Bigg Boss OTT: ನಾಳೆಯಿಂದಲೇ ಅಸಲಿ ಆಟ ಶುರು! ಬಿಗ್ ಮನೆಗೆ ಇವ್ರೆಲ್ಲ ಹೋಗ್ತಾರಂತೆ!

ಹೌದು ಸ್ವಾಮಿ, ನಾಳೆಯಿಂದ ಅಸಲಿ ಆಟ ಶುರುವಾಗಲಿದೆ. ಬಿಗ್ ಬಾಸ್ ಒಟಿಟಿ ನಾಳೆಯಿಂದ ಪ್ರಾರಂಭವಾಗಲಿದೆ. ಸಿನಿಮಾ, ಕಿರುತೆರೆಯಲ್ಲಿ ಖ್ಯಾತರಾದವರು, ಟಿವಿ ಪತ್ರಕರ್ತರ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್ಗಳಿಗೂ ಮಣಿ ಹಾಕಲಾಗಿದೆ ಎನ್ನಲಾಗಿದೆ. ಹಾಗಿದ್ರೆ ಈ ಬಾರಿ ಬಿಗ್ ಬಾಸ್ ಒಟಿಟಿಯಲ್ಲಿ ಯಾರ್ಯಾರು ಇರುತ್ತಾರೆ? ಯಾರ್ಯಾರ ಹೆಸರು ಓಡಾಡುತ್ತಿದೆ? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ…

ಬಿಗ್​ ಬಾಸ್​ ಒಟಿಟಿ ನಾಳೆಯಿಂದ

ಬಿಗ್​ ಬಾಸ್​ ಒಟಿಟಿ ನಾಳೆಯಿಂದ

  • Share this:
ಹೌದು ಸ್ವಾಮಿ, ನಾಳೆಯಿಂದ ಅಸಲಿ ಆಟ ಶುರುವಾಗಲಿದೆ.  ಕನ್ನಡ (Kannada)  ಬಿಗ್ ಬಾಸ್ ಒಟಿಟಿ (Bigg Boss OTT) ನಾಳೆಯಿಂದ ಪ್ರಾರಂಭವಾಗಲಿದೆ. ವೂಟ್‌ ಆ್ಯಪ್‌ನಲ್ಲಿ (Voot App) ನಾಳೆಯಿಂದ ಬಿಗ್ ಬಾಸ್ ಒಟಿಟಿ ಸ್ಟ್ರೀಮಿಂಗ್ (Streaming) ಆಗಲಿದೆ. ಬಿಗ್ ಬಾಸ್ ಕನ್ನಡದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು, ಕಿಚ್ಚ ಸುದೀಪ್ (Kichcha Sudeep) ಅವರೇ ಇದನ್ನು ನಡೆಸಿಕೊಡಲಿದ್ದಾರೆ. ಈ ಬಾರಿ ಇಲ್ಲಿಯೂ 16 ಸ್ಪರ್ಧಿಗಳು (Contestants) ಇರಲಿದ್ದಾರೆ.  ಸ್ಪರ್ಧಿಗಳ ಸಂಖ್ಯೆ 17 ಆಗಬಹುದು ಅಥವಾ 15 ಆಗಬಹುದು ಎಂದು ಕಲರ್ಸ್ ಕನ್ನಡ ಬಿಸ್‌ನೆಸ್ ಹೆಡ್ (Colors Kannada Business Head) ಪರಮೇಶ್ವರ್ ಗುಂಡ್ಕಲ್ (Parameshwar Gundkal) ಹೇಳಿದ್ದಾರೆ. ಸಿನಿಮಾ, ಕಿರುತೆರೆಯಲ್ಲಿ ಖ್ಯಾತರಾದವರು, ಟಿವಿ ಪತ್ರಕರ್ತರ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೂ (Social Media Stars) ಮಣಿ ಹಾಕಲಾಗಿದೆ ಎನ್ನಲಾಗಿದೆ. ಹಾಗಿದ್ರೆ ಈ ಬಾರಿ ಬಿಗ್ ಬಾಸ್ ಒಟಿಟಿಯಲ್ಲಿ ಯಾರ್ಯಾರು ಇರುತ್ತಾರೆ? ಯಾರ್ಯಾರ ಹೆಸರು ಓಡಾಡುತ್ತಿದೆ? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ…

ಬಿಗ್ ಬಾಸ್‌ ಒಟಿಟಿಯಲ್ಲಿ ಕಾಣಿಸಿಕೊಳ್ಳುವವರು ಯಾರು?

ಈ ಮೊದಲೇ ಹೇಳಿದಂತೆ ಸಿನಿಮಾ, ಕಿರುತೆರೆಯಲ್ಲಿ ಖ್ಯಾತರಾದವರು, ಟಿವಿ ಪತ್ರಕರ್ತರ ಜೊತೆ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೂ ಬಿಗ್ ಬಾಸ್ ಒಟಿಟಿಯಲ್ಲಿ ಮಣೆ ಹಾಕಲಾಗಿದೆ. ಹೀಗಾಗಿ ಒಂದಷ್ಟು ಖ್ಯಾತನಾಮರ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಹವಾ ಎಬ್ಬಿಸುತ್ತಿರುವವರಿಗೂ ಚಾನ್ಸ್ ನೀಡಲಾಗಿದೆ. ರೀಲ್ಸ್ ಇತ್ಯಾದಿ ಮಾಡಿಕೊಂಡು ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಒಟಿಟಿಯಲ್ಲಿ ಕಾಣಿಸಿಕೊಳ್ಳಬಹುದು ಅಂತ ಜನರೇ ಗೆಸ್ ಮಾಡುತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗ್ತಾರಾ ಪತ್ರಕರ್ತ ಸೋಮಣ್ಣ ಮಾಚಿಮಾಡ?

ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತಸೋಮಣ್ಣ ಮಾಚಿಮಾಡ್ ಈ ಬಾರಿ ಬಿಗ್ ಬಾಸ್ ಒಟಿಟಿಗೆ ಹೋಗ್ತಾರೆ ಎನ್ನಲಾಗುತ್ತಿದೆ. ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬಿಗ್ ಬಾಸ್ ಒಟಿಟಿಗೆ ಹೋಗ್ತಿದ್ದಾರೆ ಅಂತ ಅವ್ರ ಸ್ನೇಹಿತರು ಬರೆದುಕೊಂಡು, ವಿಶ್ ಮಾಡುತ್ತಿದ್ದಾರೆ.

ಈ ಬಾರಿ ಕಾಫಿನಾಡು ಚಂದು ಹೋಗ್ತಾರಾ?

ಶಿವಣ್ಣ.. ಶಿವಣ್ಣ ಯೆಪ್ಪಿ ಬರ್ತ್‌ ಡೇ… ಅಂಬಿ ಅಣ್ಣ ಅಂಬಿ ಅಣ್ಣ ಯ್ಯಾಪಿ ಬರ್ತ್ ಡೇ ಅಂತ ವಿಶ್ ಮಾಡುತ್ತಲೇ ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಎಬ್ಬಿಸುತ್ತಿರುವ ಕಾಫಿನಾಡು ಚಂದು ಒಟಿಟಿ ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ಈ ಬಾರಿ ಹೇಗಿರಲಿದೆ ಬಿಗ್​ ಬಾಸ್​ ಮನೆ? ಕೊನೆಗೂ ರಿವೀಲ್ ಆಯ್ತು Bigg Boss OTT ಹೌಸ್

ಸೋನು ಶ್ರೀನಿವಾಸ ಗೌಡ ಹೋಗ್ತಾರಂತೆ!

ಸೋಶಿಯಲ್ ಮೀಡಿಯಾಗಳಲ್ಲಿ ಕಾಂಟ್ರೋವರ್ಸಿಗಳಿಂದಲೇ ಸುದ್ದಿ ಮಾಡಿರುವ ಸೋನು ಶ್ರೀನಿವಾಸ್ ಗೌಡ ಕೂಡ ಬಿಗ್ ಬಾಸ್ ಒಟಿಟಿಗೆ ಹೋಗ್ತಾರಂತೆ ಅಂತ ಹೇಳಲಾಗುತ್ತಿದೆ.

ಹೇಗಿರಲಿದೆ ಬಿಗ್​ ಬಾಸ್​ ಹೌಸ್

 ಹೌದು, ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆ ಅದ್ದೂರಿಯಾಗಿರುತ್ತದೆ. ಹಲವು ವಿಸೇಷತೆಗಳಿಂದ ಈ ಮನೆ ಕೂಡಿರುತ್ತದೆ. ಐಷಾರಾಮಿ ಮನೆಯಲ್ಲಿ ಸ್ಪರ್ಧಿಗಳು ಈ ಬಾರಿ 6 ವಾರಗಳ ಕಾಲ ಇರುತ್ತಾರೆ. ಹಾಗಾದರೆ ಈ ಬಾರಿ ಮನೆ ಹೇಗಿರಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ಹೌದು, ಪರಮೇಶ್ವರ್ ಗುಂಟ್ಕಲ್​ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಗ್​ ಬಾಸ್​ ಮನೆಯ ಫೋಟೋ ಹಂಚಿಕೊಂಡಿದ್ದು, Over the top! ಎಂದು ಬರೆದುಕೊಂಡಿದ್ದಾರೆ. ಒಂದು ಗೊಂಬೆಯ ಕಣ್ಣನ್ನು ಹಾಗೂ ಕುತ್ತಿಗೆಯನ್ನು 2 ಕೈಗಳು ಹಿಡಿರುವ ಚಿತ್ರ ಇದಾಗಿದ್ದು, ಪ್ರೇಕ್ಷಕರಲ್ಲಿ ಬಿಗ್​ ಬಾಸ್​ ಹೌಸ್​ ಕುರಿತು ಕುತೂಹಲ ಹೆಚ್ಚಿದ್ದು, ಇದಕ್ಕೆಲ್ಲಾ ಆಗಸ್ಟ್ 6ರಂದು ತೆರೆಬೀಳಲಿದೆ.

ಇದನ್ನೂ ಓದಿ: Bigg Boss: ಸಿನಿಮಾ ಬೇರೆಯಲ್ಲ, ಬಿಗ್​ಬಾಸ್​ ಬೇರೆಯಲ್ಲ! ಓಟಿಟಿ ಬಗ್ಗೆ ಕಿಚ್ಚ ಸುದೀಪ್​ ಮನದಾಳದ ಮಾತು

ಒಟಿಟಿ ಸೀಸನ್ ಬಗ್ಗೆ ಮಾಹಿತಿ ಕೊಟ್ಟ ಕಿಚ್ಚ

 ಬಿಗ್​ಬಾಸ್ ಓಟಿಟಿ ಮೊದಲ ಸೀಸನ್ ಗೆ ಕೌಂಟ್ ಡೌನ್  ಶುರುವಾಗಿದ್ದು,  ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನನಗೆ ಸಿನಿಮಾ‌ ಬೇರೆ ಅಲ್ಲ ಬಿಗ್ ಬಾಸ್  ಬೇರೆ ಅಲ್ಲ. ನನಗೆ ಬಿಗ್ ಬಾಸ್ ಅರಂಭವಷ್ಟೇ ಗೊತ್ತು ಉಳಿದಿದ್ದೆಲ್ಲ ಸ್ಪರ್ಧಿಗಳೇ ನೋಡಿಕೊಳ್ತಾರೆ.  ಬಿಗ್​ಬಾಸ್ ಕೆಲವು ಸೀಸನ್ ಆದ ಮೇಲೆ ನನಗೆ ಬಿಗ್​ಬಾಸ್ ಸಾಕು ಅನಿಸಿದೆ ಆದರೆ ಬಿಗ್​ಬಾಸ್​ ಹಾಗೂ ನನಗೂ ಒಂದು ಭಾಂದವ್ಯ ಇದೆ ಎಂದಿದ್ದಾರೆ.
Published by:Annappa Achari
First published: