಹೋಗಲಿ ಇಬ್ಬರು ಎದುರಾಗಿದ್ದೂ ಇಲ್ಲ.

ಆಗಾಗ ಇಬ್ಬರೂ ನಟರು ಹಾಗೂ ಅವರ ಅಭಿಮಾನಿಗಳಲ್ಲಿ ಡೈಲಾಗ್​ ವಾರ್​ ನಡೆಯುತ್ತಲೇ ಇತ್ತು. ಆದರೂ ಕೆಲವೊಮ್ಮೆ ಈ ವಿಷಯದಲ್ಲಿ ಕಿಚ್ಚ ಸುದೀಪ್​ ತಗ್ಗಿ ನಡೆದದ್ದೂ ಇದೆ. ಕಿಚ್ಚನ ಈ ನಡೆಯಿಂದ ಅಭಿಮಾನಿಗಳು ಬೇಸರಗೊಂಡಿದ್ದೂ ನಡೆದಿದೆ.

darshan_and_sudeep_
ಕಿಚ್ಚ-ದಚ್ಚು


ಈ ಸ್ಟಾರ್​ ನಟರ ನಡುವಿನ ವೈಮನಸ್ಸಿಗೆ  ಅಂತ್ಯ ಯಾವಾಗ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ. ಹೌದು, ಟ್ವಿಟರ್​ನಲ್ಲಿ ದರ್ಶನ್​ರನ್ನು ಹಿಂಬಾಲಿಸುತ್ತಿದ್ದ ಕಿಚ್ಚ ಈಗ ಅವರನ್ನು ಅನ್​ಫಾಲೋ ಮಾಡಿದ್ದಾರೆ.

Sudeep Twitter
ಸುದೀಪ್​ ಟ್ವಿಟರ್​


ಕಿಚ್ಚ ತಮ್ಮ ಟ್ವಿಟರ್​ನಲ್ಲಿ 66 ಮಂದಿಯನ್ನು ಹಿಂಬಾಲಿಸುತ್ತಿದ್ದರು. ಆದರೆ ಈಗ ಅದು 65ಕ್ಕೆ ಇಳಿದಿದೆ. ಈ ಪಟ್ಟಿಯಲ್ಲಿ ದರ್ಶನ್​ ಹೆಸರೂ ಮಾಯವಾಗಿದೆ. ಆದರೆ ನಟ ದರ್ಶನ್​ ಎರಡು ವರ್ಷಗಳ ಹಿಂದೆಯೇ ಕಿಚ್ಚನನ್ನು ಅನ್​ಫಾಲೋ ಮಾಡಿದ್ದರು. ಆದರೂ ಸುದೀಪ್​ ಡಿಬಾಸ್​ರನ್ನು ಹಿಂಬಾಲಿಸುತ್ತಿದ್ದರು.

ಇದನ್ನೂ ಓದಿ: Pailwaan Trailer: ಐದು ಭಾಷೆಗಳಲ್ಲಿ ಪೈಲ್ವಾನ್​ ಟ್ರೈಲರ್​ ಬಿಡುಗಡೆ​: ಕಿಚ್ಚನ ಪಂಚ್​ ಹೇಗಿದೆ ಗೊತ್ತಾ..?
Loading...

ದರ್ಶನ್​ 'ಕುರುಕ್ಷೇತ್ರ' ಸಿನಿಮಾದ ಪ್ರಚಾರದ ವೇಳೆ ಕಿಚ್ಚನ ಸ್ನೇಹದ ಬಗ್ಗೆ ಕೇಳಿದಾಗ ಕೊಟ್ಟ ಹೇಳಿಕೆಯಿಂದಾಗಿ ಇಷ್ಟೆಲ್ಲ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಲ್ಲಿಯವರೆಗೂ ಕಿಚ್ಚ ದರ್ಶನ್​ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದರು. ಆದರೆ ಇದಾದ ನಂತರ ಡೈಲಾಗ್​ ವಾರ್​, ಟ್ವಿಟರ್​ ವಾರ್ ಎಲ್ಲವೂ ಆರಂಭವಾಯಿತು. ಇದು ಇನ್ನು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ.

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published:August 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...