Bigg Boss Kannada 8: ಸೋನು ನಿಗಮ್ ಹಾಡಿದ್ದ ಹಾಡಿಗೆ ಕತ್ತರಿ ಹಾಕಿಸಿ ಸ್ನೇಹಿತನಿಗೆ ಅವಕಾಶ ಕೊಡಿಸಿದ್ದ ಸುದೀಪ್​..!

ಹುಚ್ಚ ಸಿನಿಮಾ ನಿರ್ಮಾಣದ ವೇಳೆ ನಡೆದಿದ್ದ ಒಂದು ಸಂಗತಿಯನ್ನು ಸುದೀಪ್ ಬಿಗ್ ಬಾಸ್​ ಫಿನಾಲೆ ವೇದಿಕೆ ಮೇಲೆ ಹಂಚಿಕೊಂಡಿದ್ದಾರೆ. ಸೋನು ನಿಗಮ್ ಹಾಡಿದ್ದ ಹಾಡಿಗೆ ಕತ್ತರಿ ಹಾಕಿಸಿ ಸ್ನೇಹಿತನಿಗೆ ಅವಕಾಶ ಕೊಡಿಸಿದ್ದರಂತೆ ಸುದೀಪ್​.

ಬಿಗ್ ಬಾಸ್​ ಫಿನಾಲೆ ವೇದಿಕೆ ಮೇಲೆ ಸುದೀಪ್​ ಹಾಗೂ ರಾಜೇಶ್​ ಕೃಷ್ಣನ್​

ಬಿಗ್ ಬಾಸ್​ ಫಿನಾಲೆ ವೇದಿಕೆ ಮೇಲೆ ಸುದೀಪ್​ ಹಾಗೂ ರಾಜೇಶ್​ ಕೃಷ್ಣನ್​

  • Share this:
ಇಂದು ಬಿಗ್ ಬಾಸ್​ ಕನ್ನಡ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆ ಕಾರ್ಯಕ್ರಮದ ಪ್ರಸಾರವಾಗುತ್ತಿದೆ. ಎಂದಿನಂತೆ ಇವತ್ತೂ ಸಹ ಸುದೀಪ್​ ತಮ್ಮದೇ ಆದ ರೀತಿಯಲ್ಲಿ ಫಿನಾಲೆ ವೇದಿಕೆ ಮೇಲೆ ನಿರೂಪಣೆ ಮಾಡುತ್ತಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳ ಜರ್ನಿ ಹೇಗಿತ್ತು, ಅವರ ನಡುವಿನ ಜಗಳ, ಸ್ನೇಹ, ಸಂತಸದ ಕ್ಷಣಗಳು ಹೀಗೆ ಒಂದೊಂದೇ ವಿಡಿಯೋಗಳನ್ನು ಹಾಕುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಲಾಗುತ್ತಿದೆ. ಇನ್ನೂ ಟಾಪ್​ 3ಯಲ್ಲಿರುವವರಲ್ಲಿ ಮೊದಲು ಯಾರು ಮನೆಯಿಂದ ಹೊರ ಬರಲಿದ್ದಾರೆ ಎಂಧು ಪ್ರಕಟಿಸಿಲ್ಲ. ಜೊತೆಗೆ ಇವತ್ತಿನ ಸಂಚಿಕೆಯಲ್ಲಿ ಪ್ರಿಯಾಂಕಾ ತಿಮ್ಮೇಶ್​, ಶಮಂತ್​ ಅವರ ಸಖತ್ ಡ್ಯಾನ್ಸ್​ ಪರ್ಫಾಮೆನ್ಸ್ ಇತ್ತು. ಇವುಗಳ ನಡುವೆ ಸುದೀಪ್​ ಅವರಿಗೆ ದೊಡ್ಡ ಸರ್ಪ್ರೈಸ್​ ಕಾದಿತ್ತು. ರಘು ದೀಕ್ಷಿತ ಹಾಗೂ ರಾಜೇಶ್ ಕೃಷ್ಣನ್ ಅವರು ವೇದಿಕೆಗೆ ಎಂಟ್ರಿ ಕೊಟ್ಟರು. ನಂತರ ಸುದೀಪ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಅವರಿಷ್ಟದ ಹಾಡುಗಳನ್ನು ಹಾಡುವ ಮೂಲಕ ನೆರದವರನ್ನು ರಂಜಿಸಿದ್ದಾರೆ. ಈ ವೇಳೆ ರಾಜೇಶ್​ ಕೃಷ್ಣನ್​ ಅವರು ತಮ್ಮ ಹಾಗೂ ಸುದೀಪ್ ಅವರ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡರು. ತನ್ನ ಹಾಗೂ ಸುದೀಪ್ ನಡುವೆ ಏಕ ವಷಚನದಲ್ಲಿ ಮಾತನಾಡುವಷ್ಟು ಸಲಿಗೆ ಇದೆ. ಬಹಳ ವರ್ಷಗಳ ಸ್ನೇಹ ನಮ್ಮದು ಎಂದಿದ್ದಾರೆ.

ನಂತರ ಸುದೀಪ್​ ಅವರು ಇದೇ ವೇದಿಕೆ ಮೇಲೆ ತಮ್ಮ ಹಾಗೂ ರಾಜೇಶ್​ ಕೃಷ್ಣನ್​ ಅವರ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ. ಆಗಲೇ ಹುಚ್ಚ ಸಿನಿಮಾದ ವೇಳೆ ನಡೆದಿದ್ದ ಒಂದು ಸಂಗತಿಯನ್ನು ಸುದೀಪ್ ಅವರು ಹಂಚಿಕೊಂಡಿದ್ದಾರೆ. ಹುಚ್ಚ ಸಿನಿಮಾದ ಸಮಯದಲ್ಲಿ ನಾನು ಏನೂ ಆಗಿರಲಿಲ್ಲ. ಆಗ ನನ್ನ ಮಾತು ಯಾರೂ ಕೇಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ​.






ನನ್ನ ಸಿನಿಮಾದಲ್ಲಿ ಉಸಿರೇ ಉಸಿರೇ ಹಾಡನ್ನು ಬಾಲಿವುಡನ ಖ್ಯಾತ ಗಾಯಕ ಸೋನು ನಿಗಮ್​ ಅವರಿಂದ ಹಾಡಿಸಲಾಗಿತ್ತು. ಆದರೆ ಅವರಿಗೆ ಕನ್ನಡ ಭಾಷೆ ತಿಳಿಯದ ಕಾರಣದಿಂದ ಆ ಹಾಡಿನಲ್ಲಿ ನೈಜತೆ ಹಾಗೂ ಇರಬೇಕಾಗಿದ್ದ ಫೀಲ್ ಇದೆ ಎಂದು ನನಗೆ ಅನಿಸಲಿಲ್ಲ. ಅದಕ್ಕೆ ಸಂಗೀತ ನಿರ್ದೇಶಕರಾಗಿದ್ದ ರಾಜೇಶ್​ ರಾಮನಾಥ್ ಅವರ ಬಳಿ ಹೋಗಿ ಈ ಹಾಡನ್ನು ಬೇರೆಯವರ ಬಳಿ ಹಾಡಿಸೋಣ ಎಂದು ಮನವಿ ಮಾಡಿದ್ದೆ ಎಂದಿದ್ದಾರೆ ಕಿಚ್ಚ.

ಇದನ್ನೂ ಓದಿ: Bigg Boss Kannada 8: ನಿನ್ನೆ ಬಿಗ್ ಬಾಸ್​ ಫಿನಾಲೆ ಪ್ರಸಾರದಲ್ಲಾಗಿತ್ತು ಅಡಚಣೆ: ಕಾರಣ ಕೊಟ್ಟ ಕಿಚ್ಚ ಸುದೀಪ್​..!

ಅದಕ್ಕೆ ಅವರು ಸೋನು ನಿಗಮ್ ಅವರು ದೊಡ್ಡ ಗಾಯಕ. ಅವರು ಹಾಡಿರುವ ಹಾಡನ್ನು ಸಿನಿಮಾದಿಂದ ತೆಗೆದು ಹಾಕುವುದು ಚಿಕ್ಕ ವಿಷಯವಾಗಿರಲಿಲ್ಲ. ಅದಕ್ಕೆ ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ಸ್ನೇಹಿತ ರಾಜೇಶ್ ಕೃಷ್ಣನ್​ ಅವರನ್ನು ಕರೆತಂದು ಹಾಡಿಸುತ್ತೇನೆ ಎಂದೂ ರಾಜೇಶ್ ರಾಮನಾಥ್ ಅವರ ಬಳಿ ಹೇಳಿದ್ದರಂತೆ. ಕಡೆಗೂ ಸುದೀಪ್ ಅವರು ರಾಜೇಶ್​ ರಾಮನಾಥ್​ ಅವರ ಮನಸ್ಸನ್ನು ಒಲಿಸುವಲ್ಲಿ ಯಶಸ್ವಿಯಾಗಿದ್ದರಂತೆ.

ಇದನ್ನೂ ಓದಿ: Bigg Boss Kannada 8 Finale: ನಿನ್ನೆ ಗೈರಾಗಿದ್ದ ಧನುಶ್ರೀ -ಚಂದ್ರಕಲಾ ಇಂದು ಹಾಜರು

ಅಂದುಕೊಂಢಂತೆಯೇ ರಾಜೇಶ್ ಕೃಷ್ಣನ್ ಅವರು ಉಸಿರೇ ಉಸಿರೇ ಹಾಡನ್ನು ಹಾಡುತ್ತಾರೆ. ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಅವರ ಹಾಡೇ ಇರುತ್ತದೆ. ಆದರೆ ಕ್ಯಾಸೆಟ್​ಗಳ ಮೇಲೆ ಮಾತ್ರ ಸೋನು ಅವರ ಹೆಸರೇ ಇತ್ತು. ಅದು ಇತ್ತೀಚೆಗಷ್ಟೆ ಬದಲಾಗಿದೆ. ಇನ್ನು ರಾಜೇಶ್ ರಾಮನಾಥ್ ಅವರನ್ನು ಒಪ್ಪಿಸಿ, ರಾಜೇಶ್​ ಕೃಷ್ಣನ್ ಬಳಿ ಬಂದು ಹಾಡಲು ಬಾ ಎಂದರೆ ಹೋಗಪ್ಪಾ ಯಾರು ಬರ್ತಾರೆ ಅಂತ ರಾಗ ಎಳೆದಿದ್ದ. ಆದರೂ ಹೇಗೋ ಮಾಡಿ ಕರೆತಂದು ಹಾಡು ಹಾಡಿಸಿದೆ. ಈ ಹಾಡು ಈಗಲೂ ಹಿಟ್​ ಹಾಡುಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದೆ. ಆಗ ರಾಜೇಶ್​ ಕೃಷ್ನನ್​ ಅವರಿಗೆ ಹಣ ಕೊಡಲು ನನ್ನ ಬಳಿ ಹಣವಿರಲಿಲ್ಲ. ನಾನು ಪೇಮೆಂಟ್ ಸಹ ಮಾತನಾಡಿರಲಿಲ್ಲ. ಸ್ನೇಹಿತನ ಮಾತಿಗೆ ಬೆಲೆ ಕೊಟ್ಟು ಬಂದು ರಾಜೇಶ್ ಕೃಷ್ಣನ್​ ಆಗ ಹಾಡು ಹಾಡಿದ್ದರು ಎಂದು ಫಿನಾಲೆಯ ವೇದಿಕೆಯಲ್ಲಿ ಈ ವಿಷಯವನ್ನು ಸುದೀಪ್ ರಿವೀಲ್​ ಮಾಡಿದ್ದಾರೆ.
Published by:Anitha E
First published: