Kichcha Sudeep: ಕಿಚ್ಚನ ಅಡ್ಡಾದಿಂದ ಹೊರಬಿತ್ತು ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಕೋಟಿಗೊಬ್ಬ 3 ಸಿನಿಮಾ ಕುರಿತಾದ ಅಪ್ಡೇಟ್​

Kotigobba 3: ಕಳೆದ ವರ್ಷ ಜನವರಿ 20ರಂದು ಕಿಚ್ಚ ಸುದೀಪ್​ ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣ ಮುಗಿಸಿದ ಕುರಿತಾಗಿ ಟ್ವೀಟ್​ ಮಾಡಿದ್ದರು. ಜೊತೆಗೆ ಕೆಲಸ ಮಾಡಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈಗ ಕೋಟಿಗೊಬ್ಬ ಚಿತ್ರತಂಡದ ಕಡೆಯಿಂದ ಒಂದು ಸಿಹಿ ಸುದ್ದಿ ಹೊರ ಬಿದ್ದಿದೆ.

ಕೋಟಿಗೊಬ್ಬ 3 ಸಿನಿಮಾದ ಫ್ಯಾನ್​ ಮೇಡ್​ ಪೋಸ್ಟರ್​

ಕೋಟಿಗೊಬ್ಬ 3 ಸಿನಿಮಾದ ಫ್ಯಾನ್​ ಮೇಡ್​ ಪೋಸ್ಟರ್​

  • Share this:
ಕಿಚ್ಚ ಸುದೀಪ್​ ಕಳೆದ ಹಲವು ದಿನಗಳಿಂದ ಸಖತ್​ ಸುದ್ದಿಯಲ್ಲಿದ್ದಾರೆ. ಒಂದು ತಮ್ಮ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್​ ರೋಣದಿಂದಾಗಿ. ಮತ್ತೊಂದು ಇತ್ತೀಚೆಗೆ 25 ವರ್ಷಗಳನ್ನು ಸಿನಿ ಇಂಡಸ್ಟ್ರಿಯಲ್ಲಿ ಪೂರೈಸಿದ್ದರಿಂದಾಗಿ. ಸಾಲು ಸಾಲು ಸಿನಿಮಾಗಳ ಕೆಲಸಗಳಲ್ಲಿ ವ್ಯಸ್ತವಾಗಿರುವ ಸುದೀಪ್​ ಅವರ ಮತ್ತೊಂದು ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ಅಂದರೆ ಕೋಟಿಗೊಬ್ಬ 3 (Kotigobba 3). ಹೌದು, ವಿಕ್ರಾಂತ್​ ರೋಣಗಿಂತ  (Vikrant Rona)ಮುಂಚಿತವಾಗಿ ಚಿತ್ರೀಕರಣ ಮುಗಿಸಿ, ರಿಲೀಸ್​ಗೆ ಸಜ್ಜಾಗಿರುವ ಚಿತ್ರವಿದು. ಲಾಕ್​ಡೌನ್​ನಲ್ಲಿ ವಿಕ್ರಾಂತ್​ ರೋಣ ಚಿತ್ರದ ಜೊತೆಗೆ ಕೋಡಿಗೊಬ್ಬ 3 ಸಿನಿಮಾದ ಕುರಿತಾಗಿಯೂ ಸುದೀಪ್​ ಅಪ್ಡೇಟ್​ ಕೊಡುತ್ತಿದ್ದರು. ಆದರೆ ಈ ಸಿನಿಮಾದ ರಿಲೀಸ್​ ಬಗ್ಗೆ ಹಾಗೂ ಸಿನಿಮಾದ ಪ್ರಚಾರ ಕಾರ್ಯ ಕುರಿತಂತೆ ಇನ್ನೂ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಇತ್ತೀಚೆಗಷ್ಟೆ ದುಬೈನಲ್ಲಿಬುರ್ಜ ಖಲೀಫ ಕಟ್ಟದ ಮೇಲೆ ವಿಕ್ರಾಂತ್​ ರೋಣ ಸಿನಿಮಾದ ಟೈಟಲ್​ ಲೊಗೋವನ್ನು ಪ್ರದರ್ಶಿಸಲಾಯಿತು. ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್​ ನಂತರ ಅಭಿಮಾನಿಗಳು ಕೋಟಿಗೊಬ್ಬ 3 ಸಿನಿಮಾ ಕುರಿತಾದ ಮಾಹಿತಿಗಾಗಿ ಕಾಯುತ್ತಿದ್ದಾರೆ. 

ಕಳೆದ ವರ್ಷ ಜನವರಿ 20ರಂದು ಕಿಚ್ಚ ಸುದೀಪ್​ (Kichcha Sudeep) ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣ ಮುಗಿಸಿದ ಕುರಿತಾಗಿ ಟ್ವೀಟ್​ ಮಾಡಿದ್ದರು. ಜೊತೆಗೆ ಕೆಲಸ ಮಾಡಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈಗ ಕೋಟಿಗೊಬ್ಬ ಚಿತ್ರತಂಡದ ಕಡೆಯಿಂದ ಒಂದು ಸಿಹಿ ಸುದ್ದಿ ಹೊರ ಬಿದ್ದಿದೆ.

Phantom is now Vikrant Rona, Phantom title changed, Sudeep photo on Burj Khalifa on Jan 31st, Vikrant Rona title to reveal on Burj Khalifa, ಫ್ಯಾಂಟಮ್ ಸಿನಿಮಾ ಶೀರ್ಷಿಕೆ ಬದಲಾವಣೆ, ವಿಕ್ರಾಂತ್ ರೋಣ ಸಿನಿಮಾ, ಬುರ್ಜ್ ಖಲೀಫ ಮೇಲೆ ಸುದೀಪ್ ಫೋಟೋ, Phantom Teaser, Anup S Bhandari, Kannada Movie Phantom, ಫ್ಯಾಂಟಮ್​ ಸಿನಿಮಾ ಟೀಸರ್​, ಫ್ಯಾಂಟಮ್​ ಟೀಸರ್​ ರಿಲೀಸ್​ ಮುಂದಕ್ಕೆ, Kotigobba 3 New Teaser, Kiccha sudeepa, Kiccha sudeep birthday, Sudeep birthday, Happy Birthday kiccha sudeep, Hbd sudeep, Hbd kiccha sudeep, Birthday wishes for kiccha sudeep, Kiccha sudeep age, Sudeep age, What is the age of sudeep, Sudeep photo, Kiccha sudeep photos, Sudeep upcoming movies, Kiccha sudeep, Movies, Sudeep twitter, Sudeep height, Sudeep wife, Sudeep daughter, Priya sudeep, ಸುದೀಪ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್​, ಕೋಟಿಗೊಬ್ಬ 3 ಸಿನಿಮಾದ ಟೀಸರ್​ ರಿಲೀಸ್, Kichcha Sudeep Changed the Phantom movie name as Vikrant Rona here is the details ae
ವಿಕ್ರಾಂತ್​ ರೋಣ ಸಿನಿಮಾದಲ್ಲಿ ಕಿಚ್ಚ ಸುದೀಪ್​


ಕೋಟಿಗೊಬ್ಬ ಚಿತ್ರತಂಡ ಇನ್ನೂ ರಿಲೀಸ್ ದಿನಾಂಕ ಪ್ರಕಟಿಸಿಲ್ಲ. ಆದರೆ ಅಭಿಮಾನಿಗಳು ಮಾತ್ರ ತಮ್ಮದೇ ಆದ ಒಂದು ದಿನಾಂಕ ನಿಗದಿ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಚಿತ್ರತಂಡ ಸಿನಿಮಾದ ಆಡಿಯೋ ರಿಲೀಸ್​ಗೆ ಡೇಟ್​ ಫಿಕ್ಸ್​ ಮಾಡಿದೆ. ಹೌದು,  ಮಾ.28ರಂದು ಆಡಿಯೋ ಲಾಂಚ್​ ಮಾಡಲು ಕೋಟಿಗೊಬ್ಬ 3 ಚಿತ್ರತಂಡ ಯೋಚಿಸುತ್ತಿದೆ ಎನ್ನಲಾಗುತ್ತಿದೆ.

Ready Agrooo@ArjunJanyaMusic sir Huge Expectations On you ...#Kotigobba3audioonmarch28 #Kotigobba3 #VikrantRona #VikrantRonaOnBurjKhalifa #WorldGetsANewHero pic.twitter.com/LHVpTztGyn

ಶಿವಕಾರ್ತಿಕ್ ನಿರ್ದೇಶನದ ಮತ್ತು ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ-3 ಸಿನಿಮಾವನ್ನು 2020ರ ಮೇ 1 ರಂದು ತೆರೆಗೆ ತರಲು ಪ್ಲಾನ್ ಮಾಡಿಕೊಂಡಿತ್ತು ಚಿತ್ರತಂಡ. ಆದರೆ ನಂತರ ಕೊರೋನಾ ಕಾರಣದಿಂದಾಗಿ ಪ್ಲಾನ್​ ಎಲ್ಲ ತಲೆಕೆಳಗಾಯಿತು. ಆದರೆ ಈಗ ಚಿತ್ರತಂಡ ಕೋಟಿಗೊಬ್ಬ 3 ಸಿನಿಮಾವನ್ನು ಏಪ್ರಿಲ್ 29ಕ್ಕೆರಿಲೀಸ್ ಮಾಡಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಫ್ಯಾಷನ್​ ವಿಷಯದಲ್ಲಿ ಮಲೈಕಾ ಅರೋರಾಗೆ ಟಕ್ಕರ್​ ಕೊಟ್ಟ ಅನನ್ಯಾ ಪಾಂಡೆ..!

ಕೋಟಿಗೊಬ್ಬ 3 ಸಿನಿಮಾದ ಆಡಿಯೋ ಲಾಂಚ್​ ಅನ್ನು ಅದ್ಧೂರಿಯಾಗಿ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಇದರ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ ದಿಗ್ಗಜರು ಭಾಗಿಯಾಗಲಿದ್ದಾರೆ ಎಂದೂ ಹೇಳಲಾಗುತ್ತಿದೆ.


ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾದ ರಿಲೀಸ್​ ದಿನಾಂಕ ನಿಗದಿಯಾಗಿಲ್ಲ. ಆದರೆ ಈ ಪ್ಯಾನ್​ ಇಂಡಿಯಾ ಸಿನಿಮಾ ಕನ್ನಡ ಸೇರಿದಂತೆ ಆರು ಭಾಷೆಯಲ್ಲಿ ರಿಲೀಸ್ ಆಗಲಿದೆ. ಅಲ್ಲದೆ ಕನ್ನಡದಿಂದ ಈ ಸಲ ಕಿಚ್ಚನ ಸಿನಿಮಾ ಇಂಗ್ಲಿಷ್​ನಲ್ಲೂ ಡಬ್​ ಆಗಿ ರಿಲೀಸ್ ಆಗಲಿದೆಯಂತೆ.
Published by:Anitha E
First published: