Sudeep In Dabangg 3 Climax Video: ಲೀಕ್​ ಆಯ್ತು ದಬಾಂಗ್​ 3 ಚಿತ್ರದಲ್ಲಿ ಸುದೀಪ್​ ಅಭಿನಯದ ಕ್ಲೈಮ್ಯಾಕ್ಸ್​ ದೃಶ್ಯ..!

Sudeep In Dabangg 3 Climax Video: ಸುದೀಪ್​ ಈ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರ ಶ್ರಮ ಅವರು ಈ ಹಿಂದೆ ಹಂಚಿಕೊಂಡ ಪೋಸ್ಟರ್​ನಲ್ಲಿ ಕಾಣುತ್ತದೆ. ಈಗ ಈ ಸಿನಿಮಾದ ಒಂದು ವಿಡಿಯೋ ಲೀಕ್​ ಆಗಿದ್ದು ಅದರಲ್ಲಿ ಸುದೀಪ್​  ಹಾಗೂ ಸಲ್ಮಾನ್​ ನಡುವೆ ನಡೆಯುವ ಕಾಳಗದ ದೃಶ್ಯಗಳಿವೆ.  

news18-kannada
Updated:December 11, 2019, 2:48 PM IST
Sudeep In Dabangg 3 Climax Video: ಲೀಕ್​ ಆಯ್ತು ದಬಾಂಗ್​ 3 ಚಿತ್ರದಲ್ಲಿ ಸುದೀಪ್​ ಅಭಿನಯದ ಕ್ಲೈಮ್ಯಾಕ್ಸ್​ ದೃಶ್ಯ..!
ದಬಾಂಗ್​ 3 ಚಿತ್ರದಲ್ಲಿ ಕಿಚ್ಚ ಸುದೀಪ್​
  • Share this:
ಸಲ್ಮಾನ್​ ಖಾನ್​ ಅಭಿನಯದ 'ದಬಾಂಗ್​ 3' ಸಿನಿಮಾದಲ್ಲಿ ಕಿಚ್ಚ ಸುದೀಪ್​ ಖಳನಾಯಕನಾಗಿ ಅಭಿನಯಿಸಿರುವ ವಿಷಯ ಗೊತ್ತೇ ಇದೆ. ಈ ಚಿತ್ರದಲ್ಲಿ ಸುದೀಪ್​ ಲುಕ್​ ಹೇಗಿರಲಿದೆ ಅಂತ ಈ ಹಿಂದೆ ಬಿಡುಗಡೆಯಾದ ಪೋಸ್ಟರ್​ನಲ್ಲಿ ನೋಡಿದ್ದೀರಿ.

ಸುದೀಪ್​ ಈ ಸಿನಿಮಾಗಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರ ಶ್ರಮ ಅವರು ಈ ಹಿಂದೆ ಹಂಚಿಕೊಂಡ ಪೋಸ್ಟರ್​ನಲ್ಲಿ ಕಾಣುತ್ತದೆ. ಈಗ ಈ ಸಿನಿಮಾದ ಒಂದು ವಿಡಿಯೋ ಲೀಕ್​ ಆಗಿದ್ದು ಅದರಲ್ಲಿ ಸುದೀಪ್​  ಹಾಗೂ ಸಲ್ಮಾನ್​ ನಡುವೆ ನಡೆಯುವ ಕಾಳಗದ ದೃಶ್ಯಗಳಿವೆ.



ಸಲ್ಮಾನ್​ ಖಾನ್​ ಸಿನಿಮಾದ ಕ್ಲೈಮ್ಯಾಕ್ಸ್​ ದೃಶ್ಯಗಳಿರುವ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಚುಲ್​ಬುಲ್​ ಪಾಂಡೆ ವರ್ಸಸ್​ ಬಲಿ ಸಿಂಗ್​ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: ಕನ್ನಡತಿ ಅನುಷ್ಕಾ ಶೆಟ್ಟಿಗೆ ಮುತ್ತಿಟ್ಟ ಆ ಇಬ್ಬರು: ಪೋಟೋ ವೈರಲ್​..!

ಈ ವಿಡಿಯೋದಲ್ಲಿ ಸುದೀಪ್​ ಸಿಕ್ಕಾಪಟ್ಟೆ ಸ್ಟೈಲಿಶ್​ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಅಂತ್ಯಕ್ಕೆ ಇದೆ ಎನ್ನಲಾಗುತ್ತಿದ್ದ ಬೇರ್​ ಬಾಡಿ ಫೈಟಿಂಗ್​ ಸೀನ್ನ ತುಣುಕು ಈ ವಿಡಿಯೋದಲ್ಲಿದೆ.

 


'ದಬಾಂಗ್​' ಸರಣಿಯ ಮೂರನೇ ಚಿತ್ರವನ್ನು ಪ್ರಭುದೇವಾ ನಿರ್ದೇಶಿಸುತ್ತಿದ್ದು, ಇದು ಡಿ.20ಕ್ಕೆ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಅರ್ಬಾಜ್​ ಖಾನ್​ ಹಾಗೂ ಸೋನಾಕ್ಷಿ ಮತ್ತೆ ಕಾಣಿಸಿಕೊಂಡಿದ್ದಾರೆ.

Disha Patani: ಬೋಲ್ಡ್​​ ಫೋಟೋಶೂಟ್​ನಿಂದ ಪಡ್ಡೆಗಳ ನಿದ್ದೆ ಕದ್ದ ದಿಶಾ..!
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ