HOME » NEWS » Entertainment » KICHCHA SUDEEP SHARED NEW PHOTO FROM PHANTOM MOVIE IN HIS TWITTER AND INSTAGRAM AE

Phantom: ಫ್ಯಾಂಟಮ್​ ಸಿನಿಮಾದಲ್ಲಿ ವಿಕ್ರಾಂತ್​ ರೋಣ ಸ್ಟೈಲ್​ ಹೀಗಿದೆ ನೋಡಿ..!

Kichcha Sudeep: ಈಗ ಫ್ಯಾಂಟಮ್​ ಸಿನಿಮಾದಲ್ಲಿ ವಿಕ್ರಮ್​ ರೋಣನ ಸ್ಟೈಲ್​ ಹೇಗಿದೆ ಎಂದು ಹೇಳುವ ಒಂದು ಫೋಟೋವನ್ನು ರಿಲೀಸ್​ ಮಾಡಿದ್ದಾರೆ. ಸ್ಟೈಲಿಶ್​ ಕ್ಯಾಪ್​, ಸ್ಲೀವ್​ಲೆಸ್​ ಶರ್ಟ್​, ಅದರ ಮೇಲೆ ಬೆಲ್ಟ್​ ಹಾಗೂ ಪಿಸ್ತೂಲ್​ ಇಡಲಾಗಿದೆ. ನಿಮ್ಮ ಸ್ಟೈಲ್​ ಅನ್ನು ನಿಮ್ಮ ಸ್ವಂತ ಮಾಡಿಕೊಳ್ಳಿ ಎಂದು ಫೋಟೋದ ಮೇಲೆ ಬರೆಯಲಾಗಿದೆ.

Anitha E | news18-kannada
Updated:July 29, 2020, 7:04 AM IST
Phantom: ಫ್ಯಾಂಟಮ್​ ಸಿನಿಮಾದಲ್ಲಿ ವಿಕ್ರಾಂತ್​ ರೋಣ ಸ್ಟೈಲ್​ ಹೀಗಿದೆ ನೋಡಿ..!
ಫ್ಯಾಂಟಮ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಫ್ಯಾಂಟಮ್​. ಈ ಸಿನಿಮಾದ ಕುರಿತಾಗಿ ಕಳೆದ ಕೆಲವು ದಿನಗಳಿಂದ ಸುದೀಪ್​ ಸಖತ್ ಅಪ್ಡೇಟ್​ ಕೊಡುತ್ತಿದ್ದಾರೆ. ಒಂದರ ಹಿಂದೆ ಒಂದು ವಿಡಿಯೋ, ಚಿತ್ರೀಕರಣ ಆರಂಭವಾದಾಗ ತೆಗೆದ ಫೋಟೋಗಳು. ಹೀಗೆ ಈ ಚಿತ್ರದ ಕುರಿತಾಗಿ ಸಾಕಷ್ಟು ಮಾಹಿತಿ ಅಭಿಮಾನಿಗಳಿಗೆ ನೀಡಲಾಗುತ್ತಿದೆ. 

ಅಷ್ಟೇಅಲ್ಲ, ಲಾಕ್​ಡೌನ್​ನಿಂದಾಗಿ ಸಿನಿಮಾ ಮಂದಿರಗಳು ಬಂದ್​ ಆಗಿದ್ದು, ಜನರಿಗೆ ಮನರಂಜನೆ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸುದೀಪ್​ ಎರಡೆರಡು ಚಿತ್ರಗಳ ಕುರಿತಾದ ಅಪ್ಡೇಟ್​ ನೀಡುತ್ತಿದ್ದಾರೆ. ಕೋಟಿಗೊಬ್ಬ 3 ಸಿನಿಮಾದ ಚಿತ್ರೀಕರಣದ ಬಗ್ಗೆ ಕಿಚ್ಚ ಟ್ವೀಟ್​ ಮಾಡಿದ್ದರು.








View this post on Instagram





‪Just a raw footage. Yet,,here it is my frnzz,,,‬ ‪A Sneak-Peek into,,‬ ‪#TheWorldOfPhantom‬


A post shared by KicchaSudeepa (@kichchasudeepa) on






ಸುದೀಪ್​ ತಮ್ಮ ಪ್ರತಿ ಸಿನಿಮಾದಲ್ಲಿ ಪಾತ್ರಕ್ಕೆ ತಕ್ಕಂತೆ ಹೊಸ ಸ್ಟೈಲ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೆ ಫ್ಯಾಂಟಮ್​ನಲ್ಲೂ ಅವರ ಲುಕ್​ ಹಾಗೂ ತೊಡುವ ಬಟ್ಟೆ ಸಖತ್​ ಸ್ಟೈಲಿಶ್ ಆಗಿದೆ. ಫ್ಯಾಂಟಮ್​ ಸಿನಿಮಾದಲ್ಲಿ ವಿಕ್ರಾಂತ್​​ ರೋಣನ ಲುಕ್​ ಹೇಗಿದೆ ಎಂದು ಈಗಾಗಲೇ ವಿಡಿಯೋದಲ್ಲಿ ನೋಡಿದ್ದೀರಿ. ಆದರೆ ಈಗ ಅವರ ಸ್ಟೈಲ್​ ಹೇಗಿದೆ ಎಂದು ಹೇಳುವ ಒಂದು ಫೋಟೋವನ್ನು ರಿಲೀಸ್​ ಮಾಡಿದ್ದಾರೆ.



ಸ್ಟೈಲಿಶ್​ ಕ್ಯಾಪ್​, ಸ್ಲೀವ್​ಲೆಸ್​ ಶರ್ಟ್​, ಅದರ ಮೇಲೆ ಬೆಲ್ಟ್​ ಹಾಗೂ ಪಿಸ್ತೂಲ್​ ಇಡಲಾಗಿದೆ. ನಿಮ್ಮ ಸ್ಟೈಲ್​ ಅನ್ನು ನಿಮ್ಮ ಸ್ವಂತ ಮಾಡಿಕೊಳ್ಳಿ ಎಂದು ಫೋಟೋದ ಮೇಲೆ ಬರೆಯಲಾಗಿದೆ.








View this post on Instagram





#TheWorldOfPhantom. https://t.co/HLdki3Ofo9 https://t.co/zetta6Wd3B https://t.co/1THbvCZ3R9


A post shared by KicchaSudeepa (@kichchasudeepa) on






ಇನ್ನು ಈ ಸಿನಿಮಾದ ಚಿತ್ರೀಕರಣದ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಕಾಡು ಹಾಗೂ ಹರಿಯುವ ನೀರಿನ ಸೆಟ್​ ಅನ್ನು ನಾಲ್ಕು ತಿಂಗಳ ಹಿಂದೆಯೇ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಕೆಲಸ ಮಾಡಲು ತಂತ್ರಜ್ಞರು ಸೇರಿದಂತೆ ಇತರೆ ಸಿಬ್ಬಂದಿಯನ್ನು ಸ್ಯಾಂಡಲ್​ವುಡ್​ನಿಂದಲೇ ಕರೆದುಕೊಂಡು ಹೋಗಲಾಗಿದೆ.
Published by: Anitha E
First published: July 29, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories