Kichcha Sudeep ಅಭಿನಯದ Kotigobba 3 ಸಿನಿಮಾದ ಬೆಳಗಿನ ಶೋ ರದ್ದು: ಸಿಟ್ಟಿಗೆದ್ದ ಅಭಿಮಾನಿಗಳು..!

ಆಯುಧಪೂಜೆಯಂದು ಬೆಳಗಿನಂದಲೇ ಸಿನಿಮಾ ಪ್ರದರ್ಶನ ಇದೆ ಎಂದು ಟಿಕೆಟ್​ಗಳನ್ನು ಮಾರಾಟ ಮಾಡಲಾಗಿತ್ತು. 6 ಗಂಟೆಗೆ ಇದ್ದ ಕೋಟಿಗೊಬ್ಬ 3 ಸಿನಿಮಾದ ಪ್ರದರ್ಶನವನ್ನು 7:30ಕ್ಕೆ ಮುಂದೂಡಲಾಗಿತ್ತು. 7:30 ಆದರೂ ಸಿನಿಮಾ ಪ್ರದರ್ಶನ ಆರಂಭವಾಗಲಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಬಳಿ ಸೇರಿದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ. 

ಕೋಟಿಗೊಬ್ಬ 3 ಸಿನಿಮಾದ ಬೆಳಗಿನ ಶೋ ರದ್ದು

ಕೋಟಿಗೊಬ್ಬ 3 ಸಿನಿಮಾದ ಬೆಳಗಿನ ಶೋ ರದ್ದು

  • Share this:
ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್  (Duniya Vijay) ಅಭಿನಯದ ಸಲಗ  (Salaga)ಹಾಗೂ ಕಿಚ್ಚ ಸುದೀಪ್​  (Kichcha Sudeep)ಅವರ ಕೋಟಿಗೊಬ್ಬ 3 ತೆರೆ ಕಂಡಿದೆ. ಕೊರೋನಾ ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಮಂದಿರಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿದ ನಂತರ ತೆರೆ ಕಾಣುತ್ತಿರುವ ಸಿನಿಮಾಗಳು ಇವಾಗಿದೆ. ಅದರಲ್ಲೂ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ ಸಿನಿಮಾ ನೋಡಲು ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಗಳ ಬಳಿ ಸೇರಿದ್ದಾರೆ. ಎರಡೂವರೆ ವರ್ಷದಿಂದ ಸಿನಿಮಾಗಾಗಿ ಕಾಯ್ತಿರೋ ಕಿಚ್ಚನ ಅಭಿಮಾನಿಗಳು ಬೆಳಿಗ್ಗೆಯೇ ಮೊದಲ ಪ್ರದರ್ಶನಕ್ಕಾಗಿ ಕಾಯುತ್ತಾ ಕುಳಿತ್ತಿದ್ದರು. ಜೆ.ಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್​ನಲ್ಲಿ ಮೊದಲ ಶೋ (Morning Show Cancel)  ಆರಂಭವಾಗಬೇಕಿತ್ತು. ಆದರೆ ಆರಂಭದಲ್ಲೇ ಕಿಚ್ಚನ ಸಿನಿಮಾಗೆ ವಿಘ್ನ ಎದುರಾಗಿದೆ. 

ಹೌದು, ಆಯುಧಪೂಜೆಯಂದು ಬೆಳಗಿನಂದಲೇ ಸಿನಿಮಾ ಪ್ರದರ್ಶನ ಇದೆ ಎಂದು ಟಿಕೆಟ್​ಗಳನ್ನು ಮಾರಾಟ ಮಾಡಲಾಗಿತ್ತು. 6 ಗಂಟೆಗೆ ಇದ್ದ ಕೋಟಿಗೊಬ್ಬ 3 ಸಿನಿಮಾದ ಪ್ರದರ್ಶನವನ್ನು 7:30ಕ್ಕೆ ಮುಂದೂಡಲಾಗಿತ್ತು. 7:30 ಆದರೂ ಸಿನಿಮಾ ಪ್ರದರ್ಶನ ಆರಂಭವಾಗಲಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಬಳಿ ಸೇರಿದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

Kotigobba Fan Show stopped, Kotigobba Morning show is not there, Kotigobba 3 Release, Sudeep in Double shade in Kotigobba 3, Kotigobba-3 release, Kotigobba-3 release in prasanna theatre, Kotigobba-3 show is unseen, Fans rushing into the theater, ಕೋಟಿಗೊಬ್ಬ-3 ಬಿಡುಗಡೆ, ಪ್ರಸನ್ನ ಚಿತ್ರಮಂದಿರದಲ್ಲಿ ಕೋಟಿಗೊಬ್ಬ-3 ಬಿಡುಗಡೆ, ತೆರೆಕಾಣದ ಕೋಟಿಗೊಬ್ಬ-3, ಚಿತ್ರಮಂದಿರದೊಳಗೆ ನುಗ್ಗಿದ ಅಭಿಮಾನಿಗಳು, Salga will release in 300 screens, Kotigobba Cutout, Kichcha Sudeep in Kotigobba, Salaga, Duniya Vijay's Salaga, Salaga, Duniya Vijay's Salaga, Duniya Vijay's Salaga Pre-Release Event, Duniya Vijay Visit to annamma devi temple, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ದುನಿಯಾ ವಿಜಯ್, Duniya Vijay's Salaga Pre-Release Event, siddaramaiah to attend Salaga Pre-Release Event, dk shivakumar to attend Salaga Pre-Release Event, puneeth rajkumar to attend Salaga Pre-Release Event, upendra to attend Salaga Pre-Release Event, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಸಲಗ ಕಾರ್ಯಕ್ರಮಕ್ಕೆ ಅತಿಥಿಗಳ ಪಟ್ಟಿ, Duniya Vijay starrer Salaga Movie, Salaga Movie trailer release, Salaga movie release date, Salaga Pre Release event, Puneeth Rajkumar will attend trailer launch event, Salaga trailer launch event, Salaga Team Invites Puneeth Rajkumar For Trailer Launch, Puneeth Rajkumar will launch salaga trailer, Former CM Siddaramaiah, ಸಲಗ ಸಿನಿಮಾದ
ಕೋಟಿಗೊಬ್ಬ3 ಬೆಳಗಿನ ಶೋ ಟಿಕೆಟ್​


ಬೆಳಗಿನ ಪ್ರದರ್ಶನಕ್ಕೆ ಲೈಸನ್ಸ್ ಸಿಗದ ಹಿನ್ನಲೆಯಲ್ಲಿ ಶೋ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಸಿನಿಮಾ ರಿಲೀಸ್ ಆಗಿದ್ದು, ಬೆಂಗಳೂರಿನ ಕೆಲ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಆಯೋಜಿಸಲಾಗಿತ್ತಂತೆ.






ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಸಿದ್ದೇಲಿಂಗೇಶ್ವರ ಚಿತ್ರಮಂದಿರದಲ್ಲಿ ಸ್ಪೆಷಲ್ ಶೋ ನಡೆಯಬೇಕಿತ್ತು. ಆದರೆ, ಈಗ ನಗರದಾದ್ಯಂತ ಆಯೋಜಿಸಲಾಗಿರುವ ಫ್ಯಾನ್ಸ್​ ಶೋ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತುಮಕೂರಿನಲ್ಲಿ ಫ್ಯಾನ್ ಶೋ ರದ್ದು ಮಾಡಿದ್ದಾರೆ. ಗಾಯತ್ರಿ ಥಿಯೇಟರ್​​ನಲ್ಲಿ ಬೆಳಗ್ಗೆ 7.30ಕ್ಕೆ ಕೋಟಿಗೊಬ್ಬ 3 ಫ್ಯಾನ್ಸ್ ಶೋ ಇತ್ತು. ಆದರೆ ಈಗ ಶೋ ಕ್ಯಾನ್ಸಲ್ ಆಗಿದೆ.

ಇದನ್ನೂ ಓದಿ: Kotigobba 3 Release Date: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್​

ಫ್ಯಾನ್ಸ್ ಶೋ ಅಂತ ನಾವು ಯಾವ ಶೋಗಳಿಗೂ ಅನುಮತಿ ನೀಡಿಲ್ಲ. ಅದರ ಬಗ್ಗೆ ಯಾವುದೇ ಪ್ರಕಟಣೆ ಮಾಡಿಲ್ಲ ಅಂತ ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ನ್ಯೂಸ್​ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ. ಇನ್ನು ಅಭಿಮಾನಿಗಳು ಮಾತ್ರ ಆನ್​ಲೈನ್​ನಲ್ಲಿ ಮುಂಗಡವಾಗಿಯೇ ಬೆಳಗಿನ ಅಂದರೆ ಫ್ಯಾನ್ಸ್​ ಶೋ ಟಿಕೆಟ್​ಗಳನ್ನು ಖರೀದಿಸಿದ್ದಾರೆ. ಚಿತ್ರತಂಡ ಅನುಮತಿ ನೀಡದೆಯೇ ಟಿಕೆಟ್​ ಮಾರಾಟ ಹೇಗೆ ಮಾರಾಟ ಆಯ್ತು ಅನ್ನೋ ಗೊಂದಲ ಆರಂಭವಾಗಿದೆ.

ಇನ್ನು, ಸಿಟ್ಟಿಗೆದ್ದ ಪ್ರೇಕ್ಷಕರು ಸಿನಿಮಾ ಮಂದಿರದ ಒಳಗೆ ನುಗ್ಗಿ ಶೋ ಆರಂಭಿಸುವಂತೆ ಪಟ್ಟು ಹಿಡಿದಿದ್ದರು. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿ, ಸ್ಥಳಕ್ಕೆ ಕರೆಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಂತೆ. ಸದ್ಯ ಬೆಳಗಿನ ಶೋ ಟಿಕೆಟ್​ಗಳ ಹಣವನ್ನು ಹಿಂತಿರುಗಿಸಲಾಗುವುದು ಎಂದು ಚಿತ್ರಮಂದಿರಗಳ ಮುಂದೆ ಬೋರ್ಡ್​ ಹಾಕಲಾಗಿದೆ. ಸದ್ಯ ಚಿತ್ರತಂಡ 10:30ಕ್ಕೆ ಸಿನಿಮಾ ಶೋ ಆರಂಭಿಸಲು ನಿರ್ಧರಿಸಿದೆ.

ಇದನ್ನೂ ಓದಿ:HBD Kichcha Sudeep: ಸುದೀಪ್​ ಹುಟ್ಟುಹಬ್ಬಕ್ಕೆ ಕೋಟಿಗೊಬ್ಬ 3 ಚಿತ್ರತಂಡದ ಕಡೆಯಿಂದ ಭರ್ಜರಿ ಉಡುಗೊರೆ..!

ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್​ಗಳು ಕಣ್ಮನ ಸೆಳೆಯುವ ಲೊಕೇಷನ್​, ಸಖತ್ ಆ್ಯಕ್ಷನ್​ ಸೀಕ್ವೆನ್ಸ್​ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್​ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್​ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಅವರ ಸ್ಪೆಷರ್ ಅಪಿಯರೆನ್ಸ್​ ಸಹ ಈ ಸಿನಿಮಾದಲ್ಲಿದೆ.

ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್​ ಸಹ ಬ್ರೇಕ್​ ಹಾಕಿಲ್ಲ. ಇನ್ನು ಸಿನಿಮಾದ ವಿಲನ್​ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್​​ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್‌ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.
Published by:Anitha E
First published: