HOME » NEWS » Entertainment » KICHCHA SUDEEP STARRER PAILWAAN MOVIE TAMIL TRAILER GOT MORE THAN 10 LAKH VIEWS AE

Pailwaan: ಕಾಲಿವುಡ್​ನಲ್ಲೂ ಈಗ ಕಿಚ್ಚನದ್ದೇ​ ಹವಾ: ತಮಿಳಿನಲ್ಲಿ ಪೈಲ್ವಾನ್​ಗೆ ಇದೆ ಭಾರೀ ಬೇಡಿಕೆ..!

Pailwaan: ಈ ವರ್ಷದ ಬಹುನಿರೀಕ್ಷಿತ ಸಿನಿಮಾ, ಪೈಲ್ವಾನ್ ರಿಲೀಸ್‍ಗೆ ದಿನಗಣನೆ ಆರಂಭವಾಗಿದೆ. ಥಿಯೇಟರ್ ಅನ್ನೋ ಅಖಾಡದಲ್ಲಿ, ಬಾಕ್ಸಾಫಿಸ್​ ಅನ್ನೋ ಜಟ್ಟಿಯ ಜತೆ ಬಾದ್‍ಶಾ ತೊಡೆತಟ್ಟಿ ಕುಸ್ತಿ ಆಡಲಿದ್ದಾನೆ. ಮೂಲತಃ ಕರ್ನಾಟಕದವರೇ ಆದರೂ 90ರ ದಶಕದ ಬಾಲಿವುಡ್ ಆ್ಯಕ್ಷನ್ ಸ್ಟಾರ್ ಹಿರಿಯ ನಟ ಸುನೀಲ್ ಶೆಟ್ಟಿ, ಪೈಲ್ವಾನ್ ಮೂಲಕ ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿದ್ದಾರೆ. ಕನ್ನಡ, ತೆಲುಗು, ಹಾಗೂ ಹಿಂದಿಯಲ್ಲಿ ಪೈಲ್ವಾನ್​ ಅಬ್ಬರ ನೋಡಿದ್ದ ಕಿಚ್ಚನ ಅಭಿಮಾನಿಗಳಿಗೆ ಕಾಲಿವುಡ್​ನಿಂದಲೂ ಸಿಹಿ ಸುದ್ದಿ ಸಿಕ್ಕಿದೆ.

Anitha E | news18-kannada
Updated:September 6, 2019, 6:52 PM IST
Pailwaan: ಕಾಲಿವುಡ್​ನಲ್ಲೂ ಈಗ ಕಿಚ್ಚನದ್ದೇ​ ಹವಾ: ತಮಿಳಿನಲ್ಲಿ ಪೈಲ್ವಾನ್​ಗೆ ಇದೆ ಭಾರೀ ಬೇಡಿಕೆ..!
ಪೈಲ್ವಾನ್​ ಸಿನಿಮಾದ ತಮಿಳು ವರ್ಷನ್​ನ ಪೋಸ್ಟರ್​
  • Share this:
- ಅನಿತಾ ಈ, 

'ಪೈಲ್ವಾನ್'.... ಸದ್ಯದ ಬಹುನಿರೀಕ್ಷಿತ ಕನ್ನಡ ಸಿನಿಮಾ. ಕನ್ನಡ ಮಾತ್ರವಲ್ಲ ಬಹುನಿರೀಕ್ಷಿತ ಭಾರತೀಯ ಸಿನಿಮಾ ಅಂದರೂ ತಪ್ಪಲ್ಲ. ಈ ಸಿನಿಮಾದ ಟೀಸರ್, ಟ್ರೈಲರ್ ಮಾತ್ರವಲ್ಲದೆ ಹಾಡುಗಳೂ ಸಖತ್ ಸದ್ದು ಮಾಡುತ್ತಿವೆ. ಅದರಲ್ಲಂತೂ 'ಬಾರೋ ಪೈಲ್ವಾನ್...' ಸಿಕ್ಕಾಪಟ್ಟೆ ಕ್ರೇಜ್​ ಸೃಷ್ಟಿಸಿದೆ.

ಈ ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಐದೂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾದ ಟ್ರೈಲರ್​ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Kichcha Sudeep starrer Pailwaan movie will be releasing in 3000 theaters
'ಪೈಲ್ವಾನ್​' ಸಿನಿಮಾ ಪೋಸ್ಟರ್


ಕನ್ನಡ, ಹಿಂದಿ ಹಾಗೂ ತೆಲುಗಿನಲ್ಲಿ 'ಪೈಲ್ವಾನ್​'​  ಸ್ವಾಗತಕ್ಕೆ ಬರದಿಂದ ಸಿದ್ಧತೆ ನಡೆಯುತ್ತಿದೆ. ಇಂದು ಹೈದರಾಬಾದಿನಲ್ಲಿ ಪ್ರಿ ರಿಲೀಸ್​ ಕಾರ್ಯಕ್ರಮ ಸಹ ಜೋರಾಗಿಯೆ ನಡೆಯುತ್ತಿದೆ.

1 Million Views for #Bailwaan Tamil Trailer 💪https://t.co/doynx8mztW#BailwaanFromSep12@KicchaSudeep@krisshdop @aakanksha_s30 @iswapnakrishna @LahariMusic @KRG_Studios @RRRmotion_pics@DoneChannel1@CtcMediaboy @LahariMusic pic.twitter.com/kVtFatlisC
ಹೀಗಿರುವಾಗಲೇ ತಮಿಳು ಟ್ರೈಲರ್​ಗೆ ಭರ್ಜರಿ ವೀಕ್ಷಣೆ ಸಿಕ್ಕಿದೆ. ಹೌದು, ಆಗಸ್ಟ್​ 22ರಂದು ಬಿಡುಗಡೆಯಾದ ಟ್ರೈಲರ್​ಗೆ ಈಗ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ. ತಮಿಳಿನಲ್ಲಿ ಕಿಚ್ಚನಿಗೆ ಅಭಿಮಾನಿ ಬಳಗ ಇರುವುದು ಗೊತ್ತಿರುವ ವಿಷಯ. ಆದರೆ ಅವರ ಸಿನಿಮಾದ ಟ್ರೈಲರ್​ಗೆ ಈ ಮಟ್ಟದ ವೀಕ್ಷಣೆ ಸಿಕ್ಕಿರುವುದು ನಿಜಕ್ಕೂ ಸಾಧನೆಯೇ ಸರಿ.

Youtube Video


ಈ ಸಿನಿಮಾಗಾಗಿ ಕಿಚ್ಚ ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ. ತಿಂಗಳುಗಟ್ಟಲೆ ವರ್ಕೌಟ್ ಮಾಡಿ, ಬಾಡಿ ಬಿಲ್ಡ್ ಮಾಡಿಕೊಳ್ಳೋದ್ರಿಂದ ಹಿಡಿದು, ಹಾಡುಗಳಿಗಾಗಿ ತಮಗಿಷ್ಟವಿಲ್ಲದಿದ್ರೂ ಡ್ಯಾನ್ಸ್ ಕಲಿಯೋವರೆಗೂ ತಮ್ಮ ಕಂಫರ್ಟ್ ಝೋನ್‍ನಿಂದ ಹೊರಬಂದು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ವೈರಲ್​ ಆಯ್ತು ರಣಬೀರ್ ಕಪೂರ್​ - ಅಲಿಯಾ ವಿವಾಹದ ಫೋಟೋ..!

ಇದೇ ಸೆಪ್ಟಂಬರ್ 12ರಂದು 3 ಸಾವಿರಕ್ಕೂ ಹೆಚ್ಚು ಥಿಯೇಟಗಳಲ್ಲಿ ಬಿಡುಗಡೆಯಾಗಲಿದೆ 'ಪೈಲ್ವಾನ್​'. ಈಗಾಗಲೇ ಚಿತ್ರದ ಪ್ರಚಾರ ಸಹ ಭರ್ಜರಿಯಾಗಿ ನಡೀತಿದೆ. ಎಲ್ಲಕ್ಕೂ ಹೆಚ್ಚಾಗಿ ಮೇಕಿಂಗ್ ನೋಡಿದರೆ, 'ಪೈಲ್ವಾನ್' ಸಿನಿಮಾ ಎಷ್ಟು ಅದ್ಧೂರಿಯಾಗಿ ಮೂಡಿಬಂದಿದೆ ಎಂದು ಊಹಿಸಬಹುದು. ಅದೇನೇ ಇರಲಿ, ಕನ್ನಡದ 'ಪೈಲ್ವಾನ' ಐದೂ ಭಾಷೆಗಳಲ್ಲಿ ಗೆದ್ದು ಬೀಗಲಿ ಅನ್ನೋದೇ ಕಿಚ್ಚನ ಅಭಿಮಾನಿಗಳ ಆಶಯ.

Riya Sen: ಬಿಕಿನಿ ತೊಟ್ಟು ಬಿಸಿ ಏರಿಸಿದ ಹಾಟ್​ ಬೇಬಿ ರಿಯಾ ಸೇನ್​..! 
First published: September 6, 2019, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories