HOME » NEWS » Entertainment » KICHCHA SUDEEP STARRER PAILWAAN TRAILER IS OUT IN FIVE LANGUAGES AE

Pailwaan Trailer: ಐದು ಭಾಷೆಗಳಲ್ಲಿ ಪೈಲ್ವಾನ್​ ಟ್ರೈಲರ್​ ಬಿಡುಗಡೆ​: ಕಿಚ್ಚನ ಪಂಚ್​ ಹೇಗಿದೆ ಗೊತ್ತಾ..?

Pailwaan Trailer: ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಇಂದು ನಿಜಕ್ಕೂ ಹಬ್ಬದ ದಿನ. ಬಹು ಕಾಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ರಸದೌತಣ ಸಿಕ್ಕಿದೆ. ಐದೂ ಭಾಷೆಗಳಲ್ಲಿ ಈಗಷ್ಟೆ ಪೈಲ್ವಾನ್​ ಟ್ರೈಲರ್​ ಬಿಡುಗಡೆಯಾಗಿದೆ.

Anitha E | news18
Updated:August 22, 2019, 2:46 PM IST
Pailwaan Trailer: ಐದು ಭಾಷೆಗಳಲ್ಲಿ ಪೈಲ್ವಾನ್​ ಟ್ರೈಲರ್​ ಬಿಡುಗಡೆ​: ಕಿಚ್ಚನ ಪಂಚ್​ ಹೇಗಿದೆ ಗೊತ್ತಾ..?
ಪೈಲ್ವಾನ್​
  • News18
  • Last Updated: August 22, 2019, 2:46 PM IST
  • Share this:
- ಅನಿತಾ ಈ, 

ಪೋಸ್ಟರ್​, ಟೀಸರ್​ ಹಾಗೂ ಹಾಡುಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಸಿನಿಮಾ 'ಪೈಲ್ವಾನ್​'. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿರುವ ಕಿಚ್ಚ ಸುದೀಪ್​ ಅಭಿನಯದ 'ಪೈಲ್ವಾನ್​' ಟ್ರೈಲರ್​ ಕಡೆಗೂ ಬಿಡುಗಡೆಯಾಗಿದೆ.

ನಿಮಿಷದ ಟ್ರೈಲರ್​ನಲ್ಲಿ ಕಿಚ್ಚ ಪಟ್ಟಿರುವ ಪರಿಶ್ರಮ ಕಾಣುತ್ತದೆ. 1 ನಿಮಿಷ 53 ಸೆಕೆಂಡ್​ಲ್ಲಿ ಕಿಚ್ಚ ಗಾಯಗೊಂಡ ಸಿಂಹದಂತೆ ಘರ್ಜಿಸಿದ್ದಾರೆ. ಈ ಸಿನಿಮಾಗಾಗಿ ಜಿಮ್​ ಮೆಟ್ಟಿಲೇರಿ ಅಲ್ಲಿ ಬೆವರಿಳಿಸಿದರ ಫಲವನ್ನು ಈ ಟ್ರೈಲರ್​ನಲ್ಲಿ ಕಾಣಬಹುದು.

Pailwaan release date poster
'ಪೈಲ್ವಾನ್​' ಬಿಡುಗಡೆ ದಿನಾಂಕದ ಪೋಸ್ಟರ್​ನಲ್ಲಿ ಸುದೀಪ್​


ಆದರೆ ಈ ಟ್ರೈಲರ್​ ನೋಡಿದರೆ 'ಪೈಲ್ವಾನ್​' ಸಿನಿಮಾದ ಒನ್​ ಲೈನ್​ ಸ್ಟೋರಿ ಏನು ಅನ್ನೋದು ತಿಳಿದು ಬಿಡುತ್ತದೆ. ಕಿಚ್ಚ ರಾಷ್ಟ್ರಮಟ್ಟ ಕುಸ್ತಿ ಪಂದ್ಯದಲ್ಲಿ ಭಾಗವಹಿಸಲು ನಾಯಕ ಪಡುವ ಕಷ್ಟ ಹಾಗೂ ಎದುರಿಸುವ ಸವಾಲುಗಳ ಚಿತ್ರಣ ಇಲ್ಲಿದೆ. ಇನ್ನು ಈ ಟ್ರೈಲರ್​ ನೋಡಿದರೆ ಹಾಲಿವುಡ್​ನ ರಾಕಿ ಸರಣಿ ಸಿನಿಮಾಗಳ ನೆನಪಾಗದೆ ಇರದು.

Youtube Video

ಈ ಸಿನಿಮಾದ ಟೀಸರ್, ಆಡಿಯೋ ಬಿಡುಗಡೆ ಕಾರ್ಯಕ್ರಮ ಸೇರಿದಂತೆ ಸಿನಿಮಾ ರಿಲೀಸ್​ ದಿನಾಂಕ ಈಗಾಗಲೇ ಸಾಕಷ್ಟು ಸಲ ಮುಂದೂಡಲ್ಪಟ್ಟಿದೆ. ಅದಕ್ಕೆ ಕಾರಣಗಳು ಇದ್ದರೂ, ಅಭಿಮಾನಿಗಳಿಗೆ ಮಾತ್ರ ಇದರಿಂದ ಬೇಸರವಾಗಿದ್ದಂತೂ ಹೌದು.
Youtube Video


Youtube Video


ಕನ್ನಡ, ಮಲಯಾಳಂ ಹಾಗೂ ತಮಿಳಿನ ಟ್ರೈಲರ್​ ಅನ್ನು ಲಹರಿ ಬಿಡುಗಡೆ ಮಾಡಿದರೆ, ತೆಲುಗು ಟ್ರೈಲರ್​ ಅನ್ನು ವರಾಹಿ ಚಲನಚಿತ್ರ ಹಾಗೂ ಹಿಂದಿ ಟ್ರೈಲರ್​ ಅನ್ನು ಝೀ ಸ್ಟುಡಿಯೋಸ್​ ಬಿಡುಗಡೆ ಮಾಡಿವೆ.

Youtube Video


Youtube Video


ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನ ಅಭಿಮಾನಿಗಳು ನಿರ್ದೇಶಕ ಕೃಷ್ಣಅವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಇದೆ. ಕಡೆಗೆ ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ 'ಪೈಲ್ವಾನ್​' ಆಡಿಯೋವನ್ನು ಪುನೀತ್​ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್​ ಅಭಿನಯದ ಹೊಸ ಸಿನಿಮಾದ ರಿಲೀಸ್​ ಡೇಟ್​ ಫಿಕ್ಸ್: ನಾಲ್ಕು ಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ಸಿಖಂದರ್​​..!

ಇಂದಿನಿಂದಲೇ 'ಪೈಲ್ವಾನ್​' ಸಿನಿಮಾ ಪ್ರಚಾರದ ಕೆಲಸಗಳು ಆರಂಭವಾಗಲಿದ್ದು, ಈ ಕಾರ್ಯದಲ್ಲಿ ಪ್ರೇಕ್ಷಕರೆಲ್ಲರೂ ನಮ್ಮೊಂದಿಗೆ ಇರಬೇಕೆಂದು ಕಿಚ್ಚ ಮನವಿ ಮಾಡಿದ್ದಾರೆ.

 ಸಪ್ನಾಕೃಷ್ಣ ನಿರ್ಮಾಣದಲ್ಲಿ ಕೃಷ್ಣ ನಿರ್ದೇಶಿಸಿರುವ ಈ ಚಿತ್ರ ಸುದೀಪ್​ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Priyamani: ಕಣ್ಣು ಕುಕ್ಕುವಂತಿದೆ ನಟಿ ಪ್ರಿಯಾಮಣಿಯ ಹಾಟ್​ ಲುಕ್ಸ್​..!

First published: August 22, 2019, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories