Pailwaan: ಮೂರು ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರ: ಕೆ.ಜಿ.ಎಫ್‍ಗೂ ಸೆಡ್ಡು ಹೊಡೆಯುತ್ತಾ ಕಿಚ್ಚನ ಈ ಸಿನಿಮಾ..?

Pailwaan: ಬರ್ತಾ ಇದ್ದಾನೆ ಪೈಲ್ವಾನ್ ಅಂತ ಇಲ್ಲಿಯವರೆಗೂ ಕಾದಿದ್ದಾಯ್ತು... ಬಂದಾ ನೋಡೋ ಪೈಲ್ವಾನ್ ಅಂತ ಹಾಡು ಕೇಳಿದ್ದಾಯ್ತು... ಈಗ ಪೈಲ್ವಾನ್ ಬರೋದು ಹೇಗೆ ಅನ್ನೋದು ಖಚಿವಾಯ್ತು. ಪೈಲ್ವಾನ್ ಎಂಟ್ರಿಗೆ ಇಡೀ ಭಾರತವೇ ಜೈಕಾರ ಹಾಕಲಿದೆ. ಪಂಚಭಾಷೆಗಳಲ್ಲಿ ಬರೋಬ್ಬರಿ 3 ಸಾವಿರ ಚಿತ್ರಮಂದಿರಗಳಲ್ಲಿ ಕಿಚ್ಚ ಎಂಟ್ರಿ ಕೊಡಲಿದ್ದಾರೆ.

Anitha E | news18-kannada
Updated:August 27, 2019, 12:16 PM IST
Pailwaan: ಮೂರು ಸಾವಿರ ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರ: ಕೆ.ಜಿ.ಎಫ್‍ಗೂ ಸೆಡ್ಡು ಹೊಡೆಯುತ್ತಾ ಕಿಚ್ಚನ ಈ ಸಿನಿಮಾ..?
ಪೈಲ್ವಾನ್​ ಸಿನಿಮಾ ಪೋಸ್ಟರ್
Anitha E | news18-kannada
Updated: August 27, 2019, 12:16 PM IST
'ಪೈಲ್ವಾನ್' ರಿಲೀಸ್‍ಗೆ ದಿನಗಣನೆ ಆರಂಭವಾಗಿದೆ. 'ಪೈಲ್ವಾನ್​' ಪಟ್ಟು ಹಾಕೋ ಥಿಯೇಟರ್​ಗಳ ಲೆಕ್ಕಾಚಾರ ಶುರುವಾಗಿದೆ. ಎಷ್ಟು ಚಿತ್ರಮಂದಿರ..? ಯಾವ್ಯಾವ ಭಾಷೆಯಲ್ಲಿ 'ಪೈಲ್ವಾನ'ನ ಪಾಲೆಷ್ಟು..? ಕರ್ನಾಟಕದಲ್ಲಿ ಕಿಚ್ಚ ತೊಡೆತಟ್ಟೋ ಪರದೆಗಳೆಷ್ಟು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಬರ್ತಾ ಇದ್ದಾನೆ 'ಪೈಲ್ವಾನ್' ಅಂತ ಇಲ್ಲಿಯವರೆಗೂ ಕಾದಿದ್ದಾಯ್ತು... ಬಂದಾ ನೋಡೋ ಪೈಲ್ವಾನ್ ಅಂತ ಹಾಡು ಕೇಳಿದ್ದಾಯ್ತು... ಈಗ 'ಪೈಲ್ವಾನ್' ಬರೋದು ಹೇಗೆ ಅನ್ನೋದು ಖಚಿವಾಯ್ತು. 'ಪೈಲ್ವಾನ್' ಎಂಟ್ರಿಗೆ ಇಡೀ ಭಾರತವೇ ಜೈಕಾರ ಹಾಕಲಿದೆ. ಪಂಚಭಾಷೆಗಳಲ್ಲಿ ಬರೋಬ್ಬರಿ 3 ಸಾವಿರ ಚಿತ್ರಮಂದಿರಗಳಲ್ಲಿ ಕಿಚ್ಚ ಎಂಟ್ರಿ ಕೊಡಲಿದ್ದಾರೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಸಿನಿಮಾ 3 ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್ ಆಗ್ತಿದೆ.

Kichcha Sudeep Starrer Pailwaan Trailer is out in five languages
'ಪೈಲ್ವಾನ್​' ಟೀಸರ್ ಪೋಸ್ಟರ್​


ಹಾಗೆ ನೋಡಿದ್ರೆ ಇದು ಕಿಚ್ಚನ ಮಟ್ಟಿಗೂ ದಾಖಲೆ. ಕನ್ನಡ ಚಿತ್ರರಂಗದಲ್ಲೂ 'ಪೈಲ್ವಾನ್' ಹೊಸ ದಾಖಲೆ ಬರೆಯಲಿದೆ. ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿಯಲಿದೆ. ಕನ್ನಡದ ಮಟ್ಟಿಗೆ ಹಿಂದಿದ್ದ ದಾಖಲೆ 'ಕೆ.ಜಿ.ಎಫ್' ಸಿನಿಮಾದ್ದು. 'ಕೆ.ಜಿ.ಎಫ್' ಒಟ್ಟು 2500 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಉತ್ತರ ಭಾರತದಲ್ಲೇ 1500 ಚಿತ್ರಮಂದಿರಗಳನ್ನು ಆವರಿಸಿಕೊಂಡಿತ್ತು.

ಇದನ್ನೂ ಓದಿ: Pailwaan Song: ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಿದ ಈ ಹಾಡು ಪೈಲ್ವಾನ್​ ಸಿನಿಮಾದಲ್ಲಿ ಇರೋದಿಲ್ಲ..!

ಹಾಗೆ ನೋಡಿದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಕಿಚ್ಚ ಸುದೀಪ್ ಯಶ್‍ಗಿಂತಲೂ ದೊಡ್ಡ ಸ್ಟಾರ್​, ಸುದೀಪ್ 'ರಣ್', 'ಫೂಂಕ್' ಸಿನಿಮಾಗಳಿಂದ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದರೆ, ದಕ್ಷಿಣದಲ್ಲಿ `ಈಗ' ಸಿನಿಮಾದಿಂದ ಸ್ಟಾರ್ ಆಗಿದ್ದಾರೆ. ಸುದೀಪ್‍ಗೆ ದೇಶದಾದ್ಯಂತ ಮಾರ್ಕೆಟ್​ ಇದೆ. ಹಾಗಾಗಿ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚುತ್ತಿದೆ. ಮತ್ತು ಚಿತ್ರತಂಡ ಈಗಾಗಲೇ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ.

ಹಿಂದಿಯಲ್ಲಿ 'ಪೈಲ್ವಾನ್' ವಿತರಣೆಯ ಹಕ್ಕುಗಳನ್ನು ಝೀ ಸ್ಟುಡಿಯೋಸ್ ತೆಗೆದುಕೊಂಡಿದ್ದು, 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಪೆಹಲ್ವಾನ್​' ಎಂಟ್ರಿಯಾಗಲಿದ್ದಾನೆ. 'ಪೈಲ್ವಾನ್' ಚಿತ್ರದ ಗುಣಮಟ್ಟವನ್ನು ನೋಡಿ ವಿತರಣಾ ಹಕ್ಕು ಪಡೆದಿರೋ ಪ್ರತಿಷ್ಠಿತ ಝೀ ಸಂಸ್ಥೆ ಕಿಚ್ಚನನ್ನು ದೇಶಾದ್ಯಂತ ರಾರಾಜಿಸುವಂತೆ ಮಾಡಲಿದೆ.
Loading...

ಕರ್ನಾಟಕದ 500 ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್​ ರಿಲೀಸ್ !

ಹಿಂದಿಯಲ್ಲಿ 'ಪೈಲ್ವಾನ್' ಭರ್ಜರಿ ಪಟ್ಟುಹಾಕೋಕೆ ಪ್ಲಸ್ ಆಗಿರೋದು ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ. ಸುನೀಲ್ ಶೆಟ್ಟಿ ಈ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದಾರೆ. ಬಾಲಿವುಡ್‍ಗೂ ಸುನೀಲ್ ಶೆಟ್ಟಿ ಹೊಸ ರೀತಿಯ ಪಾತ್ರದಲ್ಲಿ ಕಂಬ್ಯಾಕ್ ಮಾಡ್ತಿರೋದು ಆಸಕ್ತಿಕರ ವಿಷಯ. ಇನ್ನು ಬಿ-ಟೌನ್ ಬೆಡಗಿ ಆಕಾಂಕ್ಷಾ ಸಿಂಗ್ ಕಿಚ್ಚನಿಗೆ ಜೋಡಿಯಾಗಿದ್ದಾರೆ.

ಕರ್ನಾಟಕದಾದ್ಯಂತ ಕೆಆರ್​ಜಿ ಸ್ಟುಡಿಯೋಸ್ 'ಪೈಲ್ವಾನ್' ವಿತರಣಾ ಹಕ್ಕನ್ನು ಪಡೆದಿದೆ. ಮೈಸೂರಿನ ದಸರಾ ಕುಸ್ತಿಯಲ್ಲಿ ವೀರ ಕೇಸರಿ ಪಟ್ಟ ಗೆಲ್ಲೋ ಕಿಚ್ಚ 'ಪೈಲ್ವಾನ್' ಆಗಿ ಸರಿಯಾಗಿ ದಸರಾ ಮೂಡ್‍ನಲ್ಲಿರುವಾಗಲೇ ಥಿಯೇಟರ್​ಗೆ ಎಂಟ್ರಿ ಕೊಡ್ತಿದ್ದಾರೆ. ಇದು ಕೂಡ ಕಿಚ್ಚನಿಗೂ ಪ್ಲಸ್ ಆಗಲಿದ್ದು, ರಾಜ್ಯದಾದ್ಯಂತ 500ಕ್ಕೂ ಹೆಚ್ಚು ತೆರೆಗಳಲ್ಲಿ 'ಪೈಲ್ವಾನ್' ಎಂಟ್ರಿ ಇರಲಿದೆ.ತೆಲುಗಿನಲ್ಲಿ 'ಕೆ.ಜಿ.ಎಫ್‍' ಸಿನಿಮಾವನ್ನು ಯಶಸ್ವಿಯಾಗಿ ರಿಲೀಸ್ ಮಾಡಿ ಭರ್ಜರಿ ಕಲೆಕ್ಷನ್ ತಂದುಕೊಟ್ಟಿದ್ದ ವಾರಾಹಿ ಚಲನಚಿತ್ರಂ ಸಂಸ್ಥೆ 'ಪೈಲ್ವಾನ್​'ಗೂ ಜತೆಯಾಗಿದ್ದಾರೆ.  ಕಿಚ್ಚ ಸೌತ್‍ನಲ್ಲಿ ಸ್ಟಾರ್ ಆಗೋಕೆ ಕಾರಣವಾಗಿದ್ದು ಕೂಡ ಇದೇ ವಾರಾಹಿ ಚಲನಚಿತ್ರಂ ಸಂಸ್ಥೆ ನಿರ್ಮಾಣದ 'ಈಗ' ಸಿನಿಮಾ ಅನ್ನೋದನ್ನು ಮರೆಯೋ ಹಾಗಿಲ್ಲ.

ಇದನ್ನೂಓದಿ: ಹೈದರಾಬಾದಿನಲ್ಲಿ ಗೂಳಿಗಳ ಕಾಳಗ: ದಡೂತಿ ಪೈಲ್ವಾನರಿಗೆ ಧ್ರುವ ಸರ್ಜಾ ಸವಾಲ್​..!

ಕಿಚ್ಚನ ಅಭಿನಯದ ಬಗ್ಗೆ ನಂಬಿಕೆ ಹೊಂದಿರೋ ವಾರಾಹಿ ವಿತರಕರು 'ಪೈಲ್ವಾನ್' ಅವತಾರಕ್ಕೂ ಸೈ ಅಂದಿದ್ರೆ, ತಮಿಳಿನಲ್ಲಿ ವೈಎನ್​ಟಿ ಓಎಕ್ಸ್ ಮಾರ್ಕೆಟಿಂಗ್ ಮತ್ತು ಮಲೆಯಾಳಂನಲ್ಲಿ ಪಲ್ಲವಿ ಸಂಸ್ಥೆ ವಿತರಣಾ ಹಕ್ಕನ್ನು ಪಡೆಕೊಂಡಿವೆ. ತೆಲುಗಿನಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ರೆ, ತಮಿಳು ಮಲೆಯಾಳಂನಲ್ಲೂ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಿಚ್ಚನಿಗೆ ಸ್ವಾಗತ ಸಿಗಲಿದೆ.

ಸುದೀಪ್‍ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಸೆಪ್ಟೆಂಬರ್ 12ಕ್ಕೆ ರಿಲೀಸ್ ಆಗಲಿರೋ 'ಪೈಲ್ವಾನ್' ಸಿನಿಮಾಗೂ ದೊಡ್ಡ ಓಪನಿಂಗ್ ಸಿಗೋ ನಿರೀಕ್ಷೆಯಿದೆ. ಇನ್ನು 'ಪೈಲ್ವಾನ್' ಟೀಂ ಕೂಡ ಎಲ್ಲ ಭಾಷೆಗಳಲ್ಲೂ ಭರ್ಜರಿ ಪ್ರಚಾರ ನಡೆಸ್ತಿದೆ. 'ಕೆ.ಜಿ.ಎಫ್' ನಂತರ 'ಪೈಲ್ವಾನ್' ಅಂತಹದ್ದೊಂದು ದಾಖಲೆ ಮಾಡುವ ನಿರೀಕ್ಷೆ ಇದೆ.

- ಓಂ ಸಕಲೇಶಪುರ

 

Nabha Natesh: ಇಸ್ಮಾರ್ಟ್ ಬೆಡಗಿ ನಭಾ ನಟೇಶ್​ ಕ್ಯೂಟ್​ ಪೋಸ್​..!


 

 
First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...