HOME » NEWS » Entertainment » KICHCHA SUDEEP RELEASED THE TRAILER OF HOLLYWOOD MOVIE TERMINATOR DARK FATE AE

Kichcha Sudeep: ಮತ್ತೊಂದು ಹಾಲಿವುಡ್​ ಸಿನಿಮಾಗೆ ಜತೆಯಾದ ಕಿಚ್ಚ ಸುದೀಪ್​..!

Terminator: Dark Fate Trailer: ರೈಸನ್​ ಸಿನಿಮಾದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹಳೇ ವಿಷಯ. ಆದರೆ ಈಗ ಮತ್ತೊಂದು ಹಾಲಿವುಡ್​ ಚಿತ್ರಕ್ಕೆ ಸುದೀಪ್​ ಜೊತೆಯಾಗಿದ್ದಾರೆ. ಹೌದು, ಅದಯ ಯಾವ ಸಿನಿಮಾ ಹಾಗೂ ಇತರೆ ವಿವರಗಳಿಗಾಗಿ ಮುಂದೆ ಓದಿ. 

news18-kannada
Updated:October 22, 2019, 5:45 PM IST
Kichcha Sudeep: ಮತ್ತೊಂದು ಹಾಲಿವುಡ್​ ಸಿನಿಮಾಗೆ ಜತೆಯಾದ ಕಿಚ್ಚ ಸುದೀಪ್​..!
ನಟ ಸುದೀಪ್​
  • Share this:
ಕಿಚ್ಚ ಸುದೀಪ್​ ಈಗಾಗಲೇ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಆ ಸಿನಿಮಾದಲ್ಲಿ ಅವರ ಲುಕ್ ಹೇಗಿರಲಿದೆ ಎಂದು ಬಿಡುಗಡೆಯಾಗಿದ್ದ ಪೋಸ್ಟರ್​ ಮೂಲಕ ನೀಡಿದ್ದಾಗಿದೆ.

'ರೈಸನ್​' ಸಿನಿಮಾದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹಳೇ ವಿಷಯ. ಆದರೆ ಈಗ ಮತ್ತೊಂದು ಹಾಲಿವುಡ್​ ಚಿತ್ರಕ್ಕೆ ಸುದೀಪ್​ ಜೊತೆಯಾಗಿದ್ದಾರೆ. ಹೌದು, ಅದಯ ಯಾವ ಸಿನಿಮಾ ಹಾಗೂ ಇತರೆ ವಿವರಗಳಿಗಾಗಿ ಮುಂದೆ ಓದಿ.

'ರೈಸನ್​' ಹಾಲಿವುಡ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​


ಸುದೀಪ್​ ಅವರಿಗೆ ಹಾಲಿವುಡ್ ನಟ ಅರ್ನಾಲ್ಡ್​ ಎಂದರೆ ತುಂಬಾ ಇಷ್ಟವಂತೆ. ಅದರಲ್ಲೂ ಬಾಲ್ಯದಿಂದಲೇ 'ಟರ್ಮಿನೇಟರ್​' ಸಿರೀಸ್​ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದಾರೆ. ಅವರಿಗೆ ಈಗ ಈ ಸಿರೀಸ್​ನ ಸಿನಿಮಾಗೆ ಜತೆಯಾಗುವ ಅವಕಾಶ ಸುದೀಪ್​ ಅವರದ್ದಾಗಿದೆ. ಈ ಕುರಿತು ಸುದೀಪ್​ ಹೇಳುತ್ತಾರೆ ಕೇಳಿ.

ಅರ್ನಾಲ್ಡ್ ದೊಡ್ಡ ಆಕ್ಷನ್ ಹೀರೋಗಳಲ್ಲಿ ಒಬ್ಬರು ಮತ್ತು ನಾನು ಅವರ ಅಭಿಮಾನಿಕೂಡ ಹೌದು. ಟರ್ಮಿನೇಟರ್ ಫ್ರ್ಯಾಂಚೈಸ್ ನನ್ನಲ್ಲಿರುವ ಅಭಿಮಾನಿಯನ್ನು ರೋಮಾಂಚನಗೊಳಿಸಿದೆ. ಫಾಕ್ಸ್‌ಸ್ಟೂಡಿಯಸ್‌ಗಾಗಿ ಕನ್ನಡ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನನಗೆ ಸಂತೋಷವಾಗಿದೆ.#TerminatorDarkFate@FoxStudiosIndia @Schwarzenegger pic.twitter.com/BksUDtbmV3

ಹಾಲಿವುಡ್​ ಸಿನಿಮಾ 'ಟರ್ಮಿನೇಟರ್​ ಡಾರ್ಕ್​ ಫೇಟ್​' ಸಿನಿಮಾ ಇಂಗ್ಲಿಷ್​ ಜತೆಗೆ ಬೇರೆ ಭಾಷೆಗಳಲ್ಲೂ ತೆರೆ ಕಾಣುತ್ತಿದೆ. ಅದರಿಂದಲೇ ಈಗ ಈ ಸಿನಿಮಾದ ತಂಡ ಆಯಾ ಭಾಷೆಗಳಲ್ಲಿ ಒಬ್ಬೊಬ್ಬರು ಸೆಲೆಬ್ರಿಟಿಗಳಿಂದ ಆಯಾ ಭಾಷೆಯ ಟ್ರೈಲರ್​ ಅನ್ನು ಬಿಡುಗಡೆ ಮಾಡಿಸಲಾಗುತ್ತಿದೆ. ಈ ಸಿನಿಮಾದ ತೆಲುಗು ವರ್ಷನ್​ ಅನ್ನು ನಟ ವಿಜಯ್​ ದೇವರಕೊಂಡ ಬಿಡುಗಡೆ ಮಾಡಿದ್ದರು. ಈಗ ಕನ್ನಡದ ವರ್ಷನ್​ ಟ್ರೈಲರ್​ ಅನ್ನು ಕಿಚ್ಚ ಸುದೀಪ್​ ಬಿಡುಗಡೆ ಮಾಡಿದ್ದಾರೆ.



ಅರ್ನಾಲ್ಡ್​ ಅಭಿನಯದ ಈ ಇಂಗ್ಲಿಷ್​ ಸಿನಿಮಾ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ತೆರೆಕಣಾಲಿದೆ. ನವೆಂಬರ್​ 1ರಂದು ವಿಶ್ವದಾದ್ಯಂತ ಈ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

 

 ಎರಡು ವರ್ಷದ ಅನುಭವಗಳ ಗಂಟೂಮೂಟೆ ಬಿಚ್ಚಿಟ್ಟ ಡಾರ್ಲಿಂಗ್​ ತೇಜು



 
First published: October 22, 2019, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories