Kichcha Sudeep: ಕಿಚ್ಚ ಸುದೀಪ್​ ಅಭಿನಯದ ಹೊಸ ಸಿನಿಮಾದ ರಿಲೀಸ್​ ಡೇಟ್​ ಫಿಕ್ಸ್: ನಾಲ್ಕು ಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ಸಿಖಂದರ್​​..!

Kichcha Sudeep: ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪೈಲ್ವಾನ್​ ರಿಲೀಸ್​ ದಿನಾಂಕ ಈಗಾಗಲೇ ಪ್ರಕಟವಾಗಿದೆ. ಆದರೆ ಅವರ ಅಭಿನಯದ ಹೊಸ ಬಾಲಿವುಡ್​ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ಔಟಾಗಿದೆ. ಅದೂ ಕೂಡ ಆ ಸಿನಿಮಾವನ್ನು ಕನ್ನಡದಲ್ಲೇ ನೋಡುವ ಅವಕಾಶ ನಿಮ್ಮದಾಗಲಿದೆ.

Anitha E | news18
Updated:August 21, 2019, 4:39 PM IST
Kichcha Sudeep: ಕಿಚ್ಚ ಸುದೀಪ್​ ಅಭಿನಯದ ಹೊಸ ಸಿನಿಮಾದ ರಿಲೀಸ್​ ಡೇಟ್​ ಫಿಕ್ಸ್: ನಾಲ್ಕು ಭಾಷೆಗಳಲ್ಲಿ ಅಬ್ಬರಿಸಲಿದ್ದಾನೆ ಸಿಖಂದರ್​​..!
ನಟ ಸುದೀಪ್​
Anitha E | news18
Updated: August 21, 2019, 4:39 PM IST
- ಅನಿತಾ ಈ, 

ಕರುನಾಡ ಅಭಿನಯ ಚಕ್ರವರ್ತಿ ಸುದೀಪ್​ ಬಹುಭಾಷಾ ನಟ. ಅವರು ಕನ್ಡ, ಹಿಂದಿ, ತೆಲುಗಿನಲ್ಲಿ ಅಭಿಯಿಸಿರುವ ವಿಷಯ ತಿಳಿದೇ ಇದೆ. ಅವರ ಅಭಿನಯದ ಬಹುನಿರೀಕ್ಷಿತ ಹಾಗೂ ಹೊಸ ಸಿನಿಮಾ 'ಪೈಲ್ವಾನ್​' ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ.

ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ 'ಪೈಲ್ವಾನ್​' ರಿಲೀಸ್​ ದಿನಾಂಕ ಈಗಾಗಲೇ ಪ್ರಕಟವಾಗಿದೆ. ಆದರೆ ಅವರ ಅಭಿನಯದ ಹೊಸ ಬಾಲಿವುಡ್​ ಸಿನಿಮಾದ ಬಿಡುಗಡೆ ದಿನಾಂಕ ಇದೀಗ ಔಟ್​ ಆಗಿದೆ.

Kichcha Sudeep and Salman learning dance with Prabhudeva
ಪ್ರಭುದೇವಾರಿಂದ ಡಾನ್ಸ್​ ಕಲಿಯುತ್ತಿರುವ ಕಿಚ್ಚ ಹಾಗೂ ಸಲ್ಲು


ಹೌದು, ಕಿಚ್ಚ ಬಾಲಿವುಡ್​ನಲ್ಲಿ ಈಗಾಗಲೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಸಲ ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಲು ಮುಂದೆ ವಿಲನ್​ ಆಗಿ 'ದಬಂಗ್​ 3'ರಲ್ಲಿ ತೊಡೆ ತಟ್ಟಲಿದ್ದಾರೆ. ಸಿಖಂದರ್​ ಪಾತ್ರದಲ್ಲಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿಷಯ ಹಳೆಯದಾದರೂ ಈ ಸಿನಿಮಾ ರಿಲೀಸ್​ ದಿನಾಂಕ ಮಾತ್ರ ಎಲ್ಲರಿಗೂ ಹೊಸ ವಿಷಯವೆ.

ಇದನ್ನೂ ಓದಿ: Tapsee Pannu: ತಾಪ್ಸಿ ಪನ್ನು ಫೋಟೋಗೆ ಹೀಗ್ಯಾಕೆ ಕಮೆಂಟ್​ ಮಾಡಿದ್ರು ವಿವಾದಿತ ನಿರ್ದೇಶಕ ಅನುರಾಗ್​ ಕಶ್ಯಪ್​..!

ಕಿಚ್ಚ ಅಭಿನಯದ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಅದಕ್ಕೆ ಖುದ್ದು ಸುದೀಪ್​ ಕಂಠದಾನ ಮಾಡಲಿದ್ದಾರೆ ಅನ್ನೋ ಸುದ್ದಿ ಸಹ ಸಖತ್ ಸದ್ದು ಮಾಡುತ್ತಿದೆ. ಹೀಗಿರುವಾಗಲೇ 'ದಬಂಗ್​ 3'ರ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಲ್ಮಾನ್​ ಖಾನ್​ಪ್ರಕಟಿಸಿದ್ದಾರೆ.
Loading...





ಕನ್ನಡದಲ್ಲೂ ದಬಂಗ್​ 3 ತೆರೆ ಕಾಣಲಿದೆ

ನಟ ಹಾಗೂ ನಿರ್ದೇಶಕ ಪ್ರಭು ದೇವಾ ನಿರ್ದೇಶನದ ಈ ಸಿನಿಮಾ ಡಿಸೆಂಬರ್​ 20ಕ್ಕೆ ತೆರೆಕಾಣಲಿದೆ. ಅದೂ ಕೂಡ ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ. ಈ ಬಗ್ಗೆ ಸಲ್ಮಾನ್​ ಖಾನ್​​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನು ಓದಿ: Ranveer Singh: 12ನೇ ವಯಸ್ಸಿನಲ್ಲೇ ಬಯಸಿ ಬಯಸಿ ಶೀಲ ಕಳೆದುಕೊಂಡಿದ್ದ ಬಿ-ಟೌನ್​ ಪ್ಲೇ ಬಾಯ್​ ರಣವೀರ್​ ಸಿಂಗ್​..!

ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​, ಸೋನಾಕ್ಷಿ ಸಿನ್ಹಾ, ಅರ್ಬಾಸ್​ ಖಾನ್​, ಸುದೀಪ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ದಬಂಗ್​' ಸರಣಿ ಸಿನಿಮಾಗಳಲ್ಲಿ ನಾಯಕನಂತೆ ವಿಲನ್​ ಸಹ ಸಿಕ್ಕಾಪಟ್ಟೆ ಶಕ್ತಿಶಾಲಿಯಾಗಿರುತ್ತಾನೆ. ಅಂತೆಯೇ ಇದರಲ್ಲೂ ಸುದೀಪ್​ ಪಾತ್ರ ತುಂಬಾ ಸ್ಟ್ರಾಂಗ್​ ಆಗಿದೆ ಎನ್ನಲಾಗುತ್ತಿದೆ.

ಒಟ್ಟಾರೆ ಕಿಚ್ಚ ಅಭಿನಯದ ಬಾಲಿವುಡ್​ ಸಿನಿಮಾಗಳನ್ನು ಹಿಂದಿಯಲ್ಲೇ ನೋಡುತ್ತಿದ್ದ ಅಭಿಮಾನಿಗಳಿಗೆ ಈಗ ರಸದೌತಣ ಸಿಗಲಿದೆ. ಕಿಚ್ಚನ ಹಿಂದಿ ಚಿತ್ರವನ್ನು ಕನ್ನಡಿಗರು ಈಗ ಕನ್ನಡದಲ್ಲೇ ನೋಡಬಹುದಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

 

Kangana: 600 ರೂಪಾಯಿ ಸೀರೆ ತೊಟ್ಟ ಕಂಗನಾ: ಫಿದಾ ಆದ ನೆಟ್ಟಿಗರು..!

First published:August 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...