ಕನ್ನಡ (Kannada) ಬಿಗ್ ಬಾಸ್ ಒಟಿಟಿ (Bigg Boss OTT) ಇಂದಿನಿಂದ ಪ್ರಾರಂಭವಾಗಲಿದೆ. ವೂಟ್ ಆ್ಯಪ್‌ನಲ್ಲಿ (Voot App) ಇಂದಿನಿಂದ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡುತ್ತಿದ್ದಾರೆ. ಇಂದು ಸಂಜೆ 7 ಗಂಟೆಯಿಂದ ಅಧಿಕೃತವಾಗಿ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಆರಂಭವಾಗಲಿದೆ. ಆದರೆ ಇದೀಗ ಹಳೆಯ ಬಿಗ್ ಬಾಸ್ ವಿಜೇತರನ್ನು ಸಂದರ್ಶನ ಮಾಡಲಾಗುತ್ತಿದ್ದು, ಇದರ ನಡುವೆ ಈಗ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಆಗಿದ್ದು, ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಮೊದಲಿಗೆ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ.
ದೊಡ್ಮನೆ ಒಳಗೆ ಮೊದಲು ಪ್ರವೇಶಿಸಿದ ಆರ್ಯವರ್ಧನ್ ಗುರೂಜಿ:
ಹೌದು, ಇಂದಿನಿಂದ ಕನ್ನಡ ಬಿಗ್ ಬಾಸ್ ಓಟಿಟಿ ಶೊ ಆರಂಭವಾಗಲಿದೆ. ಇಂದು ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಇದಕ್ಕೂ ಮೊದಲೇ ಈ ಬಾರಿ ಸ್ಪರ್ಧಿಯ ಮೊದಲಿಗರು ಯಾರೆಂದು ರಿವೀಲ್ ಆಗಿದೆ. ಹೌದು, ಈ ಬಾರಿ ದೊಡ್ಮನೆ ಒಳಗೆ ಮೊದಲು ಹೆಜ್ಜೆ ಇಟ್ಟವರು ಆರ್ಯವರ್ಧನ್ ಗುರೂಜಿ ಅವರು.
ಆರ್ಯವರ್ಧನ್ ಗುರೂಜಿ ಎಂದಾಕ್ಷಣ ಎಲ್ಲರಿಗೂ ಮೊದಲಿಗೆ ನೆನಪಿಗೆ ಬರುವುದೇ ಅವರ ಕ್ರಿಕೆಟ್ ಪ್ರಿಡಿಕ್ಷನ್. ಹೌದು, ಖಾಸಗಿ ವಾಹಿನಿಯಲ್ಲಿ ಐಪಿಎಲ್ ಸಮಯದಲ್ಲಿ ಯಾವ ತಂಡ ಸೋಲುತ್ತದೆ ಮತ್ತು ಯಾವ ತಂಡ ಗೆಲ್ಲುತ್ತದೆ ಎಂದು ಭವಿಷ್ಯ ಹೇಳುತ್ತಾರೆ. ಆದರೆ ಇವರ ಭವಿಷ್ಯ ಹೇಳುವಿಕೆಯ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿರುತ್ತಾರೆ. ಹೀಗಾಗಿ ಇವರು ಬಿಗ್ ಬಾಸ್ ಮನೆಯೊಳಗೆ ಹೇಗಿರಲಿದ್ದಾರೆ ಎಂಬುದು ಸಖತ್ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವಾಸುಕಿ ವೈಭವ್, ಈ ಬಾರಿ ಸ್ಪೆಷಲ್ ಅಂತೆ Bigg Boss OTT
ಹೇಗಿರಲಿದೆ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್:
ಇಂತಹದೊಂದು ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಇಂದು ಸಂಜೆ 7 ಗಂಟೆಯಿಂದ ಬಿಗ್ ಬಾಸ್ ಆರಂಭವಾಗಲಿದೆ. ನೀವು ವೂಟ್ ನಲ್ಲಿ ನೇರಪ್ರಸಾರ ನೋಡಬಹುದು. ವಿಶೇಷ ಎಂಬಂತೆ ಈ ಬಾರಿ ಬಿಗ್ ಬಾಸ್ ಓಟಿಟಿ 42 ದಿನಗಳ ಕಾಲ ನಡೆಯಲಿದೆ. ಅಲ್ಲದೇ ಇದು 24/7 ಲೈವ್ ಇರಲಿದ್ದು, ಇನ್ನಷ್ಟು ಮನೋರಂಜನೆಯನ್ನು ನೀಡಲಿದೆಯಂತೆ. ಜೊತೆಗೆ ಬಿಗ್ ಬಾಸ್ ನಲ್ಲಿ ಸಿಕ್ರೇಟ್ ರೂಂ ಸಹ ಇರುವುದಿಲ್ಲ ಮತ್ತು ಇಲ್ಲಿ ಕೊನೆಯಲ್ಲಿ ಉಳಿಯುವ ಟಾಪ್ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9ರಲ್ಲಿ ಮತ್ತೆ ಭಾಗವಹಿಸಲಿದ್ದಾರಂತೆ.
ನಿಮ್ಮ ನೆಚ್ಚಿನ ಕಿಚ್ಚ ಸುದೀಪ ಬಿಗ್ಬಾಸ್ OTT ಸೀಸನ್ 1 ಜೊತೆಗೆ ಬರುತ್ತಿದ್ದಾರೆ | ಗ್ರ್ಯಾಂಡ್ ಓಪನಿಂಗ್ ಮಿಸ್ ಮಾಡ್ಕೋಬೇಡಿ!
ಕರ್ಟನ್ ರೈಸರ್ ಈಗಲೇ ನೋಡಿ ವೂಟ್ನಲ್ಲಿ | ಬಿಗ್ಬಾಸ್ OTT Grand opening ಇಂದು ಸಂಜೆ 7#BiggBossOTT #BiggBossOTTKannada #BBOTTKOnVoot #VootSelect #BBOTTCurtainRaiser pic.twitter.com/5AboOznyyl
— Voot Select (@VootSelect) August 6, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ