ಧೂಳೆಬ್ಬಿಸುತ್ತಿದೆ Kichcha Sudeep ಅಭಿನಯದ Kotigobba3 ಚಿತ್ರದ Trailer

ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1.5 ಮಿಲಿಯನ್​ ಮಂದಿ ಟ್ರೇಲರ್ ವೀಕ್ಷಿಸಿದ್ದು, ಒಂದು ಲಕ್ಷದ 66 ಸಾವಿರ ಮಂದಿ ಲೈಕ್ಸ್​ ಕೊಟ್ಟಿದ್ದಾರೆ. 20 ಸಾವಿರಕ್ಕೂ ಅಧಿಕ ಕಮೆಂಟ್​ ಬಂದಿದೆ.

ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​

ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​

  • Share this:
ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ವ್ಯವಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ನಂತರ ದೊಡ್ಡ ಸ್ಟಾರ್​ಗಳು ಹಾಗೂ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ದಿನಾಂಕ ಪ್ರಕಟಿಸಿವೆ. ಅವುಗಳಲ್ಲಿ ಕೋಟಿಗೊಬ್ಬ 3 (Kotigobba3 ) ಸಿನಿಮಾ ಸಹ ಒಂದು. ಕಿಚ್ಚ ಸುದೀಪ್​  (Kichcha Sudeep) ಅಭಿನಯದ ಕೋಟಿಗೊಬ್ಬ 3 ಸಿನಿಮಾ ಇದೇ ತಿಂಗಳ 14ರಂದು ಅಂದರೆ, ಮುಂದಿನ ಗುರುವಾರ ತೆರೆ ಕಾಣಲಿದೆ. ಹೀಗಿರುವಾಗಲೇ ಚಿತ್ರತಂಡ ಸಿನಿಮಾದ ಪ್ರಚಾರದ ಜೊತೆಗೆ ರಿಲೀಸ್​ಗೆ ಸಿದ್ಧತೆ ನಡೆಸಿದೆ. ಈಗಾಗಲೇ ಸೆನ್ಸಾರ್​ ಮಂಡಳಿ ಈ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದ್ದು, ನಿನ್ನೆಯಷ್ಟೆ ಚಿತ್ರದ ಟ್ರೇಲರ್  (Kotigobba3  Trailer) ರಿಲೀಸ್​ ಆಗಿದೆ. ನಿನ್ನೆ ಸಂಜೆ ಆನಂದ್ ಆಡಿಯೋ ಯೂಟ್ಯೂಬ್​ ಚಾನಲ್​ನಲ್ಲಿ ರಿಲೀಸ್​ ಆಗಿರುವ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಿನಿಮಾ ಕಥೆಯ ಕುರಿತಾಗಿ ಸಾಕಷ್ಟು ಸುಳಿವು ಕೊಟ್ಟಿರುವ ಕೋಟಿಗೊಬ್ಬ 3 ಟ್ರೇಲರ್​ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸಿದೆ. 2.42 ನಿಮಿಷದ ಟ್ರೇಲರ್​ ಆರಂಭವಾಗುವುದೇ ಆ್ಯಕ್ಷನ್​ ಸೀಕ್ವೆನ್ಸ್​ನಿಂದ. ಒಂದೆಡರು ದೃಶ್ಯಗಳ ನಂತರ ಕಿಚ್ಚ ಸುದೀಪ್ ಎಂಟ್ರಿ ಆಗುತ್ತದೆ.ನಿನ್ನೆ ರಿಲೀಸ್ ಆಗಿರುವ ಟ್ರೇಲರ್​ಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1.5 ಮಿಲಿಯನ್​ ಮಂದಿ ಟ್ರೇಲರ್ ವೀಕ್ಷಿಸಿದ್ದು, ಒಂದು ಲಕ್ಷದ 66 ಸಾವಿರ ಮಂದಿ ಲೈಕ್ಸ್​ ಕೊಟ್ಟಿದ್ದಾರೆ. 20 ಸಾವಿರಕ್ಕೂ ಅಧಿಕ ಕಮೆಂಟ್​ ಬಂದಿದೆ. ಕೋಟಿಗೊಬ್ಬ 3 ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​. ಇದರಲ್ಲಿ ಸುದೀಪ್​ ಅವರನ್ನುಸಾಹಸಮಯ ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Kotigobba 3 Release Date: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್​

ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್​ಗಳು ಕಣ್ಮನ ಸೆಳೆಯುವ ಲೊಕೇಷನ್​, ಸಖತ್ ಆ್ಯಕ್ಷನ್​ ಸೀಕ್ವೆನ್ಸ್​ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್​ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್​ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಅವರ ಸ್ಪೆಷರ್ ಅಪಿಯರೆನ್ಸ್​ ಸಹ ಈ ಸಿನಿಮಾದಲ್ಲಿದೆ

ಇದನ್ನೂ ಓದಿ: ದುಬೈನಲ್ಲಿ ಐಪಿಎಲ್​ ಪಂದ್ಯಗಳನ್ನು ವೀಕ್ಷಿಸುತ್ತಾ ಎಂಜಾಯ್ ಮಾಡುತ್ತಿರುವ Kichcha Sudeep ದಂಪತಿ

ಕೋಟಿಗೊಬ್ಬ 3 ಚಿತ್ರದ ಡೈಲಾಗ್​ ಕುರಿತಾದ ಗುಸು ಗುಸು ಆರಂಭ....

ಕೋಟಿಗೊಬ್ಬ 3 ಸಿನಿಮಾದ ಟ್ರೇಲರ್​ನಲ್ಲಿ ಸಖತ್ ಡೈಲಾಗ್ಸ್​ ಇವೆ. ಅದರಲ್ಲೂ ಎಲ್ಲರ ಗಮನ ಸೆಳೆದಿರುವ ಡೈಲಾಗ್​ ಎಂದರೆ, ಚಿನ್ನ.....ಲೈಫ್​ನಲ್ಲಿ ಎರಡು ಪಾಠ ಕಲಿತಿದ್ದೀನಿ. ಒಂದು ಓವರ್ ಆಗಿ ಮಾತನಾಡಬಾರದು.... ಎರಡನೆಯದು ಓವರ್​ ಆಗಿ ಮಾತನಾಡೋದನ್ನ ಕೇಳಿಸಿಕೊಳ್ಳಲೂ ಬಾರದು ಅಂತ ಡೈಲಾಗ್​ ಹೊಡೆಯುತ್ತಾರೆ. ನಂತರ, ಸೋ ನೀನು ಮಾತನಾಡುತ್ತಿರುವ... ನಾನು ಬಾಯಿ ಮುಚ್ಚಿಕೊಂಡಿರುತ್ತೇನೆ ಅಂತ ಸನ್ನೆ ಮಾಡಿ ತೋರಿಸುತ್ತಾರೆ ಸುದೀಪ್​. ಇದು ಅಭಿಮಾನಿಗಳ ಫೇವರಿಟ್ ಡೈಲಾಗ್​ ಹಾಗೂ ಸೀನ್​ ಆಗಿದೆ. ಇದನ್ನು ಸಿನಿರಂಗದಲ್ಲಿರುವ ಕೆಲವರಿಗೆ ಕೊಟ್ಟಿರುವ ಪಂಚ್​ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Kichcha Sudeep: 133 ವರ್ಷ ಹಳೆಯ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್..!

ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್​ ಸಹ ಬ್ರೇಕ್​ ಹಾಕಿಲ್ಲ. ಇನ್ನು ಸಿನಿಮಾದ ವಿಲನ್​ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್​​ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.
Published by:Anitha E
First published: