HOME » NEWS » Entertainment » KICHCHA SUDEEP REQUESTED EVERY ONE BY TWEET TO HELP KANNADA ACTOR SANJEEV KULKARNI AE

Kichcha Sudeep: ಸಹಾಯಕ್ಕಾಗಿ ಟ್ವೀಟ್​ ಮಾಡಿದ ಸುದೀಪ್​: ಕಿಚ್ಚ ನೆರವು ಕೇಳಿದ್ದು ಯಾರಿಗಾಗಿ..?

Kichcha Sudeep: ಈ ಹಿಂದೆ ಮಗುವೊಂದು ಕಾಣೆಯಾಗಿದ್ದ ಮಗುವನ್ನು ಹುಡುಕುವ ಪ್ರಯತ್ನಕ್ಕೆ ಕೈ ಜೋಡಿಸಿದ್ದರು ಕಿಚ್ಚ ಸುದೀಪ್​.  ಅಪಘಾತದಲ್ಲಿ ಸಾವನ್ನಪ್ಪಿದ ಅಭಿಮಾನಿಯ ಕುಟುಂಬಕ್ಕೆ ಸುದೀಪ್​ ಆರ್ಥಿಕ ಸಹಾಯ ಮಾಡಿದ್ದರು. ಈಗ ಇಂತಹ ನಟ ಸಹಾಯಕ್ಕಾಗಿ ಟ್ವೀಟ್​ ಮಾಡಿದ್ದಾರೆ. 

news18-kannada
Updated:January 2, 2020, 1:55 PM IST
Kichcha Sudeep: ಸಹಾಯಕ್ಕಾಗಿ ಟ್ವೀಟ್​ ಮಾಡಿದ ಸುದೀಪ್​: ಕಿಚ್ಚ ನೆರವು ಕೇಳಿದ್ದು ಯಾರಿಗಾಗಿ..?
ದುಡ್ಡು ಪಡೆಯೋವರೆಗೂ ಒಂಥರ, ಆಮೇಲೆ ಒಂಥರ ನಡೆದುಕೊಂಡಿದ್ದರು. ಇದೀಗ ನಮ್ಮ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಇದರಿಂದ ನಮ್ಮ ತಂಡಕ್ಕೆ ಮುಜುಗರ ಉಂಟಾಗಿದೆ ಎಂದು ಸೂರಪ್ಪ ಬಾಬು ಬೇಸರ ವ್ಯಕ್ತಪಡಿಸಿದ್ದರು.
  • Share this:
ಕಿಚ್ಚ ಸುದೀಪ್​ ಕನ್ನಡ ಚಿತ್ರರಂಗವಿರಲಿ... ಸಹ ಕಲಾವಿದರಿರಲಿ... ಕಷ್ಟದಲ್ಲಿರುವ ಅಭಿಮಾನಿಗಳಿರಲಿ... ಯಾರೇ ಕಷ್ಟ ಎಂದರೂ ಅವರಿಗೆ ಸಹಾಯ ಹಸ್ತ ಚಾಚುತ್ತಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳಿವೆ.

ಈ ಹಿಂದೆ ಮಗುವೊಂದು ಕಾಣೆಯಾಗಿದ್ದ ಮಗುವನ್ನು ಹುಡುಕುವ ಪ್ರಯತ್ನಕ್ಕೆ ಕೈ ಜೋಡಿಸಿದ್ದರು ಕಿಚ್ಚ ಸುದೀಪ್​.  ಅಪಘಾತದಲ್ಲಿ ಸಾವನ್ನಪ್ಪಿದ ಅಭಿಮಾನಿಯ ಕುಟುಂಬಕ್ಕೆ ಸುದೀಪ್​ ಆರ್ಥಿಕ ಸಹಾಯ ಮಾಡಿದ್ದರು.

Kichcha Sudeep requested every one by tweet to help Kannada actor Sanjeev Kulkarni
ಶಾಲಾ ಮಕ್ಕಳಿಗೆ ಸಹಾಯ ಮಾಡಿದ ಕಿಚ್ಚ ಸುದೀಪ್​


ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆ ಪರಿಸ್ಥಿತಿಗೆ ಸ್ಯಾಂಡಲ್​ವುಡ್​ ನಟರ ಮನ ಮಿಡಿದಿತ್ತು. ಪ್ರವಾಹ ಪೀಡಿತರ ಬೆಂಬಲಕ್ಕೆ ನಿಲ್ಲಿ ಎಂದು ಆಗ ದರ್ಶನ್​ ಕೋರಿದ್ದರು. ನಂತರ ನಟ ಕಿಚ್ಚ ಸುದೀಪ್​ ಕೂಡ ಮನವಿ ಮಾಡಿದ್ದರು. ಅಷ್ಟೇ ಅಲ್ಲ ಎಲ್ಲರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು.

ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ. ಇಂತಹ ನಟ ಈಗ ಮತ್ತೆ ಟ್ವಿಟರ್​ನಲ್ಲಿ ಸಹಾಯಕ್ಕಾಗಿ ಟ್ವೀಟ್​ ಮಾಡಿದ್ದಾರೆ. ನೆರವಿಗಾಗಿ ಅಭಿಮಾನಿಗಳು  ಹಾಗೂ ಹಿಂಬಾಲಕರಲ್ಲಿ ಮನವಿ ಮಾಡಿದ್ದಾರೆ.ಅಷ್ಟಕ್ಕೂ ಕಿಚ್ಚ ಸುದೀಪ್​ ಸಹಾಯ ಮಾಡಿ ಎಂದು ಕೇಳುತ್ತಿರುವುದು ಯಾರಿಗೆ ಗೊತ್ತಾ? ಅದು ಮತ್ತಾರೂ ಅಲ್ಲ, ಕನ್ನಡದ ಕಲಾವಿದ ಸಂಜೀವ್​ ಕುಲಕರ್ಣಿ ಅವರಿಗೆ. ಶುದ್ಧ ಕನ್ನಡ ಮಾತನಾಡುವ ನಿರೂಪಕನಾಗಿಯೇ ಖ್ಯಾತಿ ಪಡೆದ ಸಂಜೀವ್​ ಕುಲಕರ್ಣಿ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇದನ್ನೂ ಓದಿ: ಆಫರ್​ ಕೊಟ್ಟ ಖ್ಯಾತ ಸ್ಯಾಂಡಲ್​ವುಡ್​ ನಟಿ: ಒಲ್ಲೆ ಎಂದ ಸ್ಟಾರ್​ ನಟ..!

ಇಂತಹ ಕಲಾವಿದ ಸದ್ಯ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ಮಾಡುವ ಅಗತ್ಯವಿದ್ದು, ಅವರ ಮಕ್ಕಳು ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. 49 ವರ್ಷದ ಈ ಕಲಾವಿದನಿಗೆ ಕೈಲಾದಷ್ಟು ಸಹಾಯ ಮಾಡುವಂತೆ ಕಿಚ್ಚ ಸುದೀಪ್​ ಟ್ವೀಟ್​ ಮೂಲಕ ಮನವಿ ಮಾಡಿದ್ದಾರೆ.

ಹೊಸ ವರ್ಷದಂದು ಬಿಕಿನಿ ಚಿತ್ರ ಹಂಚಿಕೊಂಡು ಹೀಗೆ ಖುಷಿಯಾಗಿರುವೆ ಎಂದ ಬಿ-ಟೌನ್​ನ ಸ್ಟಾರ್ ನಟಿ..!

Published by: Anitha E
First published: January 2, 2020, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories