‘ಕಿಚ್ಚ’ ಸುದೀಪ್ ಸ್ಯಾಂಡಲ್ವುಡ್ ಮಾತ್ರವಲ್ಲ ಟಾಲಿವುಡ್ ಮಂದಿಗೂ ಚಿರಪರಿಚಿತರು. ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದ ಮೂಲಕ ಎಲ್ಲರನ್ನು ರಂಜಿಸಿದ್ದ ಅವರು, ‘ಬಾಹುಬಲಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಸದ್ಯ, ಸುದೀಪ್ ‘ಪೈಲ್ವಾನ್’, ‘ಕೋಟಿಗೊಬ್ಬ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಅವರು ಬಾಲಿವುಡ್ಗೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇತ್ತೀಚಿನ ಕೆಲ ಟ್ವೀಟ್ಗಳು ಈ ಅನುಮಾನವನ್ನು ಮತ್ತಷ್ಟು ಬಲಗೊಳಿಸಿವೆ.
ಸಲ್ಮಾನ್ ಖಾನ್ ನಟನೆಯ ‘ದಬಂಗ್ 3’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿ ಬಂದಿದ್ದವು. ಆ ಬಗ್ಗೆ ಯಾರೊಬ್ಬರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಈಗ ಗಾಂಧಿನಗರದ ಅಂಗಳದಲ್ಲಿ ಮತ್ತದೇ ಅನುಮಾನ ಹುಟ್ಟಿಕೊಂಡಿದೆ.
ಸಂಕ್ರಾಂತಿ ನಿಮಿತ್ತ ‘ಕಿಚ್ಚ’ ನಟನೆಯ ‘ಪೈಲ್ವಾನ್’ ಚಿತ್ರದ ಟೀಸರ್ ಬಿಡುಗಡೆಗೊಂಡಿತ್ತು. ಇಡೀ ಟೀಸರ್ ಸುದೀಪ್ ಮೇಲೆಯೇ ಹೈಲೈಟ್ ಆಗಿದ್ದು, ಅಖಾಡದಲ್ಲಿ ಹೋರಾಡುವ ಕುಸ್ತಿಪಟುವಾಗಿ ಅವರು ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಬಾರಿ ವೀಕ್ಷಣೆ ಕೂಡ ಕಂಡಿದೆ. ಟೀಸರ್ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮಕ್ಕೆ 'ಪೈಲ್ವಾನ'ನ ಕಿಚ್ಚು: ಕುಸ್ತಿ ಟೀಸರ್ಗೆ ಮೆಚ್ಚುಗೆಯ ಸುರಿಮಳೆ!
ಬಹು ನಿರೀಕ್ಷಿತ ಸಿನಿಮಾದ ಟ್ರೈಲರ್, ಟೀಸರ್ ಬಿಡುಗಡೆಯಾದಾಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಪ್ರಭುದೇವ ಕೂಡ ‘ಪೈಲ್ವಾನ್’ನ ಬೆನ್ನು ತಟ್ಟಿದ್ದಾರೆ. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ವಿಚಾರವೆಂದರೆ, ಸಲ್ಮಾನ್ ‘ದಬಂಗ್ 3’ ನಾಯಕ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಪ್ರಭುದೇವ. ಇಬ್ಬರೂ ‘ಪೈಲ್ವಾನ್’ ಟೀಸರ್ ನೋಡಿ ಟ್ವಿಟ್ಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಹಲವು ಅನುಮಾನ ಹುಟ್ಟುಹಾಕಿದೆ. ಅಷ್ಟಕ್ಕೂ ಇದು ಕಾಕತಾಳೀಯವೋ ಅಥವಾ ಇದರ ಹಿಂದೆ ದೊಡ್ಡ ರಹಸ್ಯವಿದೆಯೋ ಎಂಬುದು ಸದ್ಯದ ಕುತೂಹಲ.
.@KicchaSudeep , you have taken what we started to another level👏, all the best and congrats to the MAN, to the PAILWAAN💪 https://t.co/laQtS6WofQ
— Salman Khan (@BeingSalmanKhan) January 15, 2019
Amazing teaser, best wishes to @KicchaSudeep and the team #PailwaanTeaserhttps://t.co/9D2FrQ12Gg
— Prabhudheva (@PDdancing) January 15, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ