• Home
  • »
  • News
  • »
  • entertainment
  • »
  • Jacqueline Fernandez: 'ರಕ್ಕಮ್ಮ'ನಿಗೆ ಕನ್ನಡ ಕಲಿಸಿದ ಕಿಚ್ಚ! "ಕನ್ನಡಿಗರಿಗೆ ನಮಸ್ಕಾರ" ಎಂದ ಜಾಕ್ವೆಲಿನ್

Jacqueline Fernandez: 'ರಕ್ಕಮ್ಮ'ನಿಗೆ ಕನ್ನಡ ಕಲಿಸಿದ ಕಿಚ್ಚ! "ಕನ್ನಡಿಗರಿಗೆ ನಮಸ್ಕಾರ" ಎಂದ ಜಾಕ್ವೆಲಿನ್

'ವಿಕ್ರಾಂತ್ ರೋಣ'ದಲ್ಲಿ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್

'ವಿಕ್ರಾಂತ್ ರೋಣ'ದಲ್ಲಿ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಮುದ್ದು ಮುದ್ದಾಗಿ ಕನ್ನಡ (Kannada) ಮಾತನಾಡಿದ್ದಾರೆ. ಅಂದಹಾಗೆ ಈ ಸುಂದರಿಗೆ ಕನ್ನಡ ಕಲಿಸಿದ್ದು ನಮ್ಮ ಕಿಚ್ಚ ಸುದೀಪ್. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ.

  • Share this:

‘ವಿಕ್ರಾಂತ್‌ ರೋಣ’.. ಸದ್ಯ ಕಿಚ್ಚ ಸುದೀಪ್ (Kichcha Sudeep) ಅಭಿನಯದ ಈ ಸಿನಿಮಾದ್ದೇ (Cinema) ಸದ್ದು… ಸ್ಯಾಂಡಲ್‌ವುಡ್‌ನ (Sandalwood) ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ (Pan India Cinema) ‘ವಿಕ್ರಾಂತ್ ರೋಣ’ (Vikrant Rona) ತೆರೆಗೆ ಬರಲು ಸಜ್ಜಾಗಿದೆ. ಪ್ರಾರಂಭದಿಂದಲೂ ಭಾರೀ ಸೌಂಡ್ ಮಾಡುತ್ತಿದ್ದ ವಿಕ್ರಾಂತ್ ರೋಣನ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಜೋರಾಗ್ತಿದೆ. ಅದರಲ್ಲೂ ‘ರಾ ರಾ ರಕ್ಕಮ್ಮ’ (Ra Ra Rakkamma) ಹಾಡಂತೂ ಪಡ್ಡೆ ಹುಡುಗರ ನಿತ್ಯದ ಬಾಯಿಪಾಠದಂತೆ ಆಗಿದೆ! ‘ರಕ್ಕಮ್ಮನಾಗಿ’ ಸೊಂಟ ಬಳುಸಿಕಿ, ಕನ್ನಡಿಗರ ಎದೆಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ (Sri Lanka) ಸುಂದರಿ, ಬಾಲಿವುಡ್ ನಟಿ (Bollywood Actress) ಜಾಕ್ವೆಲಿನ್ ಫರ್ನಾಂಡಿಸ್‌ (Jacqueline Fernandez) ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳೂ (Fans) ಸಹ ಕಾತರರಾಗಿದ್ದಾರೆ. ಇಂತ ಹೊತ್ತಲ್ಲೇ ಜಾಕ್ವೆಲಿನ್ ಮುದ್ದು ಮುದ್ದಾಗಿ ಕನ್ನಡ (Kannada) ಮಾತನಾಡಿದ್ದಾರೆ. ಅಂದಹಾಗೆ ಈ ಸುಂದರಿಗೆ ಕನ್ನಡ ಕಲಿಸಿದ್ದು ನಮ್ಮ ಕಿಚ್ಚ ಸುದೀಪ್. ಇದೀಗ ಈ ವಿಡಿಯೋ ಇನ್ಸ್‌ಸ್ಟ್ರಾಗಾಮ್‌ನಲ್ಲಿ (Instagram) ಅಪ್ಲೋಡ್‌ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ.


ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ


ಕಿಚ್ಚ ಸುದೀಪ್‌ ಅವರು ರಕ್ಕಮ್ಮ ಖ್ಯಾತಿಯ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ಕನ್ನಡ ಕಲಿಸಿದ್ದಾರೆ. ವಿಕ್ರಾಂತ್ ರೋಣದಲ್ಲಿ ಗಡಂಗ್ ರಕ್ಕಮ್ಮನಾಗಿ ಜಾಕ್ವಲಿನ್ ಕುಣಿದಿದ್ದು, ರಾ ರಾ ರಕ್ಕಮ್ಮ ಹಾಡು ಸಖತ್ ಹಿಟ್ ಆಗಿದೆ. ಇದೇ ಖುಷಿಯಲ್ಲಿರುವ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡಿಸ್‌ಗೆ ಕನ್ನಡ ಭಾಷೆ ಕಲಿಸಿದ್ದಾರೆ.


ರಕ್ಕಮ್ಮನ ಮೆಚ್ಚಿದ್ದಕ್ಕೆ ಜಾಕ್ವೆಲಿನ್ ಸಂತಸ


ಕಿಚ್ಚ ಸುದೀಪ್ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ವಿಡಿಯೋ ಕಾಲ್ ಮಾಡಿದ್ದರೆ. ಉಭಯ ಕುಶಲೋಪರಿ ನಡೆಸಿದ ಇಬ್ಬರೂ, ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹಾಡು ಹಿಟ್ ಆಗಿದ್ದಕ್ಕೆ ಜಾಕ್ವೆನಿಲ್ ಸಂತಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Jacqueline Fernandez: ವಿಕ್ರಾಂತ್ ರೋಣ ಬೆಡಗಿಯ ಟ್ರೆಡಿಷನಲ್ ಲುಕ್ - ಮಲ್ಲಿಗೆ ಮುಡಿದು, ಸೀರೆಯಲ್ಲಿ ಜಾಕ್ಲಿನ್ ಮಿಂಚಿಂಗ್


ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್ ಫರ್ನಾಂಡಿಸ್


ಈ ವೇಳೆ ಕನ್ನಡದಲ್ಲೇ ಮಾತನಾಡುವಂತೆ ಕಿಚ್ಚ ಸುದೀಪ್ ಜಾಕ್ವೆಲಿನ್‌ಗೆ ಹೇಳಿದ್ದಾರೆ. ಅದಕ್ಕೆ ಒಪ್ಪಿದ ಜಾಕ್ವೆಲಿನ್ ಸುದೀಪ್ ಹೇಳಿ ಕೊಟ್ಟಂತೆ ಕನ್ನಡದಲ್ಲೇ ಮಾತನಾಡಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಬೇಗ ಬರ್ತಾ ಇದ್ದೀನಿ” ಅಂತ ಹೇಳಿದ್ದಾರೆ. ಅದಕ್ಕೆ ಅವರ ಬಳಿಯೇ ಇದ್ದ ಫ್ರೆಂಡ್ಸ್‌ ಜೋರಾಗಿ ಕಿರುಚುತ್ತಾ ಸಂತಸ ವ್ಯಕ್ತಪಡಿಸಿದ್ದಾರೆ.




ರಕ್ಕಮ್ಮನಿಗಾಗಿ ಕಿಚ್ಚನ ಸ್ಪೆಷಲ್ ಡ್ಯಾನ್ಸ್


ಇದೇ ವೇಳೆ ಡ್ಯಾನ್ಸ್ ಮಾಡುವಂತೆ ಕಿಚ್ಚನಿಗೆ ಜಾಕ್ವೆಲಿನ್ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಕಿಚ್ಚ, ಫಸ್ಟ್ ಟೈಮ್ ರಿಲ್ಸ್ ಮಾಡಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಾಕಿರುವ ಕಿಚ್ಚ ಸುದೀಪ್, ಹೇ ಜಾಕಿ ಇದು ನಿಮಗಾಗಿ. ನಿಮ್ಮ ಆಸೆಯನ್ನು ಈಡೇರಿಸಿದ್ದೇನೆ. ನನ್ನ ಮೊದಲ ರೀಲ್ಸ್ ಎಂದು ಬರೆದುಕೊಂಡಿದ್ದಾರೆ.


ರಕ್ಕಮ್ಮನಿಗೆ ಭಾರೀ ಲೈಕ್ಸ್‌


ಇನ್ನು ವಿಕ್ರಾಂತ್ ರೋಣ ಲಿರಿಕಲ್ ವಿಡಿಯೋ ಈಗಾಗಲೇ ಕಿಚ್ಚು ಹಚ್ಚಿಸಿದ್ದು, ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ. ಈಗಾಗಲೇ ಈ ಹಾಡು ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.  ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ.


ಇದನ್ನೂ ಓದಿ: Kiccha Sudeep: ಜಾಕ್ಲಿನ್ ಗಾಗಿ ಕಿಚ್ಚ ಸ್ಪೆಷಲ್ ಡ್ಯಾನ್ಸ್, ರಕ್ಕಮ್ಮ ಸ್ಟೆಪ್ ಈಗ ಸಖತ್ ವೈರಲ್


ವಿಕ್ರಾಂತ್ ರೋಣನ ಮೇಲೆ ನಿರೀಕ್ಷೆ ನೂರಾರು


ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿರುವುದು ಮಾತ್ರವಲ್ಲದೇ,  ಅಲ್ಲದೇ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಿಚ್ಚನ ಸಿನಿ ಜರ್ನಿಯಲ್ಲಿ ದಾಖಲೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.

Published by:Annappa Achari
First published: