HOME » NEWS » Entertainment » KICHCHA SUDEEP SPENT SOME TIME IN LATIKAS HOUSE AT KEREAL AND REMEMBERED ABOUT MY AUTOGRAPH SHOOTING AE

Kichcha Sudeep: 15 ವರ್ಷಗಳ ನೆನಪು ಬಿಚ್ಚಿಟ್ಟ ಕಿಚ್ಚ ಸುದೀಪ್​: ಲತಿಕಾ ಮನೆಯಲ್ಲಿ ಕಾಲ ಕಳೆದ ಶಂಕರ್​..!

My Autograph: ಮೈ ಆಟೋಗ್ರಾಫ್​ ಸಿನಿಮಾವನ್ನು ಕೇರಳದಲ್ಲೂ ಚಿತ್ರೀಕರಿಸಲಾಗಿದ್ದು, ಅದೇ ಮನೆಗೆ ಸುದೀಪ್​ ಮತ್ತೆ ಭೇಟಿ ನೀಡಿದ್ದಾರೆ. ಅದೂ ಸಹ 15 ವರ್ಷಗಳ ನಂತರ. ಈ ಮನೆಯಲ್ಲಿ ಮಾಡಿದ್ದ ಚಿತ್ರೀಕರಣದ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ವಿಡಿಯೋ ಮಾಡಿದ್ದಾರೆ.

Anitha E | news18-kannada
Updated:December 30, 2020, 8:57 AM IST
Kichcha Sudeep: 15 ವರ್ಷಗಳ ನೆನಪು ಬಿಚ್ಚಿಟ್ಟ ಕಿಚ್ಚ ಸುದೀಪ್​: ಲತಿಕಾ ಮನೆಯಲ್ಲಿ ಕಾಲ ಕಳೆದ ಶಂಕರ್​..!
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಇತ್ತೀಚೆಗಷ್ಟೆ ಫ್ಯಾಂಟಮ್​ ಸಿನಿಮಾದ ಕ್ಲೈಮ್ಯಾಕ್ಸ್​ ಚಿತ್ರೀಕರಣ ಮುಗಿಸಿ ಕೊಂಚ ರಿಲ್ಯಾಕ್ಸಿಂಗ್​ ಮೂಡ್​ನಲ್ಲಿದ್ದಾರೆ. ಅವರ ಅಭಿನಯದ ಎರಡು ಸಿನಿಮಗಾಳು ತೆರೆಗಪ್ಪಳಿಸಲು ಸಿದ್ಧವಾಗಿವೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಕಿಚ್ಚ ಸುದೀಪ್​ ಯಾವ ಚಿತ್ರವನ್ನು ನ್ಯೂ ಇಯರ್​ ಟ್ರೀಟ್​ ಆಗಿ ಕೊಡಲಿದ್ದಾರೆ ಅನ್ನೋದು ಇನ್ನೂ ರಹಸ್ಯವಾಗಿದೆ. ಅಭಿಮಾನಿಗಳು ಮಾತ್ರ ಸುದೀಪ್​ ಅಭಿನಯದ ಈ ಎರಡು ಚಿತ್ರಗಳಲ್ಲಿ ಯಾವ ಸಿನಿಮಾ ಮೊದಲು ರಿಲೀಸ್ ಆದರೂ ಫಸ್ಟ್​ ಡೇ ಫಸ್ಟ್​ ಶೋ ನೋಡಲು ಕಾತರರಾಗಿದ್ದಾರೆ. ಆದರೆ, ಸುದೀಪ್​ ಹಾಗೂ ಚಿತ್ರತಂಡದವರು ಸಿನಿಮಾ ರಿಲೀಸ್​ ಮಾಡಲು ಮನಸ್ಸು ಮಾಡಬೇಕಿದೆಯಷ್ಟೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುದೀಪ್​, ನಿನ್ನೆಯಷ್ಟೆ ಅಭಿಮಾನಿಗಳಿಗೆ ಒಂದು ವಿಡಿಯೋ ಟ್ರೀಟ್​ ಕೊಟ್ಟಿದ್ದಾರೆ. ಅದು ಸಹ ತಮ್ಮ 15 ವರ್ಷಗಳ ಹಿಂದಿನ ನೆನಪನ್ನು ಹಸಿರಾಗಿಸುವ ವಿಡಿಯೋ ಇದಾಗಿದೆ.

ಹೌದು, ಕಿಚ್ಚ ಸುದೀಪ್​ ಕೇರಳದಲ್ಲಿದ್ದಾರೆ. ಅಲ್ಲಿ ರಿಲ್ಯಾಕ್ಸ್​ ಮಾಡುತ್ತಿರುವ ನಟ, ಲತಿಕಾ ಮನೆಗೆ ಭೇಟಿ ನೀಡಿದ್ದಾರೆ. ಅಷ್ಟಕ್ಕೂ ಯಾರು ಈ ಲತಿಕಾ ಅಂತೀರಾ..? ಮೈ ಆಫಗ್ರಾಫ್​ ಸಿನಿಮಾದಲ್ಲಿ ಬರುವ ಒಂದು ಪಾತ್ರ.





ಮೈ ಆಟೋಗ್ರಾಫ್​ ಸಿನಿಮಾವನ್ನು ಕೇರಳದಲ್ಲೂ ಚಿತ್ರೀಕರಿಸಲಾಗಿದ್ದು, ಅದೇ ಮನೆಗೆ ಸುದೀಪ್​ ಮತ್ತೆ ಭೇಟಿ ನೀಡಿದ್ದಾರೆ. ಅದೂ ಸಹ 15 ವರ್ಷಗಳ ನಂತರ. ಈ ಮನೆಯಲ್ಲಿ ಮಾಡಿದ್ದ ಚಿತ್ರೀಕರಣದ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ವಿಡಿಯೋ ಮಾಡಿದ್ದಾರೆ.




ಲತಿಕಾ ಮನೆಯಂಗಳದಲ್ಲಿ ಓಡಾಡುತ್ತಾ ಅಲ್ಲಿ, ಚಿತ್ರೀಕರಿಸಲಾಗಿರುವ ಒಂದೊಂದು ದೃಶ್ಯಗಳ ಬಗ್ಗೆಯೂ ಸುದೀಪ್​ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳೂ ಸಹ ಖುಷಿಯಾಗಿದ್ದಾರೆ.





ತಮಿಳಿನಲ್ಲಿ ತೆರೆಕಂಡಿದ್ದ ಸಿನಿಮಾ 2006ರಲ್ಲಿ ಕನ್ನಡಕ್ಕೆ ರಿಮೇಕ್​ ಆಗಿತ್ತು. ಮೈ ಆಟೋಗ್ರಾಫ್​ ಸುದೀಪ್​ ನಿರ್ದೇಶನದ ಮೊದಲ ಚಿತ್ರ.  ಈ ಚಿತ್ರದ ನಿರ್ಮಾಣ ಸಹ ಸುದೀಪ್​ ಅವರದ್ದೇ ಆಗಿತ್ತು. ಇನ್ನು ಇದರಲ್ಲಿ ಮೀನಾ, ದೀಪು, ಶ್ರೀದೇವಿಕಾ, ರಶ್ಮಿ ಕುಲಕರ್ಣಿ ಹಾಗೂ ಮುಂತಾದವರು ನಟಿಸಿದ್ದಾರೆ.
Published by: Anitha E
First published: December 30, 2020, 8:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories