HOME » NEWS » Entertainment » KICHCHA SUDEEP REVEALED 7 BIG SECRETS OF BIGG BOSS SEASON 7 AE

Bigg Boss 7: ಬಿಗ್‍ಬಾಸ್ ಸೀಸನ್​ 7ನಲ್ಲಿ ಇರಲ್ಲ ಕಾಮನ್​ ಮ್ಯಾನ್: 7ನೇ ಬಾರಿಗೂ ಕಿಚ್ಚನದೇ ಕಮಾಲ್ !

Bigg Boss 7: ಕಳೆದ ಸೀಸನ್‍ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರಿಗೂ ಬಿಗ್‍ಬಾಸ್ ಮನೆಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗಷ್ಟೇ ಬಿಗ್‍ಬಾಸ್ ಮನೆಗೆ ಎಂಟ್ರಿ. ಮೊದಲಿನಂತೆಯೇ ಸಿನಿಮಾ ತಾರೆಯರು, ನಿರ್ದೇಶಕ, ತಂತ್ರಜ್ಞರು, ಕಿರುತೆರೆ ನಟ, ನಟಿಯರು, ಸಂಗೀತಗಾರರು, ಕ್ರೀಡಾ ಕ್ಷೇತ್ರದ ಸಾಧಕರು ಹೀಗೆ 17 ಮಂದಿ ಸೆಲೆಬ್ರಿಟಿಗಳನ್ನು ಬಿಗ್‍ಬಾಸ್ ಮನೆಗೆ ಕಳುಹಿಸಲಾಗುವುದು.

Anitha E | news18-kannada
Updated:October 12, 2019, 8:41 AM IST
Bigg Boss 7: ಬಿಗ್‍ಬಾಸ್ ಸೀಸನ್​ 7ನಲ್ಲಿ ಇರಲ್ಲ ಕಾಮನ್​ ಮ್ಯಾನ್: 7ನೇ ಬಾರಿಗೂ ಕಿಚ್ಚನದೇ ಕಮಾಲ್ !
ಇನ್ನು ಈ ವಾರ 5 ಸ್ಪರ್ಧಿಗಳು ನಾಮಿನೇಟ್ ಆಗಿದ್ದರಿಂದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಮೇಲೆ ವೀಕ್ಷಕರರಲ್ಲಿ ಸಹಜ ಕುತೂಹಲವಿತ್ತು.
  • Share this:
'ಬಿಗ್‍ಬಾಸ್ ಸೀಸನ್ 7' ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅದರ ಬೆನ್ನಲ್ಲೇ ಈ ಬಾರಿ ಬಿಗ್‍ಬಾಸ್‍ನಲ್ಲಿ ಯಾರೆಲ್ಲ ಸ್ಪರ್ಧಿಗಳಿರ್ತಾರೆ? ಏನ್ ವಿಶೇಷತೆಗಳಿರುತ್ತವೆ? ಕಿಚ್ಚ ಸುದೀಪ್ ಏನೆಲ್ಲ ಟಾಸ್ಕ್ ಕೊಡ್ತಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ.

'ಬಿಗ್‍ಬಾಸ್' 2013ರಲ್ಲಿ ಪ್ರಾರಂಭವಾದ ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ. ಈಗ ಇದು ಏಳನೇ ಸೀಸನ್‍ಗೆ ಕಾಲಿಟ್ಟಿದೆ. ಪರಿಕಲ್ಪನೆ, ಸೆಲೆಬ್ರಿಟಿಗಳು, ಲೊಕೇಷನ್, ಮನೆಯ ಇಂಟೀರಿಯರ್, ಟಾಸ್ಕ್ ಹೀಗೆ ಬಿಗ್‍ಬಾಸ್‍ನಲ್ಲಿ ಏನೆಲ್ಲ ಬದಲಾವಣೆಗಳಾದರೂ, ಕಳೆದ ಏಳು ಸೀಸನ್‍ಗಳಿಂದಲೂ ಬದಲಾಗದೆ ಉಳಿದಿರೋದು ಅಂದರೆ ಅದು ಕಿಚ್ಚ ಸುದೀಪ್.

ಬಿಗ್​ ಬಾಸ್​ ಏಳನೇ ಆವೃತ್ತಿ ಆರಂಭಗೊಳ್ಳಲು ಒಂದು ದಿನ ಮಾತ್ರ ಬಾಕಿ ಉಳಿದಿದೆ.


ಕಳೆದ ಸೀಸನ್‍ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರಿಗೂ ಬಿಗ್‍ಬಾಸ್ ಮನೆಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗಷ್ಟೇ ಬಿಗ್‍ಬಾಸ್ ಮನೆಗೆ ಎಂಟ್ರಿ. ಮೊದಲಿನಂತೆಯೇ ಸಿನಿಮಾ ತಾರೆಯರು, ನಿರ್ದೇಶಕ, ತಂತ್ರಜ್ಞರು, ಕಿರುತೆರೆ ನಟ, ನಟಿಯರು, ಸಂಗೀತಗಾರರು, ಕ್ರೀಡಾ ಕ್ಷೇತ್ರದ ಸಾಧಕರು ಹೀಗೆ 17 ಮಂದಿ ಸೆಲೆಬ್ರಿಟಿಗಳನ್ನು ಬಿಗ್‍ಬಾಸ್ ಮನೆಗೆ ಕಳುಹಿಸಲಾಗುವುದು.

100 ದಿನಗಳ ಕಾಲ ಅಲ್ಲಿದ್ದು, ಎಲ್ಲ ರಾಜಕಾರಣ, ಮಸಲತ್ತುಗಳನ್ನು ಗೆದ್ದು ಜಯಶಾಲಿಯಾಗೋರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ. ಜೊತೆಗೆ ಈ ಬಾರಿ ಫ್ಲ್ಯಾಟ್ ಕೂಡ ಸಿಗಬಹುದು ಅಂತಾರೆ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್.

ಇದನ್ನೂ ಓದಿ: Bala Trailer: 48 ಗಂಟೆಯೊಳಗೆ 1.83 ಕೋಟಿ ವೀಕ್ಷಣೆ ಪಡೆದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿದೆ ಈ ವಿಡಿಯೋ

ಇನ್ನು ಕಳೆದ ಬಿಗ್‍ಬಾಸ್ ಸೀಸನ್ ಕಿಚ್ಚ ಸುದೀಪ್ ಅವರಿಗೆ ತುಂಬಾ ಚಾಲೆಂಜಿಂಗ್ ಆಗಿತ್ತಂತೆ. ಯಾಕಂದರೆ ಅವರು ಬಿಗ್‍ಬಾಸ್ ಶೂಟಿಂಗ್‍ನಲ್ಲಿರುವಾಗಲೇ ಅಂಬಿ ಮಾಮ ನಿಧನರಾದ ಸುದ್ದಿ ಬಂದಿತ್ತು. ಒಂದು ವೀಕೆಂಡ್‍ನಲ್ಲಿ ಭಾನುವಾರದ ಎಪಿಸೋಡ್ ಶೂಟಿಂಗ್‍ಗೇ ನನಗೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನೆನಪಿಗೆ ಜಾರಿದರು ಕಿಚ್ಚ.ಒಟ್ಟಾರೆ 'ಬಿಗ್‍ಬಾಸ್ ಸೀಸನ್ 7' ಇದೇ ಅಕ್ಟೋಬರ್ 13ರಂದು ಅದ್ಧೂರಿ ಕಾರ್ಯಕ್ರಮದ ಮೂಲಕ ಲಾಂಚ್ ಆಗಲಿದೆ. ಬಳಿಕ ಮುಂದಿನ ನೂರು ದಿನಗಳ ಕಾಲ ಪ್ರತಿದಿನ ಒಂದೂವರೆ ತಾಸು ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿಚ್ಚನ ಕಿಚನ್‍ನಂತೆಯೇ ವೀಕೆಂಡ್‍ನಲ್ಲಿ ಸ್ಪೆಷಲ್ ಪ್ರೋಗ್ರಾಂ ಅನ್ನೂ ಪ್ಲ್ಯಾನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಒಟ್ಟಾರೆ ಈ ಬಾರಿಯ ಬಿಗ್‍ಬಾಸ್ ಹಿಂದೆಂದಿಗಿಂತಲೂ ಎಕ್ಸೈಟಿಂಗ್ ಆಗಿರಲಿದೆ.

Madhubala: ಎವರ್​ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್​ವುಡ್​ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್


First published: October 12, 2019, 8:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories