ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಸಾಲು ಸಾಲಾಗಿ ಗುಡ್ ನ್ಯೂಸ್ ಸಿಗಲಿದೆ. ಹೌದು, ಸುದೀಪ್ ಅಭಿನಯದ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿದ್ದು, ಬಿಡುಗಡೆ ದಿನಾಂಕವಷ್ಟೆ ಪ್ರಕಟವಾಗಬೇಕಿದೆ. ಲಾಕ್ಡೌನ್ ಇರಲಿ-ಇಲ್ಲದಿರಲಿ ಸುದೀಪ್ ಮಾತ್ರ ತಮ್ಮ ಅಭಿಮಾನಿಗಳಿಗೆ ಆಗಾಗ ಒಂದೊಂದು ಅಪ್ಡೇಟ್ ಕೊಡುವ ಮೂಲಕ ಸಂತೋಷವಾಗಿಡುತ್ತಿದ್ದರು. ತಮ್ಮ ಸಿನಿಮಾ ಕುರಿತಾದ ಪುಟ್ಟ ವಿಡಿಯೋ ತುಣುಕು, ಪೋಸ್ಟರ್ ಹೀಗೆ ಒಂದಲ್ಲಾ ಒಂದು ರೀತಿಯ ಟ್ರೀಟ್ ಕೊಡುತ್ತಲೇ ಇದ್ದಾರೆ ಸುದೀಪ್. ಸುದೀಪ್ ಅಭಿನಯದ ಸಿನಿಮಾ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಿತ್ರ ರಿಲೀಸ್ಗೆ ಸಜ್ಜಾಗುತ್ತಿವೆ. ಇತ್ತೀಚೆಗಷ್ಟೆ ಚಿತ್ರಮಂದಿರಗಳು ಬಾಗಿಲು ತೆರೆದಿದ್ದು, ಕೊರೋನಾ ಕಾರಣದಿಂದಾಗಿ ಈಗಲೂ ಸಹ ಶೇ 50ರಷ್ಟು ಆಸನ ಭರ್ತಿಗೆ ಅನುಮತಿ ನೀಡಲಾಗಿದೆ. ಕೊರೋನಾ ಎರಡಣೇ ಅಲೆಯಿಂದಾಗಿ ಮಾಡಲಾಗಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದೆ. 4.0 ಅನ್ಲಾಕ್ನಲ್ಲಿ ಸಿನಿಮಾ ಮಂದಿರಗಳ ಬಾಗಿಲು ತೆರೆಯಲು ಅನುಮತಿ ನೀಡಲಾಗಿದೆ.
ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದಂತೆಯೇ ರಿಲೀಸ್ಗೆ ರೆಡಿಯಾಗಿರುವ ಚಿತ್ರಗಳು ಸಹ ತಮ್ಮ ಕೆಲಸಗಳನ್ನು ಆರಂಭಿಸಿವೆ. ಇದಕ್ಕೆ ಸುದೀಪ್ ಅವರ ಚಿತ್ರಗಳೂ ಹೊರತಾಗಿಲ್ಲ. ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಚಿತ್ರೀಕರಣ ಪೂರ್ಣಗೊಂಡಿದೆ. ಇತ್ತೀಚೆಗಷ್ಟೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಹ ವಿಕ್ರಾಂತ್ ರೋಣ ಚಿತ್ರತಂಡ ಸೇರಿಕೊಂಡಿದ್ದು, ತಮ್ಮ ಪಾಲಿನ ಶೂಟಿಂಗ್ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಈಗ ಕಿಚ್ಚ ಸುದೀಪ್ ಅವರು ಕೋಟಿಗೊಬ್ಬ 3 ಸಿನಿಮಾ ಕುರಿತಾಗಿ ಒಂದು ಅಪ್ಡೇಟ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಮಾಡಿರುವ ಲೆಟೆಸ್ಟ್ ಟ್ವೀಟ್ನ ಲಿಂಕ್ ಇಲ್ಲಿದೆ...
In front of the mic once again,,,,but this time it's the voice over for #K3 .
It's been long n re-living Satya&Shiva is fun.
Everyone's finished their voice overs and so has the background score.
Me finishing my part ends the post work and should be ready for release soon. pic.twitter.com/htWT2KoAyb
— Kichcha Sudeepa (@KicchaSudeep) July 21, 2021
ಇದನ್ನೂ ಓದಿ: Shwetha Srivatsav: ಬಕ್ರೀದ್ ಹಬ್ಬದ ವಿಶೇಷ ಫೋಟೋಶೂಟ್ನಲ್ಲಿ ಮಗಳ ಜೊತೆ ಪೋಸ್ ಕೊಟ್ಟ ಶ್ವೇತಾ ಶ್ವೇತಾ ಶ್ರೀವಾತ್ಸವ
ಮತ್ತೊಮ್ಮೆ ಮೈಕ್ ಮುಂದೆ ಬಂದಿದ್ದೇನೆ. ಈ ಸಲ ಕೋಟಿಗೊಬ್ಬ 3 ಚಿತ್ರದ ವಾಯ್ಸ್ ಓವರ್ಗಾಗಿ. ತುಂಬಾ ಸಮಯದ ನಂತರ ಸತ್ಯ ಹಾಗೂ ಶಿವನಾಗಿ ಜೀವಿಸುತ್ತಿದ್ದೇನೆ. ಇದೊಂದು ರೀತಿ ಫನ್ ಎನಿಸುತ್ತಿದೆ. ಎಲ್ಲರೂ ಕಂಠದಾನ ಮಾಡಿದ್ದಾರೆ. ನಾನು ಈಗ ನನ್ನ ಪಾಲಿನ ಡಬ್ಬಿಂಗ್ ಮಾಡುತ್ತಿದ್ದೇನೆ. ಬೇಗನೇ ಸಿನಿಮಾ ಕೆಲಸಗಳನ್ನು ಮುಗಿಸಿ, ರಿಲೀಸ್ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದ್ದೇವೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಇನ್ನು ಕೋಟಿಗೊಬ್ಬ 3 ಸಿನಿಮಾದಲ್ಲೂ ಕಿಚ್ಚ ಸುದೀಪ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ಸತ್ಯ ಹಾಗೂ ಶಿವನಾಗಿ. ಶಿವಕಾರ್ತಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಸುದೀಪ್ ಅವರು ಕೋಟಿಗೊಬ್ಬ ಸಿನಿಮಾ ಮೊದಲ ಹಾಗೂ ಎರಡನೇ ಭಾಗದಲ್ಲೂ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಮಡೋನ್ನಾ ಸೆಬಾಸ್ಟಿಯನ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ಗಳು ಹಾಗೂ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿಸಿವೆ.
ಇದನ್ನೂ ಓದಿ: ದಿವ್ಯಾ ಸುರೇಶ್ಗೆ ಒಂಟಿತನ ಕಾಡುತ್ತಿದೆ ಎಂದರೂ ಮಂಜು ಮನಸ್ಸು ಮಾತ್ರ ಕರಗುತ್ತಿಲ್ಲ
ಕೋಟಿಗೊಬ್ಬ 3 ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿದರೂ, ಸದ್ಯಕ್ಕೆ ರಿಲೀಸ್ ಆಗುವಂತೆ ಕಾಣುತ್ತಿಲ್ಲ. ಕಾರಣ ಈ ಹಿಂದೆ ಅಂದರೆ ಕೊರೋನಾ ಮೊದಲ ಅಲೆ ವೇಳೆ ಲಾಕ್ಡೌನ್ ಆಗಿದ್ದಾಗಲೇ ನಿರ್ಮಾಪಕರು ಸೂರಪ್ಪ ಬಾಬು ಅವರು ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡುವವರೆಗೂ ಸಿನಿಮಾವನ್ನು ರಿಲೀಸ್ ಮಾಡುವುದಿಲ್ಲ ಎಂದಿದ್ದರು. ಹೀಗಾಗಿಯೇ ಸಿನಿಮಾ ರಿಲೀಸ್ಗೆ ರೆಡಿಯಾದರೂ ಚಿತ್ರಮಂದಿರಗಳಲ್ಲಿ ಸಂಪೂರ್ಣ ಆಸನಗ ಭರ್ತಿಗೆ ಅವಕಾಶ ಸಿಗುವರೆಗೂ ಕಾಯಬೇಕಾಗುತ್ತದೆಯೋನೋ..?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ