HOME » NEWS » Entertainment » KICHCHA SUDEEP SHARED RAW FOOTAGE FROM HIS UPCOMING MOVIE PHANTOM AE

Kichcha Sudeep: ವಿಕ್ರಾಂತ್​ ರೋಣನ ಪ್ರಪಂಚವನ್ನು ಪರಿಚಯಿಸುವ ಮತ್ತೊಂದು ವಿಡಿಯೋ ಹಂಚಿಕೊಂಡ ಕಿಚ್ಚ ಸುದೀಪ್​: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ಫ್ಯಾಂಟಮ್​..!

The World Of Phantom: ಕೆ.ಜಿ.ಎಫ್​. ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರೇ ಈ ಚಿತ್ರಕ್ಕೂ ಸೆಟ್​ ಹಾಕಿದ್ದಾರೆ. ಸುದೀಪ್​ ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದಿಗೂ ಹೋಗಿ ಬಂದಿದ್ದರು. ಈಗ ಈ ಸಿನಿಮಾದ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. 

Anitha E | news18-kannada
Updated:July 24, 2020, 8:36 PM IST
Kichcha Sudeep: ವಿಕ್ರಾಂತ್​ ರೋಣನ ಪ್ರಪಂಚವನ್ನು ಪರಿಚಯಿಸುವ ಮತ್ತೊಂದು ವಿಡಿಯೋ ಹಂಚಿಕೊಂಡ ಕಿಚ್ಚ ಸುದೀಪ್​: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ಫ್ಯಾಂಟಮ್​..!
ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುದೀಪ್​ ಅಭಿನಯದ ಫ್ಯಾಂಟಮ್​ ಸಿನಿಮಾ ದಿನೇ ದಿನೇ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೆ ಸುದೀಪ್​ ಗುಮ್ಮ ಬಂದ ಗುಮ್ಮ ಗುಮ್ಮ ಅಂತ ಭಯವಿಡಿಸಿದ್ದರು. ಆದರೆ ಈಗ ಇದೇ ಸಿನಿಮಾದ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

ಕೊರೋನಾ ಲಾಕ್​ಡೌನ್​ನಿಂದಾಗಿ ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. ಆದರೆ ಈಗ ಹೈದರಾಬಾದಿನಲ್ಲಿ ಕನ್ನಡದ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಸುದೀಪ್​ ಅವರ ಫ್ಯಾಂಟಮ್​ ಚಿತ್ರಕ್ಕಾಗಿಯೂ ನಾಲ್ಕು ತಿಂಗಳ ಹಿಂದೆಯೇ ಅನ್ನಪೂರ್ಣ ಸ್ಟುಡಿಯೋದಲ್ಲಿ  ಸೆಟ್​ ಹಾಕಲಾಗಿತ್ತು.

Kiccha, Kiccha sudeep, Phantom, Phantom movie actress, Sudeep movie, Vikrant rona, Sudeep movies, Kannada full movies
ಫ್ಯಾಂಟಮ್​ ಚಿತ್ರದಲ್ಲಿ ವಿಕ್ರಮ್​ ರೋಣನಾದ ಕಿಚ್ಚ ಸುದೀಪ್​


ಕೆ.ಜಿ.ಎಫ್​. ಸಿನಿಮಾ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರೇ ಈ ಚಿತ್ರಕ್ಕೂ ಸೆಟ್​ ಹಾಕಿದ್ದಾರೆ. ಸುದೀಪ್​ ಈ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದಿಗೂ ಹೋಗಿ ಬಂದಿದ್ದರು. ಈಗ ಈ ಸಿನಿಮಾದ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದು ಈಗ ಟ್ವಿಟರ್​ನಲ್ಲೂ ಟ್ರೆಂಡಿಂಗ್​ನಲ್ಲಿದೆ.ಫ್ಯಾಂಟಮ್​ ದುನಿಯಾದಲ್ಲಿ ಒಂದು ಇಣುಕು ನೋಟ... ಜಸ್ಟ್​ ಅ ರಾ ಫುಟೇಜ್​... ಇಲ್ಲಿದೆ ನೀಡಿ ಸ್ನೇಹಿತರೆ... ಅಂತ ಹೇಳುತ್ತಾ ಈ ವಿಡಿಯೋ ಹಂಚಿಕೊಂಡಿದ್ದಾರೆ ಕಿಚ್ಚ, ಕೈಯಲ್ಲಿ ಟಾರ್ಚ್​ ಹಿಡಿದು, ಕತ್ತಲಿನಲ್ಲಿ ಯಾರನ್ನೋ ಹುಡುಕಾಡುತ್ತಿರುವಂತಿದೆ. ಕತ್ತಲಲ್ಲಿ ಕಳ್ಳನಂತೆ, ಬೇಟೆಯಾಡುವ ಬಿಲ್ಲನಂತೆ ಎನ್ನುವ ವಾಯ್ಸ್​ ಈ ವಿಡಿಯೋದ ಹಿನ್ನಲೆಯಲ್ಲಿ ಕೇಳಿಸುತ್ತದೆ.

ಇದನ್ನೂ ಓದಿ: ರಾಜಕುಮಾರನ ಪಾತ್ರದಲ್ಲಿ ಧನಂಜಯ: ಡಾಲಿ ಹಂಚಿಕೊಂಡ ಫೋಟೋ ಇಲ್ಲಿದೆ..!

ಈ ಹಿಂದೆ ಕಿಚ್ಚ ಹಂಚಿಕೊಂಡಿದ್ದ ಗುಮ್ಮ ಬಂದ ಗುಮ್ಮ ಗುಮ್ಮ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿತ್ತು. ಜೊತೆಗೆ ಫ್ಯಾನ್ಸ್​ ಇದನ್ನು ವೈರಲ್​ ಸಹ ಮಾಡಿದ್ದರು.ಕಿಚ್ಚ ಈಗ ಹಂಚಿಕೊಂಡಿರುವ ವಿಡಿಯೋಗೆ ಹಿನ್ನಲೆ ಧ್ವನಿ ನೀಡಿರುವುದು ಹರ್ಷಿಕಾ ದೇವನಾಥನ್​. ಕಿಚ್ಚ ಸುದೀಪ್​ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಸಖತ್​ ಖುಷಿಯಲ್ಲಿದ್ದಾರೆ.
ಸುದೀಪ್​ ಅವರು ಹಂಚಿಕೊಂಡಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಹರ್ಷಿಕಾ, ತನ್ನ ಕನಸು ನನಸಾಗಿದೆ ಎಂದಿದ್ದಾರೆ. ಸುದೀಪ್​ ಹೀಗೆ ಒಂದೊಂದೇ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರೆ, ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.

ಇದನ್ನೂ ಓದಿ: Sonu Sood-Warrior Aaji: ಹೊಟ್ಟೆಪಾಡಿಗಾಗಿ ರಸ್ತೆಗಿಳಿದ ವಾರಿಯರ್​ ಅಜ್ಜಿ: ನೆರವಿಗೆ ಮುಂದಾದ ಸೋನು ಸೂದ್-ರಿತೇಶ್​​..!
Published by: Anitha E
First published: July 24, 2020, 8:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading