• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bigg Boss OTT: ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ 

Bigg Boss OTT: ಬಿಗ್​ ಬಾಸ್​ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಸೋನು ಶ್ರೀನಿವಾಸ್ ಗೌಡ 

ಬಿಗ್​ಬಾಸ್​

ಬಿಗ್​ಬಾಸ್​

ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ನ 2ನೇ ಸ್ಪರ್ಧಿಯಾಗಿ ಸೋನು  ಶ್ರೀನಿವಾಸ್ ಗೌಡ ಅವರು ಎಂಟ್ರಿ ನೀಡಿದ್ದಾರೆ. ಇದಲ್ಲದೇ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ ಅವರು ಎಂಟ್ರಿ ನೀಡಿದ್ದಾರೆ.

  • Share this:

ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ (Voot App)  ಇಂದಿನಿಂದ  ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡುತ್ತಿದ್ದಾರೆ. ಇಂದು ಸಂಜೆ 7 ಗಂಟೆಯಿಂದ ಅಧಿಕೃತವಾಗಿ ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ ಆರಂಭವಾಗಲಿದೆ. ಈಗಾಗಲೇ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್​ ಗುರೂಜಿ (Aryavardhan Guruji) ಎಂಟ್ರಿ ಕೊಟ್ಟಿದ್ದಾರೆ. ಇದೀಗ 2ನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಂಟ್ರಿ ನೀಡಿದ್ದಾರೆ. 


ಸೋನು ಶ್ರೀನಿವಾಸ್ ಗೌಡ ಗ್ರ್ಯಾಂಡ್ ಎಂಟ್ರಿ:


ಹೌದು, ಬಿಗ್​ ಬಾಸ್​ ಓಟಿಟಿ ಮೊದಲ ಸೀಸನ್​ನ 2ನೇ ಸ್ಪರ್ಧಿಯಾಗಿ ಸೋನು  ಶ್ರೀನಿವಾಸ್ ಗೌಡ ಅವರು ಎಂಟ್ರಿ ನೀಡಿದ್ದಾರೆ. ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿರುವ ಸೋನು ಶ್ರೀನಿವಾಸ ಗೌಡ ಅವರು ಎಲ್ಲರ ನಿರೀಕ್ಷೆಯಂತೆ ಈ ಬಾರಿ ಬಿಗ್​ ಬಾಸ್​ ಮನೆಗೆ ಪ್ರವೇಶ ಮಾಡಿದ್ದಾರೆ.


ಸೋನು ಶ್ರೀನಿವಾಸ್​ ಗೌಡ


ಸೋಷಿಯಲ್​ ಮೀಡಿಯಾ ಸ್ಟಾರ್ ಸೋನು!


ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರ,ಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಇವರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂದು ಎಲ್ಲರಿಗೂ ಒಂದು ಕುತೂಹಲ ಇರುತ್ತೆ. ತಿಂಗಳಿಗೆ ಒಂದರಿಂದ ಎರಡು ಲಕ್ಷ ವಿಡಿಯೋಗಳಿಂದ ಸೋನು ಶ್ರೀನಿವಾಸ ಗೌಡ ಗಳಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲ ಜಾಹೀರಾತುಗಳು, ಪ್ರಮೋಷನ್​ ವಿಡಿಯೋ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ.


ಇದನ್ನೂ ಓದಿ: Bigg Boss OTT: ದೊಡ್ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಆರ್ಯವರ್ಧನ್​ ಗುರೂಜಿ


ಬಿಗ್​ ಬಾಸ್​ ಮನೆಗೆ ಆರ್ಯವರ್ಧನ್​ ಗುರೂಜಿ ಮೊದಲ ಸ್ಪರ್ಧಿ:


ಇನ್ನು, ಇಂದಿನಿಂದ ಕನ್ನಡ ಬಿಗ್​ ಬಾಸ್​ ಓಟಿಟಿ ಶೊ ಆರಂಭವಾಗಲಿದೆ. ಇಂದು ಸಂಜೆ 7 ಗಂಟೆಗೆ ಗ್ರ್ಯಾಂಡ್​ ಓಪನಿಂಗ್ ಆಗಲಿದೆ. ಇದಕ್ಕೂ ಮೊದಲೇ ಈ ಬಾರಿ ಸ್ಪರ್ಧಿಯ ಮೊದಲಿಗರು ಯಾರೆಂದು ರಿವೀಲ್ ಆಗಿದೆ. ಹೌದು, ಈ ಬಾರಿ ದೊಡ್ಮನೆ ಒಳಗೆ ಮೊದಲು ಹೆಜ್ಜೆ ಇಟ್ಟವರು ಎಂದರೆ ಆರ್ಯವರ್ಧನ್​ ಗುರೂಜಿ ಅವರು.


ಇದನ್ನೂ ಓದಿ: Bigg Boss OTT: ನಾನು ಬಿಗ್​ಬಾಸ್​ ಮನೆಗೆ ಹೋಗಲ್ಲ ಎಂದ ನಿರ್ದೇಶಕ, ನೀವಿದ್ರೆ ಒಂದ್ ಗತ್ತು ಇರುತ್ತೆ ಅಂತಿದ್ದಾರೆ ನೆಟ್ಟಿಗರು


ಆರ್ಯವರ್ಧನ್​ ಗುರೂಜಿ ಎಂದಾಕ್ಷಣ ಎಲ್ಲರಿಗೂ ಮೊದಲಿಗೆ ನೆನಪಿಗೆ ಬರುವುದೇ ಅವರ ಕ್ರಿಕೆಟ್​ ಪ್ರಿಡಿಕ್ಷನ್​. ಹೌದು, ಖಾಸಗಿ ವಾಹಿನಿಯಲ್ಲಿ ಐಪಿಎಲ್ ಸಮಯದಲ್ಲಿ ಯಾವ ತಂಡ ಸೋಲುತ್ತದೆ ಮತ್ತು ಯಾವ ತಂಡ ಗೆಲ್ಲುತ್ತದೆ ಎಂದು ಭವಿಷ್ಯ ಹೇಳುತ್ತಾರೆ. ಆದರೆ ಇವರ ಭವಿಷ್ಯ ಹೇಲುವಿಕೆಯ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿರುತ್ತಾರೆ. ಹೀಗಾಗಿ ಇವರು ಬಿಗ್​ ಬಾಸ್​ ಮನೆಯೊಳಗೆ ಹೇಗಿರಲಿದ್ದಾರೆ ಎಂಬುದು ಸಖತ್ ಕುತೂಹಲ ಕೆರಳಿಸಿದೆ. ಇನ್ನು, ಈ ಬಾರಿ ಬಿಗ್​ ಬಾಸ್​ ಓಟಿಟಿ 42 ದಿನಗಳ ಕಾಲ ನಡೆಯಲಿದೆ. ಅಲ್ಲದೇ ಇದು 24/7 ಲೈವ್​ ಇರಲಿದೆ.

top videos
    First published: