ವಿಘ್ನ-ವಿವಾದಗಳ ನಡುವೆಯೇ Kotigobba 3 ಸಿನಿಮಾದ ಮೊದಲ ವಾರಾಂತ್ಯದ ಗಳಿಕೆ ಜೋರಾಗಿದೆ..!

ಕೋಟಿಗೊಬ್ಬ 3 ಸಿನಿಮಾ ಆಯುಧಪೂಜೆಯಂದು ಅಂದರೆ, ಅ.14ರಂದು ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು. ಆದರೆ ನಿರ್ಮಾಪಕರು, ವಿತರಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಂದು ಸಿನಿಮಾ ರಿಲೀಸ್ ಆಗಲೇ ಇಲ್ಲ. ಇನ್ನು, ಒಂದು ದಿನ ತಡವಾಗಿ ಕೋಟಿಗೊಬ್ಬ 3 ರಿಲೀಸ್ ಆದರೂ ಬಾಕ್ಸಾಫಿಸ್​ ಕಲೆಕ್ಷನ್​ನಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. 

ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​

ಕೋಟಿಗೊಬ್ಬ 3 ಸಿನಿಮಾದ ಪೋಸ್ಟರ್​

  • Share this:
ಸೂರಪ್ಪ ಬಾಬು (Soorappa Babu) ಅವರು ನಿರ್ಮಿಸಿರುವ ಹಾಗೂ ಕಿಚ್ಚ ಸುದೀಪ್ (Kichcha Sudeep) ಅಭಿನಯಿಸಿರುವ ಸಿನಿಮಾ ಕೋಟಿಗೊಬಬ 3  (Kotigobba 3)ರಿಲೀಸ್​ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಹಬ್ಬದ ಸೀಸನ್​ ಆಗಿದ್ದ ಕಾರಣಕ್ಕೆ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಇನ್ನು ಕೋಟಿಗೊಬ್ಬ 3 ಸಿನಿಮಾಗೆ ಆರಂಭದಿದಂದೇ ಸಾಕಷ್ಟು ವಿಘ್ನ ಹಾಗೂ ವಿವಾದಗಳು ಎದುರಾಗಿದ್ದವು. ಎಲ್ಲ ಸಮಸ್ಯೆಗಳು  ಹಾಗೂ ಸವಾಲುಗಳನ್ನು ಎದುರಿಸಿ ಕೊನೆಗೂ ಪ್ರದರ್ಶನ ಕಾಣುತ್ತಿರುವ ಕೋಟಿಗೊಬ್ಬ3 ಸಿನಿಮಾದ ಬಾಕ್ಸಾಫಿಸ್​ ಕಲೆಕ್ಷನ್​ ಸಹ ಜೋರಾಗಿಯೇ ಇದೆ. ಈ ಸಿನಿಮಾ ತೆರೆಕಂಡ ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದ ಚಿತ್ರರಂಗದ ಪರಿಸ್ಥಿತಿ ಕೊಂಚ ಸುಧಾರಿಸಿದಂತೆ ಇದೆ. 

ಹೌದು, ಕೋಟಿಗೊಬ್ಬ 3 ಸಿನಿಮಾ ಆಯುಧಪೂಜೆಯಂದು ಅಂದರೆ, ಅ.14ರಂದು ಅದ್ದೂರಿಯಾಗಿ ತೆರೆಗೆ ಬರಬೇಕಿತ್ತು. ಆದರೆ ನಿರ್ಮಾಪಕರು, ವಿತರಕರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಅಂದು ಸಿನಿಮಾ ರಿಲೀಸ್ ಆಗಲೇ ಇಲ್ಲ. ಇನ್ನು, ಒಂದು ದಿನ ತಡವಾಗಿ ಕೋಟಿಗೊಬ್ಬ 3 ರಿಲೀಸ್ ಆದರೂ ಬಾಕ್ಸಾಫಿಸ್​ ಕಲೆಕ್ಷನ್​ನಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.

Kotigobba 3, Kotigobba 3 box office collections, Kotigobba 3 first weekend collections, Kotigobba 3 first day collections, Kotigobba 3 movie box office, sudeep, ಕೋಟಿಗೊಬ್ಬ 3, ಕೋಟಿಗೊಬ್ಬ 3 ಬಾಕ್ಸ್ ಆಫೀಸ್ ಕಲೆಕ್ಷನ್, ಕೋಟಿಗೊಬ್ಬ 3 ಮೊದಲ ವಾರದ ಕಲೆಕ್ಷನ್, 'ಕೋಟಿಗೊಬ್ಬ 3' ಸಿನಿಮಾದ ಒಟ್ಟು ಕಲೆಕ್ಷನ್, Kotigobba 3 Release, Sudeep in Double shade in Kotigobba 3, Salga will release in 300 screens, Kotigobba Cutout, Kichcha Sudeep in Kotigobba, Salaga, Duniya Vijay's Salaga, Salaga, Duniya Vijay's Salaga, Duniya Vijay's Salaga Pre-Release Event, Duniya Vijay Visit to annamma devi temple, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಅಣ್ಣಮ್ಮ ದೇವಿ ಆಶೀರ್ವಾದ ಪಡೆದ ದುನಿಯಾ ವಿಜಯ್, Duniya Vijay's Salaga Pre-Release Event, siddaramaiah to attend Salaga Pre-Release Event, dk shivakumar to attend Salaga Pre-Release Event, puneeth rajkumar to attend Salaga Pre-Release Event, upendra to attend Salaga Pre-Release Event, ಸಲಗ, ಸಲಗ ಬಿಡುಗಡೆ, ಸಲಗ ಪ್ರಿ-ರಿಲೀಸ್ ಕಾರ್ಯಕ್ರಮ, ಸಲಗ ಕಾರ್ಯಕ್ರಮಕ್ಕೆ ಅತಿಥಿಗಳ ಪಟ್ಟಿ, Duniya Vijay starrer Salaga Movie, Salaga Movie trailer release, Salaga movie release date, Salaga Pre Release event, Puneeth Rajkumar will attend trailer launch event, Salaga trailer launch event, Salaga Team Invites Puneeth Rajkumar For Trailer Launch, Puneeth Rajkumar will launch salaga trailer, Former CM Siddaramaiah, ಸಲಗ ಸಿನಿಮಾದ, Kichcha Sudeep Starrer Kotigobba 3 first weekend box office collection ae
ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪ್​


ಅ.14ರಂದು ರಿಲೀಸ್ ಆಗದ ಕಾರಣಕ್ಕೆ ಆ ದಿನದ ಕಲೆಕ್ಷನ್ ಕಳೆದುಕೊಂಡ ಕೋಟಿಗೊಬ್ಬ 3 ಸಿನಿಮಾ ಅ.15ರಂದು 12.50 ಕೋಟಿ ಗಳಿಸಿದೆಯಂತೆ. ಮಳೆಯ ನಡುವೆಯೇ ವೀಕ್ಷಕರು ಸಿನಿಮಾ ನೋಡಿದ್ದು, ಅಂದಿನ ಮಟ್ಟಿಗೆ ದಾಖಲೆ ಮೊತ್ತದ ಕಲೆಕ್ಷನ್ ಮಾಡಿದೆ ಕೋಟಿಗೊಬ್ಬ 3 ಸಿನಿಮಾ ಎನ್ನಬಹುದು. ಇನ್ನು ಹಬ್ಬದ ಸೀಸನ್​ ಆಗಿರುವ ಕಾರಣದಿಂದಾಗಿ ಸಾಲು ಸಾಲು ರಜೆಗಳು ಇದ್ದ ಕಾರಣಕ್ಕೆ ಚಿತ್ರಕ್ಕೆ ಅದೂ ಸಹ ಪ್ಲಸ್​ ಪಾಯಿಂಟ್ ಆಗಿದೆ.

ವಾರಾಂತ್ಯದ ಕಲೆಕ್ಷನ್​ ಜೋರು...

ಶನಿವಾರ ಹಾಗೂ ಭಾನುವಾರ ಸಹ ಸಿನಿಮಾ ಒಳ್ಳೆಯ ಗಳಿಕೆ ಮಾಡಿಕದೆ. ಹೌದು ಮೊದಲ ವಾರಾಂತ್ಯದಲ್ಲಿ ಒಟ್ಟು ಕೋಟಿಗೊಬ್ಬ 3 25 ಕೋಟಿ ಹಣವನ್ನು ದೋಚಿಕೊಂಡಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ಸಿನಿಮಾ ಮೊದಲ ವಾರಾಂತ್ಯದವರೆಗೆ ಅಂದಾಜು 40 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಇನ್ನು ಸಿನಿಮಾ ಗಳಿಸಿರುವ ಮೊತ್ತದ ಪೋಸ್ಟರ್​ಗಳನ್ನು ಕಿಚ್ಚನ ಅಭಿಮಾನಿಗಳು ಪೋಸ್ಟರ್​ಗಳ ಮೂಲಕ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಏನಿದು ಕೋಟಿಗೊಬ್ಬ 3 ಸಿನಿಮಾ ವಿವಾದ...

ಆಯುಧಪೂಜೆಯ ದಿನ ಕೋಟಿಗೊಬ್ಬ 3 ರಿಲೀಸ್ ಆಗಬೇಕಿತ್ತು. ಆದರೆ ಅಗ್ರಿಮೆಂಟ್ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದ ಕೆಲ ವಿತರಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣ ಕೊಡದ ಕಾರಣ, ಫೈನಾನ್ಶಿಯರ್​ರಿಂದ ಎನ್‍ಓಸಿ ಪಡೆಯದೇ ಒಂದು ದಿನ ತಡವಾಗಿ ಸಿನಿಮಾ ರಿಲೀಸ್ ಮಾಡಬೇಕಾಯ್ತು ಎಂದು ನಿರ್ಮಾಪಕ ಸೂರಪ್ಪ ಬಾಬು ಕಿಚ್ಚ ಸುದೀಪ್ ಅಭಿಮಾನಿಗಳನ್ನು ಕೈ ಮುಗಿದು ಕೇಳಿಕೊಂಡಿದ್ದರು. ಆಗ ಅಖಾಡಕ್ಕಿಳಿದ ನಟ ಸುದೀಪ್ ಈ ಹಿಂದೆ ಅಗ್ರಿಮೆಂಟ್ ಮಾಡಿಕೊಂಡು ಕೈಕೊಟ್ಟ ವಿತರಕರನ್ನು ಕೈಬಿಟ್ಟು ಹೊಸ ವಿತರಕರ ಮೂಲಕ ವಿಜಯದಶಮಿ ಹಬ್ಬ ದಿನ ಸಿನಿಮಾ ರಿಲೀಸ್ ಮಾಡಿಸಿದರು.

ಇದನ್ನೂ ಓದಿ: ಹೊಸ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್: ಬದಲಾದ್ರು Kotigobba 3 ಸಿನಿಮಾದ ವಿತರಕರು

ಅದಾದ ನಂತರ ಸೂರಪ್ಪ ಬಾಬು ಕೊನೆ ಕ್ಷಣದಲ್ಲಿ ಇದೇ ವಿತರಕರು ಕೈ ಕೊಟ್ಟಿದ್ದು ಅಂತ ಓಪನ್ ಲೆಟರ್ ಮೂಲಕ ಮೆಹರ್ ಫಿಲ್ಮ್ಸ್‍ನ ಗೌತಮ್ ಚಂದ್, ಖಾಜಾಪೀರ್, ಕುಮಾರ್ ಎಂಬ ವಿತರಕರ ಹೆಸರನ್ನು ಬರೆದು, ಕಾನೂನು ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಅದರ ಬೆನ್ನಲ್ಲೇ ವಿತರಕ ಖಾಜಾಪೀರ್, 50 ಲಕ್ಷ ರೂಪಾಯಿ ಹಣ ಪಡೆದಿರುವ ಸೂರಪ್ಪ ಬಾಬು ಸಿನಿಮಾ ರಿಲೀಸ್ ಲೈಸನ್ಸ್ ಕೊಡದೇ, ಬೇರೆ ವಿತರಕರ ಮೂಲಕ ಸಿನಿಮಾ ಬಿಡುಗಡೆ ಮಾಡಿಸಿದ್ದು, ಈಗ ಕೊಟ್ಟಿರುವ ಹಣ ವಾಪಸ್ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Kotigobba 3 ಸಿನಿಮಾ ಪ್ರದರ್ಶನ ಆರಂಭ: ಕಿಚ್ಚನ ಕಟೌಟ್​​ಗೆ ಹಾಲಿನ ಅಭಿಷೇಕ

ಒಟ್ಟಾರೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಕೋಟಿಗೊಬ್ಬ 3 ರಿಲೀಸ್ ಸಮಸ್ಯೆ, ಸದ್ಯ ಸಿನಿಮಾ ತೆರೆಗೆ ಬಂದ ಮೇಲೂ ಮುಂದುವರಿದಿದೆ. ಕೋಟಿಗೊಬ್ಬ 3 ಚಿತ್ರದಲ್ಲಿ ಇರುವಂತೆಯೇ ಹೊಸ ಹೊಸ ಟ್ವಿಸ್ಟ್, ಟರ್ನ್ ಪಡೆಯುತ್ತಿದೆ. ಅದೇನೇ ಇರಲಿ ಆದಷ್ಟು ಬೇಗ ಈ ವಿವಾದ ಬಗೆಹರಿಯಲಿ ಹಾಗೂ ಮುಂದಿನ ದಿನಗಳಲ್ಲಿ ಬೇರೆ ಯಾರ ಚಿತ್ರಕ್ಕೂ ಕೋಟಿಗೊಬ್ಬ 3ಗೆ ಆದಂತೆ ಸಮಸ್ಯೆಗಳು ಎದುರಾಗದಿರಲಿ ಎಂಬುದೇ ಕಿಚ್ಚ ಸುದೀಪ್ ಅಭಿಮಾನಿಗಳ ಹಾಗೂ ಸಿನಿಪ್ರೇಕ್ಷಕರ ಆಶಯ.
Published by:Anitha E
First published: