ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ; ಸಾಹಸ ಸಿಂಹನನ್ನು ನೆನೆದ ಕನ್ನಡ ಚಿತ್ರರಂಗ

ಮೈಸೂರಿನ ಎಚ್​.ಡಿ. ಕೋಟೆ ರಸ್ತೆಯಲ್ಲಿರುವ ಉದ್ಬೂರು ಕ್ರಾಸ್​ ಬಳಿ ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣವಾಗುತ್ತಿದೆ. ಇಂದು, ವಿಷ್ಣುವರ್ಧನ್​ ಪತ್ನಿ ಭಾರತಿ, ಅಳಿಯ ಅನಿರುದ್ಧ್​ ಅಲ್ಲಿಗೆ ತೆರಳಿ ವಿಷ್ಣುವರ್ಧನ್​ ಅವರಿಗೆ ನಮನ ಸಲ್ಲಿಸಲಿದ್ದಾರೆ.

news18-kannada
Updated:December 30, 2019, 9:21 AM IST
ವಿಷ್ಣುವರ್ಧನ್ 10ನೇ ಪುಣ್ಯಸ್ಮರಣೆ; ಸಾಹಸ ಸಿಂಹನನ್ನು ನೆನೆದ ಕನ್ನಡ ಚಿತ್ರರಂಗ
ವಿಷ್ಣುವರ್ಧನ್​-ಸುದೀಪ್​
  • Share this:
ಬೆಂಗಳೂರು:  ಸಾಹಸ ಸಿಂಹ ವಿಷ್ಣುವರ್ಧನ್​ ನಮ್ಮನ್ನು ಅಗಲಿ ಇಂದಿಗೆ 10 ವರ್ಷಗಳು ಕಳೆದಿವೆ. ಇಡೀ ಕನ್ನಡ ಚಿತ್ರರಂಗ ಇಂದು ಅವರನ್ನು ಸ್ಮರಿಸಿದೆ.

ಮೈಸೂರಿನ ಎಚ್​.ಡಿ. ಕೋಟೆ ರಸ್ತೆಯಲ್ಲಿರುವ ಉದ್ಬೂರು ಕ್ರಾಸ್​ ಬಳಿ ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣವಾಗುತ್ತಿದೆ. ಇಂದು, ವಿಷ್ಣುವರ್ಧನ್​ ಪತ್ನಿ ಭಾರತಿ, ಅಳಿಯ ಅನಿರುದ್ಧ್​ ಅಲ್ಲಿಗೆ ತೆರಳಿ ವಿಷ್ಣುವರ್ಧನ್​ ಅವರಿಗೆ ನಮನ ಸಲ್ಲಿಸಲಿದ್ದಾರೆ.

ಇನ್ನು ಟ್ವೀಟ್​ ಮಾಡುವ ಮೂಲಕ ಅನೇಕರು ವಿಷ್ಣುವನ್ನು ನೆನೆದಿದ್ದಾರೆ. ಸಾಹಸ ಸಿಂಹ ಅವರನ್ನು ಸ್ಮರಿಸಿರುವ ಕಿಚ್ಚ ಸುದೀಪ್​, “ಅಪ್ಪಾಜಿ... ಇಂದು ನಿಮ್ಮ 10ನೇ ಪುಣ್ಯಸ್ಮರಣೆ. ಆದರೆ,ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷಗಳಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣ, ಹೆಚ್ಚಿದ ಒತ್ತಡ; ಸಿಎಂ ಭೇಟಿಯಾಗಲಿರುವ ಕಿಚ್ಚ ಸುದೀಪ್​ ನೇತೃತ್ವದ ನಿಯೋಗ

ಇತ್ತೀಚೆಗೆ ವಿಷ್ಣುವರ್ಧನ್​ ಸ್ಮಾರಕ ವಿಚಾರವಾಗಿ ಭಾರತಿ ವಿಷ್ಣುವರ್ಧನ್​ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಡಾಲರ್ಸ್ ಕಾಲೋನಿಯ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ಭಾರತಿ ಹಾಗೂ ಅಳಿಯ ಅನಿರುದ್ಧ್​ ಕೆಲ ಕಾಲ ಬಿಎಸ್​ವೈ ಜೊತೆ ಚರ್ಚೆ ನಡೆಸಿದ್ದರು. ಭೇಟಿ ನಂತರ ಮಾಧ್ಯಮಗಳ ಜೊತೆ ಭಾರತಿ ವಿಷ್ಣುವರ್ಧನ್ ಮಾತನಾಡಿದರು. “30ರಂದು ವಿಷ್ಣುವರ್ಧನ್ ಪುಣ್ಯಸ್ಮರಣೆ ಇದೆ. ಇದರ ಬಗ್ಗೆ ಕೇಳಿಕೊಂಡಿದ್ದೆವು. ಮೂರ್ನಾಲ್ಕು ದಿನಗಳಲ್ಲಿ ಸ್ಮಾರಕಕ್ಕೆ ಅಡಿಪಾಯ ಕಾರ್ಯ ಆರಂಭಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ,” ಎಂದರು ಭಾರತಿ ಹೇಳಿದ್ದರು.
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ