HOME » NEWS » Entertainment » KICHCHA SUDEEP STARRER KOTIGOBBA 3 WILL BE RELEASING ON APRIL 23RD AE

Kichcha Sudeep: ಯುವರತ್ನ, ರಾಬರ್ಟ್​ ನಂತರ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ 3 ತೆರೆಗೆ..!

Kotigobba 3 Release Date: ಇನ್ನು ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳು ಎರಡಿವೆ. ಒಂದು ಫ್ಯಾಂಟಮ್​ ಹಾಗೂ ಕೋಟಿಗೊಬ್ಬ 3. ಇದರಲ್ಲಿ ಕೋಟಿಗೊಬ್ಬ 3 ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ಇನ್ನೂ ಚಿತ್ರತಂಡ ಎಲ್ಲೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಹೊಂಬಾಳೆ ಫಿಲಂಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಟ್ವೀಟ್​ ಮಾಡುವ ಮೂಲಕ ಕೋಟಿಗೊಬ್ಬ 3 ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ.

Anitha E | news18-kannada
Updated:January 19, 2021, 9:11 AM IST
Kichcha Sudeep: ಯುವರತ್ನ, ರಾಬರ್ಟ್​ ನಂತರ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ 3 ತೆರೆಗೆ..!
ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಬಾಗಿಲು ತೆರೆದಿವೆ. ಸುಮಾರು 7 ತಿಂಗಳ ಕಾಲ ಸಿನಿಮಾ ಪ್ರದರ್ಶನ ಇಲ್ಲದೆ  ಸಿನಿಪ್ರೇಮಿಗಳು  ಡಿಜಿಟಲ್​ ವೇದಿಕೆಯ ಮೊರೆ ಹೋಗಿದ್ದರು. ಲಾಕ್​ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ  ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭವಯ್ತು. ಅದೂ ಸಹ ಎಲ್ಲ ಸುರಕ್ಷತಾ ಕ್ರಮಗಳ ಜೊತೆಯಲ್ಲಿ ಕೇವಲ ಶೇ 50 ರಷ್ಟು ಪ್ರೇಕ್ಷಕರಿಗೆ ಸಿನಿಮಾ ನೋಡಲು ಅನುಮತಿ ನೀಡಲಾಗಿತ್ತು. ಇನ್ನೂ ಸಹ ಇದೇ ನಿಯಮ ಪಾಲನೆಯಾಗುತ್ತಿದೆ. ಆರಂಭದಲ್ಲಿ ಎರಡು ಹೊಸ ಕನ್ನಡ ಸಿನಿಮಾಗಳು ತೆರೆಕಂಡವು. ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ್ಸವಿಯಾದರೂ, ಸಿನಿಪ್ರಿಯರನ್ನು ಥಿಯೇಟರ್​ಗೆ ಕರೆತರುವಲ್ಲಿ ವಿಫಲವಾದವು. ಇನ್ನೂ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಪ್ರೇಕ್ಷಕರಿಗೆ ಅವಕಾಶ ಸಿಗುವವರೆಗೂ ಸ್ಟಾರ್ ನಟರ ಸಿನಿಮಾಗಳನ್ನು ರಿಲೀಸ್​ ಮಾಡುವುದಿಲ್ಲ ಎಂದು ನಿರ್ಮಾಪಕರು ಪಟ್ಟು ಹಿಡಿದರು. ಹೀಗಿರುವಾಗಲೇ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದ ರಿಲೀಸ್​ ದಿನಾಂಕ ಹೊರ ಬಿತ್ತು. 

ಸಂತೋಷ್​ ಆನಂದ್​ ರಾಮ್​ ನಿರ್ದೇಶನದಲ್ಲಿ ಪುನೀತ್​ ಅಭಿನಯಿಸಿರುವ ಯುವರತ್ನ ಸಿನಿಮಾ ಏಪ್ರಿಲ್​ 1ಕ್ಕೆ ರಿಲೀಸ್​ ಆಗಲಿದೆ. ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆಯೇ ಒಂದೊಂದೇ ಸ್ಟಾರ್​ ನಟರ ಚಿತ್ರತಂಡಗಳು ತಮ್ಮ ಸಿನಿಮಾಗಳ ರಿಲೀಸ್ ಡೇಟ್​ ಪ್ರಕಟಿಸೋಕೆ ಆರಂಭಿಸಿವೆ. ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಮಾರ್ಚ್​ 11ಕ್ಕೆ ರಿಲೀಸ್​ ಆಗಲಿದೆ. ನಿನ್ನೆಯಷ್ಟೆ ಪೊಗರು ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್​ ಮಾಡಿದ್ದಾರೆ ಧ್ರುವ ಸರ್ಜಾ. ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಫೆ. 19ಕ್ಕೆ ರಿಲೀಸ್​ ಆಗಲಿದೆ.



ಇನ್ನು ಕಿಚ್ಚ ಸುದೀಪ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳು ಎರಡಿವೆ. ಒಂದು ಫ್ಯಾಂಟಮ್​ ಹಾಗೂ ಕೋಟಿಗೊಬ್ಬ 3. ಇದರಲ್ಲಿ ಕೋಟಿಗೊಬ್ಬ 3 ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ಇನ್ನೂ ಚಿತ್ರತಂಡ ಎಲ್ಲೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಹೊಂಬಾಳೆ ಫಿಲಂಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಟ್ವೀಟ್​ ಮಾಡುವ ಮೂಲಕ ಕೋಟಿಗೊಬ್ಬ 3 ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದ್ದಾರೆ.

Kotigobba 3 release date, Kotigobba 3 Releasing on April 23rd, Sudeep, Kotigobba-3, ಕಿಚ್ಚ ಸುದೀಪ್​, ಏಪ್ರಿಲ್​ 23ಕ್ಕೆ ಕೋಟಿಗೊಬ್ಬ3 ರಿಲೀಸ್​, Kotigobba 3 Release Date, Kotigobba-3 set release on April 23rd, Yuvarathna movie set release on April, Roberrt movie likely to release April, ಸುದೀಪ್, ಕೋಟಿಗೊಬ್ಬ-3, ಏಪ್ರಿಲ್ 23ಕ್ಕೆ ಕೋಟಿಗೊಬ್ಬ-3 ರಿಲೀಸ್, ಯುವರತ್ನ ಸಿನಿಮಾ, ರಾಬರ್ಟ್, pogaru releasing on feb 19th, Kichcha Sudeep, Kotigobba 3 telugu Fan made poster, Kotigobba 3 in Telugu, Kotigobba 3 in Tamil, Kotigobba 3 New Teaser, Kiccha sudeepa, Kiccha sudeep birthday, Sudeep birthday, Happy Birthday kiccha sudeep, Hbd sudeep, Hbd kiccha sudeep, Birthday wishes for kiccha sudeep, Kiccha sudeep age, Sudeep age, What is the age of sudeep, Sudeep photo, Kiccha sudeep photos, Sudeep upcoming movies, Kiccha sudeep, Movies, Sudeep twitter, Sudeep height, Sudeep wife, Sudeep daughter, Priya sudeep, ಸುದೀಪ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್​, ಕೋಟಿಗೊಬ್ಬ 3 ಸಿನಿಮಾದ ಟೀಸರ್​ ರಿಲೀಸ್​
ಹೊಂಬಾಳೆ ಫಿಲಂಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮಾಡಿರುವ ಟ್ವೀಟ್​


ಕೋಟಿಗೊಬ್ಬ 3 ಚಿತ್ರತಂಡ ಎಲ್ಲೂ ಇಲ್ಲಿಯವರೆಗೂ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿಲ್ಲ. ಆದರೆ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಈ ಸಿನಿಮಾ ಏಪ್ರಿಲ್​ 23ಕ್ಕೆ ರಿಲೀಸ್ ಆಗಲಿದೆ ಎಂದು ಟ್ವೀಟ್​ ಮಾಡುತ್ತಿದ್ದಾರೆ.





ಶಿವಕಾರ್ತಿಕ್​ ನಿರ್ದೇಶನದ ಕೋಟಿಗೊಬ್ಬ 3 ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸಿದ್ದಾರೆ.  ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಇದ್ದ ಕುತೂಹಲವನ್ನು ದುಪ್ಪಟ್ಟು ಮಾಡಿವೆ. ​ ಟೀಸರ್​ನಲ್ಲಿ ಸುದೀಪ್​ ಲುಕ್ ​ಹಾಗೂ ಮ್ಯಾನರಿಸಂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಇನ್ನು ಟೀಸರ್​ನಲ್ಲಿರುವ ಪಟಾಕಿ ಪೋರಿ ಹಾಡು ಸಹ ಸಖತ್​ ಸ್ಪೈಸಿಯಾಗಿದೆ.
Published by: Anitha E
First published: January 19, 2021, 9:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories